ಬೆಂಗಳೂರು:
ಮೇ 24ರಿಂದ ಜೂ.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿ ಮಾಡಲಾಗಿದೆ ಅಂತ ಬೆಂಗಳೂರಿನಲ್ಲಿ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ
ಅವರು ಇಂದು (ಶುಕ್ರವಾರ) ಸಮಗ್ರ ಶಿಕ್ಷಣ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
1. ಮೇ 24: ಭೌತಶಾಸ್ತ್ರ, ಇತಿಹಾಸ
2. ಮೇ 25: ಮೈನಾರಿಟಿ ಲಾಂಗ್ವೇಜಸ್
3. ಮೇ 26: ಲಾಜಿಕ್, ಹೋಮ್ ಸೈನ್ಸ್, ಬೇಸಿಕ್ ಮ್ಯಾತ್ಸ್, ಜಿಯಾಲಜಿ ಪರೀಕ್ಷೆ
4. ಮೇ 27: ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ
5. ಮೇ 28: ಉರ್ದು
6. ಮೇ 29: ಯಾವ ಪರೀಕ್ಷೆ ನಿಗದಿಯಾಗಿಲ್ಲ
7. ಮೇ 31: ರಸಾಯನಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್
8. ಜೂ.1: ಕರ್ನಾಟಕ ಸಂಗೀತ
9. ಜೂ.2: ಸೈಕಾಲಜಿ, ಬಯಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
10.ಜೂ.3: ಹಿಂದಿ
11. ಜೂ.4: ಎಕನಾಮಿಕ್ಸ್
12. ಜೂ.5: ಕನ್ನಡ
13.ಜೂ.7: ಇಂಗ್ಲಿಷ್
14.ಜೂ.8: ಬ್ಯೂಟಿ & ವೆಲ್ನೆಸ್, ಹೆಲ್ತ್ಕೇರ್, ರೀಟೇಲ್ ಆಟೋಮೊಬೈಲ್, ಇನ್ಫಾರ್ಮೇಷನ್ ಟೆಕ್ನಾಲಜಿ
15.ಜೂ.9: ಸಮಾಜ, ಸಂಖ್ಯಾ ಶಾಸ್ತ್ರ
ಮೇ 24ರಿಂದ ಜೂ.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಈ ನಡುವೆ, ದಿನಾಂಕ ಬಗ್ಗೆ ಆಕ್ಷೆಪಣೆಗಳಿದ್ದರೆ ಸಲ್ಲಿಸಬಹುದು ಎಂದು ಸಹ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
