ಉತ್ತರ ಕರ್ನಾಟಕ
ಸಹ್ಯಾದ್ರಿ, ಆಯುರ್ವೇದದ ಸಸ್ಯಕಾಶಿ, ವನ್ಯಧಾಮ ಎಂದು ಕರೆಯುವ ಕಪ್ಪತ್ತ ಗುಡ್ಡ ಈಗ ‘ಪರಿಸರ ಸೂಕ್ಷ್ಮ ವಲಯ’ ಎಂದು ಕೇಂದ್ರ ಸರಕಾರದಿಂದ ಅಧಿಕೃತವಾಗಿ ಘೋಷಣೆ ಯಾಗಿದೆ. ಇದು ಪರಿಸರವಾದಿಗಳಿಗೆ ಅಪಾರ ಸಂತಸ ತಂದಿದೆ. ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪರ್ವತಗಳಿರುವ ಈ ಕಪ್ಪತ್ತಗುಡ್ಡ ದೇಶದ ಲ್ಲಿಯೇ ಶುದ್ಧ ಗಾಳಿಗೆ ಹೆಸರುವಾಸಿ. ಈ ವನ್ಯಧಾಮದಲ್ಲಿ ಅಪರೂಪದ ವನ್ಯಜೀವಿಗಳು ಹಾಗೂ ಔಷಧಿಯ ಸಸ್ಯಗಳ ನೂರಾರು ಹೆಕ್ಟೇರ್ ಪ್ರದೇಶವಿದೆ. ಇಲ್ಲಿ 500ಕ್ಕೂ ಹೆಚ್ಚು ವಿವಿಧ ಅಪರೂಪದ ಔಷಧಿ ಸಸ್ಯಗಳ ಸಂಗ್ರಹಣೆಗೆ ಮೀಸಲಿಡಲಾಗಿದೆ. ಇದರಿಂದ ಔಷಧಿಯ ಸಸ್ಯಗಳ ವಾಸಸ್ಥಾನ ಎಂದು ಕರೆಯಲಾಗಿದೆ.
ಕಪ್ಪತ್ತಗುಡ್ಡ ವ್ಯಾಪ್ತಿಯು ಜಿಲ್ಲೆಯ ಮುಂಡರಗಿ, ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ವ್ಯಾಪ್ತಿ ಯಲ್ಲಿ ಹರಡಿದ್ದು, ಮುಂಡರಗಿ ತಾಲೂಕಿನ ಸಿಂಗಟಾಲೂರುನಿಂದ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದವರೆಗೆ ಹರಡಿದ್ದು, ಒಟ್ಟು 244.15 ಚದರ ಕಿ.ಮೀ. ವ್ಯಾಪ್ತಿಯಲ್ಲಿದೆ. ಈಗ ಇದು ಪರಿಸರ ಸೂಕ್ಷ್ಮಪ್ರದೇಶದ ವ್ಯಾಪ್ತಿಗೆ 62 ಗ್ರಾಮಗಳು ಬರಲಿದ್ದು,ಕಪ್ಪತಗುಡ್ಡವನ್ನು 322 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದೆ.
ಈ ಹಿಂದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಗಣಿಗಾರಿಕೆಗೆ ಪರವಾನಿಗೆ ನೀಡಲಾಗಿದ್ದ, ಒಟ್ಟು 10 ಕೃಷರ್, 18 ಕ್ವಾರಿ, 2 ಮರುಳು (ಸ್ಯಾಂಡ್) ಗುತ್ತಿಗೆ ಪರವಾನಗಿಯನ್ನು ಕಪ್ಪತ್ತಗುಡ್ಡ ಸಂರಕ್ಷಿತ ವನ್ಯಜೀವಧಾಮ ಎಂದು ಘೋಷಣೆ ಆದ ನಂತರ 2022 ಡಿಸೆಂಬರ್ 5ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ನೇತೃತ್ವದ ಮತ್ತು ಸಕ್ಷಮ ಪ್ರಾಧಿಕಾರ ಆದೇಶಿಸಿತ್ತು.
ನಂತರ ಪರವಾನಿಗೆ ಪಡೆದ ಗಣಿ ಕಂಪನಿಗಳು ನ್ಯಾಯಾಲಯದ ಮೊರೆ ಹೋಗಿ ಇಲಾಖೆಯ ಆದೇಶಕ್ಕೆ ತಡೆ ತರುತ್ತಾರೆ. ಮತ್ತೆ ಒಂದು ವರ್ಷಗಳ ಕಾಲ ಗಣಿಗಾರಿಕೆ ನಡೆಸುತ್ತಾರೆ. ಮತ್ತೆ ಕಪ್ಪತ್ತ ಗುಡ್ಡ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಮಾಡುವಂತಿಲ್ಲ ಎಂಬ ನ್ಯಾಯಾಲಯ ಆದೇಶ ಹೊರಡಿಸಿದ ನಂತರವೂ ಲೈಸೆನ್ಸ್ ಪಡೆದು ನ್ಯಾಯಾಂಗ ಹೋರಾಟ ಮಾಡುತ್ತಾ ಬಂದಿದ್ದರು. ಈಗ ಅಂತಿಮವಾಗಿ ಕಪ್ಪತ್ತಗುಡ್ಡ ರಕ್ಷಣೆಗೆ ಕಾನೂನಿನ ಬೇಲಿ ಹಾಕಲಾಗಿದೆ.
ಕಪ್ಪತ್ತಗುಡ್ಡ ಒಡಲಿನಲ್ಲಿ ಹಾಗೂ ಸುತ್ತಮುತ್ತ ಸಾಕಷ್ಟು ಪ್ರಮಾಣ ಖನಿಜ ಸಂಪನ್ಮೂಲ ಇದೆ ಹೆಮಟೈಟ್, ಲಿಮೋನೈಟ್, ತಾಮ್ರ, ಮ್ಯಾಂಗನೀಸ್ ಮತ್ತು ಚಿನ್ನ ಸೇರಿದಂತೆ ಹಲವು ಖನಿಜಗಳಿವೆ. ಅಲ್ಲದೆ ಸುತ್ತಮುತ್ತ ಕಲ್ಲಿನ ಗುಡ್ಡಗಳು ಹೆಚ್ಚಾಗಿ ಕಂಡು ಬರುತ್ತವೆ. ತುಂಗಭದ್ರಾ ನದಿ ಕಪ್ಪತ್ತ ಗುಡ್ಡದ ಬಳಿ ಹರೊಯುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ಮರಳು ಇಲ್ಲಿ ಸಿಗುತ್ತದೆ. ಈ ಸಂಪತ್ತಿನ ಮೇಲೆ ಹಿಂದಿನಿಂದಲೂ ಗಣಿ ಧಣಿಗಳ ಕಣ್ಣುಬಿದ್ದಿತ್ತು. ಕಪ್ಪತಗುಡ್ಡವನ್ನು ಸಂರಕ್ಷಿಸಲು ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಸ್ವಾಮೀಜಿಗಳು, ಹೋರಾಟಗಾರರು, ಚಿಂತಕರು, ಪರಿಸರ ಪ್ರೇಮಿ ಗಳು, ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಒಗ್ಗೂಡಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಹೋರಾಟಕ್ಕೆ ಕಪ್ಪತಗುಡ್ಡ ವನ್ಯಜೀವಿಧಾಮ ಎಂದು ಕರ್ನಾಟಕ ಸರಕಾರದಿಂದ 2019ರಲ್ಲಿ ಅಧಿಸೂಚನೆ ಹೊರಡಿಸಿತು. ಇದರಿಂದ ಹೋರಾಟಕ್ಕೆ ಜಯ ಸಿಕ್ಕಿತು.
ಜಿಲ್ಲೆಯ ಕಪ್ಪತ್ತಗುಡ್ಡ ವನ್ಯಜೀವಿಧಾಮದ 322 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿಪಡಿಸಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾ ಲಯ ಕರಡು ಅಽಸೂಚನೆ ಹೊರಡಿಸಿದೆ. ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾ ಗಿತ್ತು ನಂತರ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಿದೆ. ಪರಿಸರ ಸೂಕ್ಷ್ಮಪ್ರದೇಶದಲ್ಲಿ ಕಂದಾಯ ಗ್ರಾಮಗಳ 298.89 ಚದರ ಕಿ.ಮೀ. ಹಾಗೂ ಅಧಿಸೂಚಿತ ಅರಣ್ಯ ಪ್ರದೇಶಗಳ 23.80 ಕಿ.ಮೀ ಸೇರಿವೆ. ಈ ಪ್ರದೇಶದಲ್ಲಿ 62 ಗ್ರಾಮಗಳು ಬರಲಿವೆ.
ಪರಿಸರ ಸೂಕ್ತ ಪ್ರದೇಶವನ್ನು ಕನಿಷ್ಠ ಒಂದು ಕಿ.ಮೀ ಯಿಂದ ಗರಿಷ್ಟ 4.30 ಕಿ.ಮೀ ವರೆಗೆ ಗುರುತಿಸ ಲಾಗಿದೆ. ಉತ್ತರ ದಿಕ್ಕಿನಲ್ಲಿ ೧ ಕಿ.ಮೀ. ಯಿಂದ 3.25 ಕಿ.ಮೀ ವರೆಗೆ, ಪಶ್ಚಿಮ ದಿಕ್ಕಿನಲ್ಲಿ ೧ ಕಿ.ಮೀ.ಯಿಂದ 4.30 ಕಿ.ಮೀ ವರೆಗೆ, ವಾಯವ್ಯ ದಿಕ್ಕಿನಲ್ಲಿ 1.96 ಕಿ.ಮೀ ವರೆಗೆ ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿಪಡಿಸಲಾಗಿದ್ದು, ಉಳಿದ ದಿಕ್ಕುಗಳಲ್ಲಿ ೧ ಕಿ.ಮೀ. ಮಾತ್ರ ಇದೆ.
ಇಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಯನ್ನು ಪೂರ್ಣ ನಿಷೇಧಿಸ ಲಾಗುತ್ತದೆ. ಅಲ್ಲದೆ ಹೋಟೆಲ್, ರೆಸಾರ್ಟ್ ಮತ್ತು ವನ್ಯಜೀವಿಗಳಿಗೆ ತೊಂದರೆ ಯಾಗುವ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಬಿದ್ದಂತಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಚಟುವಟಿಕೆ ನಿಯಂತ್ರಿಸಲಾಗುತ್ತದೆ. ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಪರಿಸರ ಸೂಕ್ಷ್ಮ ವಲಯಗಳ ಘೋಷಣೆಯ ಉದ್ದೇಶವೆಂದರೆ, ಆ ವಲಯಗಳಲ್ಲಿ ಕೃಷಿ ಹೊರತು ಪಡಿಸಿ, ಮಾನವ ಚಟುವಟಿಕೆಗಳನ್ನು ನಿಷೇಽಸು ವುದು. ಸಮುದಾಯಗಳ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು. ಆದರೆ ಸಂರಕ್ಷಣೆ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ ವಾಗಿದ್ದು, ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸುವುದು, ಸೂಕ್ಷ್ಮ ವಲಯಗಳಾಗಿ ಕಾರ್ಯನಿರ್ವಹಿಸುವುದು ಇದರಿಂದ ಮಾನವ ಮತ್ತು ವನ್ಯಜೀವಿ ಹಸ್ತಕ್ಷೇಪಕ್ಕೂ ತಡೆ ಒಡ್ಡಿದಂತಾಗಿದೆ.
ಪರಿಸರ ಸೂಕ್ಷ್ಮಪ್ರದೇಶದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ ಜನರು ಯಾವುದೇ ವದಂತಿಗಳಿಗೆ ಕಿವಿಗೋಡದೆ ಆತಂಕಗೊಳ್ಳಬಾರದು. ಇದರಿಂದಾಗಿ ಯಾವುದೇ ನಿಬಂಧಿತ ಚಟುವಟಿಕೆ ನಡೆಯದಂತಾಗಿದೆ. ಇದರಿಂದ ಮಾನವ ಮತ್ತು ವನ್ಯಜೀವಿ ಹಸ್ತ ಕ್ಷೇಪಕ್ಕೆ ತಡೆ ಒಡ್ಡಿದಂತಾಗಿದೆ. ಕಪ್ಪತ್ತಗುಡ್ಡ ಪರಿಸರ ಸೂಕ್ಷ್ಮಪ್ರದೇಶ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಆದರೆ ಕೃಷಿ ಚಟುವಟಿಕೆ ಮಾಡಲು ಯಾವುದೇ ತೊಂದರೆ ಇರುವುದಿಲ್ಲ. ಇದು ಒಳ್ಳೆಯ ಬೆಳವಣಿಗೆ.
