ರಾಜ್ಯದಲ್ಲಿ ಮತ್ತೆ ಲಾಕ್’ಡೌನ್ ವಿಸ್ತರಣೆ ; 500 ಕೋಟಿ ವಿಶೇಷ ಪ್ಯಾಕೇಜ್

ಬೆಂಗಳೂರು : 

      ಕೋವಿಡ್ ಸಾಂಕ್ರಾಮಿಕ ಸೋಂಕನ್ನು ಸಂಪೂರ್ಣ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಕ್ತವೆಂದು ಪರಿಗಣಿಸಿ  ಜೂನ್ 7 ರಿಂದ ರಾಜ್ಯದಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ಮುಂದುವರೆಸಲಾಗಿದೆ.

      ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, 500 ಕೋಟಿ ವಿಶೇಷ ಎರಡನೇ ಪ್ಯಾಕೇಜ್ ಇಂದು ಘೋಷಣೆ ಮಾಡಲಾಗುತ್ತಿದೆ. 7-06-2021ರಿಂದ ಶೇ.30ರಷ್ಟು ಕೋವಿಡ್ ವರ್ತನೆ ಪಾಲಿಸಿ ತೆರೆಯಲು ಅನುಮತಿಸಲಾಗಿದೆ. ಕೋವಿಡ್ ಪ್ಯಾಕೇಜ್ -2.. ಪವರ್ ಲೂಮ್ ನೇಕಾರರಿಗೆ ಇಬ್ಬರು ಕೆಲಸಗಾರರಿಗೆ ಮೂರದಂತೆ ಮೂರು ಸಾವಿರ ಪರಿಹಾರ ನೀಡಲಾಗುತ್ತದೆ. ಚಲನ ಚಿತ್ರ, ದೂರು ದರ್ಶನ ಮಾಧ್ಯಮಿತ್ರಿಗೆ 3 ಸಾವಿರ ನೀಡಲಾಗುತ್ತದೆ. ಮೀನುಗಾರರಿಗೆ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೊಂದಾಯಿಸಿದಂತ ಮೀನುಗಾರರಿಗೆ ತಲಾ 3 ಸಾವಿರ ನೀಡಲಾಗುತ್ತದೆ ಎಂದರು. ಇನ್ ಲ್ಯಾಂಡ್ ದೋಣಿ ಮಾಲೀಕರಿಗೆ ಮೂರು ಸಾವಿರ ಕೂಡ ನೀಡಲಾಗುತ್ತದೆ ಎಂದರು.

     ಮುಜುರಾಯಿ ದೇವಸ್ಥಾನದ ಅರ್ಚಕರು, ಸಿಬ್ಬಂದಿಗಳಿಗೆ ಸಿ ವರ್ಗದ ದೇವಸ್ಥಾನದಲ್ಲಿ ಕೆಲಸ ಮಾಡುವಂತ ತಲಾ 3 ಸಾವಿರ ನೀಡಲು ನಿರ್ಧಾರ ಮಾಡಲಾಗಿದೆ. ಮಸೀದಿಯಲ್ಲಿನ ಪೇಜಿಸಿಮೋಗಳಿಗೂ ತಲಾ 3 ಸಾವಿರ ಕೊಡಲು ನಿರ್ಧಾರ ಮಾಡಲಾಗಿದೆ ಎಂದರು.

      ಆಶಾ ಕಾರ್ಯಕರ್ತರು ಕೂಡ ಕೊರೋನಾ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ 3 ಸಾವಿರ ನೀಡಲಾಗುತ್ತದೆ. ಇದರಿಂದ 42,574 ಕಾರ್ಯಕರ್ತೆಯರಿಗೆ ಸಹಾಯ ಆಗಲಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ನೀಡಲಾಗುತ್ತದೆ ಎಂದರು.

     ಎಲ್ಲಾ ಶಾಲೆಗಳು ಮುಚ್ಚಿದ್ದರೂ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಅನುಧಾನ ರಹಿತ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ 5 ಸಾವಿರ ಪರಿಹಾರ. ನ್ಯಾಯವಾಧಿಗಳ ಕಲ್ಯಾಣ ನಿಧಿಗೆ 5 ಕೋಟಿ ನೀಡಲು ನಿರ್ಧರಿಸಲಾಗಿದೆ ಎಂದರು.

     ಕೈಗಾರಿಕೆಗಳಿಗೆ ಜೂನ್ 2021 ನಿಗದಿತ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಎಂಎಸ್‌ಎಂಇ ಕೈಗಾರಿಕೆ ಹೊರತುಪಡಿಸಿ, ಇತರೆ ಕೈಗಾರಿಕೆಗಳ ಗ್ರಾಹಕರಿಗೆ ಮೇ, ಜೂನ್ ತಿಂಗಳ ವಿದ್ಯುತ್ ಶುಲ್ಕ ಪಾವತಿಯಿಂದ ಜುಲೈ 30ರವರೆಗೆ ವಿನಾಯ್ತಿ ನೀಡಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap