‘ದೊಡ್ಡ ಬಜೆಟ್​ ಸಿನಿಮಾಗಳಿಂದ ಲಾಭ ಇಲ್ಲ : ಕರಣ್‌ ಜೋಹರ್‌

ಮುಂಬೈ :

  ಕರಣ್ ಜೋಹರ್ ಅವರು ತಮ್ಮ ಒಡೆತನದ ಧರ್ಮ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯ ಶೇ.50 ಷೇರನ್ನು ಸೇರಂ ಇನ್​ಸ್ಟಿಟ್ಯೂಟ್​ನ ಮುಖ್ಯಸ್ಥ ಅದಾರ್ ಪೂನಾವಾಲಾಗೆ ಮಾರಿದ್ದರು. ಇದು ಅನೇಕರಿಗೆ ಶಾಕಿಂಗ್ ಎನಿಸಿತ್ತು. ಕರಣ್ ನಿರಂತರವಾಗಿ ನಷ್ಟ ಅನುಭವಿಸಿದ್ದರಿಂದ ಈ ರೀತಿ ಮಾಡಿದರು ಎಂದು ಹೇಳಲಾಗಿತ್ತು. ಈಗ ಈ ನಿರ್ಧಾರದ ಹಿಂದಿನ ಕಾರಣವನ್ನು ಅವರು ಬಿಚ್ಚಿಟ್ಟಿದ್ದಾರೆ.

 
   ಸಣ್ಣ ಬಜೆಟ್​ನ ಸಿನಿಮಾಗಳನ್ನು ಮಾಡಿ ಅದು ಯಶಸ್ಸು ಕಂಡರೆ ಬರೋ ಲಾಭ ಹೆಚ್ಚು. ಮುಂದಿನ ದಿನಗಳಲ್ಲಿ ಕರಣ್ ಜೋಹರ್ ಈ ರೀತಿಯ ಸಿನಿಮಾ ನಿರ್ಮಾಣ ಮಾಡಲು ಬಯಸಿದ್ದಾರೆ. ‘ಮಧ್ಯಮ ಬಜೆಟ್​ನ ಸಿನಿಮಾ ಮಾಡಿದರೆ ಲಾಭ ಜಾಸ್ತಿ ಸಿಗುತ್ತದೆ. ನಾವಾಗೇ ಸಂಪೂರ್ಣವಾಗಿ ಹಣ ಹಾಕಬಹುದು. ಅದು ನಮಗೆ ನಿಜವಾಗಿಯೂ ಊಟ ಕೊಡುತ್ತದೆ. ಈ ರೀತಿಯ ಸಿನಿಮಾಗಳಿಂದಲೇ ಹಣ ಬರೋದು’ ಎಂದಿದ್ದಾರೆ ಅವರು.
   ದೊಡ್ಡ ಬಜೆಟ್ ಸಿನಿಮಾ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ, ಆ ನಂಬಿಕೆ ಸುಳ್ಳು ಎಂದಿದ್ದಾರೆ ಕರಣ್ ಹೋಹರ್. ಕರಣ್ ಜೋಹರ್ ನಿರ್ಮಾಣ ಮಾಡಿದ ‘ಬ್ರಹ್ಮಾಸ್ತ್ರ’ 420 ಕೋಟಿ ರೂಪಾಯಿ ಗಳಿಕೆ ಮಾಡಿತ್ತು ನಿಜ. ಆದರೆ, ಚಿತ್ರದ ಬಜೆಟ್ 400 ಕೋಟಿ ರೂಪಾಯಿ ದಾಟಿತ್ತು. ಹೀಗಾಗಿ, ಈ ಸಿನಿಮಾದಿಂದ ಕರಣ್​ಗೆ ಹೆಚ್ಚಿನ ಲಾಭ ಆಗಿಲ್ಲ. ಈ ಕಾರಣದಿಂದಲೇ 50-80 ಕೋಟಿ ರೂಪಾಯಿ ಬಜೆಟ್​ನ ಸಿನಿಮಾ ಮಾಡುವ ಇಂಗಿತವನ್ನು ಅವರು ಹೊರಹಾಕಿದ್ದಾರೆ.

Recent Articles

spot_img

Related Stories

Share via
Copy link