ತಲಾದಾಯದಲ್ಲಿ ಕರ್ನಾಟಕ 14ನೇ ಸ್ಥಾನದಲ್ಲಿ : ಪಿ ಚಿದಂಬರಂ

ಬೆಂಗಳೂರು

     ಕರ್ನಾಟಕ ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ಅಗ್ರ ಸ್ಥಾನದಲ್ಲಿಲ್ಲ. ತಲಾದಾಯದಲ್ಲಿ 14ನೇ ಸ್ಥಾನದಲ್ಲಿದ್ದು, ಶಿಕ್ಷಣದಲ್ಲಿ 20, ಪರಿಸರ ವಿಚಾರದಲ್ಲಿ 19-25 ನಡುವೆ ಸ್ಥಾನ ಪಡೆದಿದೆ. ಬಿಜೆಪಿ ರಾಜ್ಯದ ಭವಿಷ್ಯಕ್ಕೆ ಮಾರಕವಾಗಿದ್ದು, ಈ ಬಾರಿ ಮತದಾರರು ಬದಲಾವಣೆಗೆ ಮತ ಹಾಕಬೇಕು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರಿಗೆ ವಿಶ್ವೇಶ್ವರಯ್ಯ ಉದ್ಯೋಗ ಯೋಜನೆ ಭರವಸೆ, ಆಟೋ ಚಾಲಕರಿಗೆ ಶೇ.50% ಎಲೆಕ್ಟಿçಕ್ ಆಟೋ ಸಬ್ಸಿಡಿ ನೀಡಿಲ್ಲ. ರಾಜ್ಯದ ಆರ್ಥಿಕತೆ ಶೋಚನೀಯವಾಗಿದ್ದು, ಸಾಲದ ಪ್ರಮಾಣ 5.19 ಲಕ್ಷ ಕೋಟಿಗೆ ಏರಿಕೆಯಾಗಿದ್ದು, 2020ರ ನಂತ 1258 ಕಂಪನಿಗಳು ಬಂದ್ ಆಗಿವೆ. 83,191 ಉದ್ಯೋಗಗಳು ನಷ್ಟವಾಗಿವೆ. ಇನ್ನು 13 ಸಾರ್ವಜನಿಕ ಉದ್ದಿಮೆಗಳು ನಿಷ್ಕಿçಯವಾಗಿವೆ. 37 ಸಾರ್ವಜನಿಕ ಉದ್ದಿಮೆಗಳು 6 ಸಾವಿರ ಕೋಟಿ ನಷ್ಟ ಅನುಭವಿಸಿವೆ. ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಬೆಂಗಳೂರಿನ ಮಾನ ದೇಶದ ಮುಂದೆ ಹರಾಜಾಗಿತ್ತು. ಇದರಿಂದ ಅನೇಕ ಕಂಪನಿಗಳು ಬೇರೆ ರಾಜ್ಯಗಳತ್ತ ವಲಸೆ ಹೋಗುವಂತಾಗಿದೆ ಎಂದರು.

    ರಾಜ್ಯದಲ್ಲಿ ಜನರ ಗಮನವನ್ನು ಸಮಸ್ಯೆಗಳಿಂದ ಬೇರೆಡೆಗೆ ಎಳೆಯುವ ಪ್ರಯತ್ನಗಳಾಗುತ್ತಿವೆ. ಹೀಗಾಗಿ ಇಂದು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಜರೂರಿದೆ. ಪ್ರತಿ ಚುನಾವಣೆಯಲ್ಲಿ ಜನರು ತಮ್ಮ ಜೀವನ ಉತ್ತಮವಾಗಿದೆಯೇ ಎಂಬ ಪ್ರಶ್ನೆಯನ್ನು ಮತದಾರರು ಕೇಳಿಕೊಳ್ಳಬೇಕು. ನಂತರ ಪ್ರಸ್ತುತ ಪರಿಸ್ಥಿತಿ ಮುಂದುವರಿದರೆ, ನಮ್ಮ ಹಾಗೂ ನಮ್ಮ ಮಕ್ಕಳ ಮುಂದಿನ ಜೀವನ ಸುಧಾರಣೆ ಕಾಣಲಿದೆಯೇ ಎಂದು ಕೇಳಿಕೊಳ್ಳಬೇಕು. ಈ ಎರಡು ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಪಡೆದುಕೊಂಡು ಮತ ಚಲಾಯಿಸಬೇಕು ಎಂದರು.

    ರಾಜ್ಯದ ಜನ ಬಿಜೆಪಿ ಸರ್ಕಾರವನ್ನು ಆರಿಸಿರಲಿಲ್ಲ. ಕುದುರೆ ವ್ಯಾಪಾರ, ಮೋಸ ಹಾಗೂ ಹಣಬಲದಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿ ಹಾಗೂ ಸರ್ಕಾರದ ಗುರಿ ಹಣ ಮಾಡುವುದಾಗಿದೆ. ಹೀಗಾಗಿ ರಾಜ್ಯದಲ್ಲಿ ನಿರಂತರವಾಗಿ ಹಗರಣಗಳ ಸರಮಾಲೆ ಇದೆ. ವಿದ್ಯಾರ್ಥಿಗಳು ಶಿಕ್ಷಣ ವಂಚಿರಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತ ಲಾಪ್ ಟಾಪ್ ಭರವಸೆ ಈಡೇರಿಲ್ಲ. ಕೋವಿಡ್ ಸಮಯದಲ್ಲಿ ಜನರ ಸಂಕಷ್ಟಕ್ಕೆ ಬಿಜೆಪಿ ಸರ್ಕಾರದ ನೆರವಿನ ಹಸ್ತ ತೀರಾ ನೀರಸವಾಗಿತ್ತು. ದುರಾಡಳಿತಕ್ಕೆ ಈ ಸಮಯ ಸಾಕ್ಷಿಯಾಗಿತ್ತು ಎಂದರು.

     ಕೃಷಿ ಕ್ಷೇತ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿತ್ತು. ಆದರೆ ರೈತರು ಮತ್ತಷ್ಟು ಬಡವರು, ಸಾಲಗಾರರಾಗಿದ್ದಾರೆ. 2020-21ರ ರಾಷ್ಟ್ರೀ ಯ ಅಪರಾಧ ಬ್ಯೂರೋ ಅಂಕಿ ಅಂಶಗಳ ಪ್ರಕಾರ 20%ರಷ್ಟು ಕರ್ನಾಟಕದ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ವಿಳಂಬದಿಂದ ಲಕ್ಷಾಂತರ ರೈತರ ಜೀವನದ ಮೇಲೆ ಪರಿಣಾಮ ಬೀರಿದೆ. ಕಬ್ಬು ಬೆಳೆಗಾರರ ಬಾಕಿ 4-5 ವರ್ಷಗಳಿಂದ ಬಾಕಿ ಉಳಿದಿದೆ. ರೈತ ಬಂಧು ಆವರ್ತ ನಿಧಿ ಬೆಂಬಲ ಬೆಲೆ ಏನಾಯ್ತು? ಮಂಡ್ಯದಲ್ಲಿ ಆಹಾರ ಪಾರ್ಕ್, ಪ್ರತಿ ಜಿಲ್ಲೆಯಲ್ಲಿ ಸಂಜೀವಿನಿ ಆರ್ಗಾನಿಕ್ ಸ್ಟೋರ್ ಹಾಗೂ ಪಶು ಮೇವಿನ ಘಟಕ ಸ್ಥಾಪನೆ ಭರವಸೆಯಾಗಿಯೇ ಉಳಿದಿದೆ ಎಂದರು.

     ಕರ್ನಾಟಕವನ್ನು ಧರ್ಮದ ಹೆಸರಿನಲ್ಲಿ ಕೋಮು ಸಂಘರ್ಷದ ಪ್ರಯೋಗಲಾಯವನ್ನಾಗಿ ಮಾಡಿಕೊಂಡು ಸಮಾಜ ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಹಿಜಾಬ್, ಹಲಾಲ್, ಲವ್ ಜಿಹಾದ್ ಕುರಿತು ಕಾಲಹರಣ ಮಾಡಿದ್ದಾರೆ. ಐದು ಜಿಲ್ಲೆಗಳಲ್ಲಿ ವಾಲ್ಮೀಕಿ ಭವನ, ಈಡಿಗ ಹಾಗೂ ಬಿಲ್ಲವ ಸಮುದಾಯಗಳಿಗೆ ಕ್ಷೇಮಾಭಿವೃದ್ಧಿಗೆ ನಾರಯಣ ಕ್ಷೇಮಾಭಿವೃದ್ಧಿ ಮಂಡಳಿ, 400 ಕೋಟಿ ಮೊತ್ತದ ವೃದ್ಧಾಶ್ರಮ ಉನ್ನತೀಕರಣ ಯೋಜನೆಗಳು ಏನಾದವು? ಎಂದು ಪಿ. ಚಿದಂಬರಂ ಪ್ರಶ್ನಿಸಿದರು.

     ಇನ್ನು ಡಬಲ್ ಇಂಜಿನ್ ಸರ್ಕಾರ ಅನಾಹುಗಳನ್ನು ಮಾಡಿವೆ. ಈ ಡಬಲ್ ಇಂಜಿನ್ ಸರ್ಕಾರ ನಿರುದ್ಯೋಗ ಪ್ರಮಾಣವನ್ನು 7.8%ರಷ್ಟು ಏರಿಕೆ ಮಾಡಿದೆ. ಕಾರ್ಮಿಕರ ಭಾಗವಹಿಸುವಂಕಿ ಪ್ರತಿ ತಿಂಗಳು ಇಳಇಕೆಯಾಗುತ್ತಿದೆ. ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಾವಾಗಿದೆ. ರಾಜ್ಯವನ್ನು ಮೋದಿ ನಿಯಂತ್ರಣಕ್ಕೆ ನೀಡಿ ಎಂದು ಗೃಹಮಂತ್ರಿಗಳು ಹೇಳುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap