‘ಕಾವೇರಿ 2.0’ ವೆಬ್ ಸೈಟ್ ನಲ್ಲಿ ಸರ್ವರ್ ಡೌನ್ ಸಮಸ್ಯೆ….!

ಬೆಂಗಳೂರು:

   ಕರ್ನಾಟಕದಾದ್ಯಂತ ಆಸ್ತಿ ನೋಂದಣಿ ಕಾರ್ಯ ಶನಿವಾರ (ಫೆಬ್ರವರಿ 1) ಮತ್ತು ಸೋಮವಾರ (ಫೆಬ್ರವರಿ 3) ಸ್ಥಗಿತಗೊಂಡಿದೆ. ಪ್ರಕ್ರಿಯೆಯನ್ನು ಸುಗಮಗೊಳಿಸುವ ವೆಬ್‌ಸೈಟ್‌ನ ಸರ್ವರ್ ಡೌನ್ ಆಗಿದ್ದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯುಂಟಾಯಿತು ಎಂದು ಬಹು ಮೂಲಗಳು ತಿಳಿಸಿವೆ.

   ರಾಜ್ಯದಲ್ಲಿ ಆಸ್ತಿಗಳ ನೋಂದಣಿ ಆನ್‌ಲೈನ್‌ನಲ್ಲಿ ಮಾತ್ರ ಮಾಡಲಾಗುತ್ತದೆ. ಕಾವೇರಿ 2.0 ಪೋರ್ಟಲ್‌ಗೆ ಸರ್ವರ್ ಡೌನ್ ಆಗಿದ್ದು, 256 ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿಯ ಮೇಲೆ ಪರಿಣಾಮ ಬೀರಿದೆ. ನೋಂದಣಿಗಾಗಿ ವಾರಾಂತ್ಯದಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಬಯಸಿದ್ದವರಿಗೆ ಸಾಧ್ಯವಾಗಲಿಲ್ಲ. ಆಸ್ತಿಗಳ ಕಾಗದ ನೋಂದಣಿಗೆ ಅವಕಾಶವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು.

   ಸಮಸ್ಯೆಯನ್ನು ಸರಿಪಡಿಸಲು ಎಂಜಿನಿಯರ್‌ಗಳು ಸೋಮವಾರ ತಡರಾತ್ರಿಯವರೆಗೆ ಕೆಲಸ ಮಾಡುತ್ತಿದ್ದರು. ಇಂದು ಸಮಸ್ಯೆ ಬಗೆಹರಿಯುತ್ತದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ. ತಮ್ಮ ಆಸ್ತಿಯನ್ನು ನೋಂದಾಯಿಸಲು ಪ್ರಯತ್ನಿಸಿದ ಅಜಿತ್ ಆನಂದ್ ಅವರು ಎಕ್ಸ್ ಪೋಸ್ಟ್ ನಲ್ಲಿ ಶನಿವಾರ ಯಾವುದೇ ನೋಂದಣಿಗಳು ನಡೆದಿಲ್ಲ ಎಂದಿದ್ದಾರೆ.

   ಇಂದು ಸಹ ಸರ್ವರ್ ಡೌನ್ ಆಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿ ಸರ್ವರ್‌ಗಳಿಗೆ ಇಷ್ಟು ದೀರ್ಘಕಾಲದವರೆಗೆ ಸರ್ವರ್ ಡೌನ್ ಆಗಿದ್ದು ನೋಡಿಲ್ಲ. ಕಳೆದ ವರ್ಷವಿಡೀ ಕಾವೇರಿ 2.0 ಸಾಫ್ಟ್‌ವೇರ್‌ನಲ್ಲಿ ಹಲವಾರು ಬಾರಿ ದೋಷಗಳು ಕಂಡುಬಂದಿವೆ. ಆನ್ ಲೈನ್ ನಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದರಿಂದ ಯೋಜನೆ ಶುರುವಾದ ಸಂದರ್ಭದಲ್ಲಿ ಹೀಗೆ ಆಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಸಮಸ್ಯೆ 2025ರಲ್ಲಿಯೂ ಮುಂದುವರಿಯುವಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಶಪಿಸುತ್ತಿದ್ದಾರೆ.

 

Recent Articles

spot_img

Related Stories

Share via
Copy link