3 ತಿಂಗಳಲ್ಲಿ ಕಾವೇರಿ-2 ತಂತ್ರಾಂಶ ಕಾರ್ಯರಂಭ : ಆರ್.ಅಶೋಕ್

ಬೆಂಗಳೂರು

      ಒಂದೇ ಆಸ್ತಿಯನ್ನು ಹಲವರಿಗೆ ನೋಂದಣಿ ಮಾಡಿಕೊಡುವ ಜಾಲವನ್ನು ಮಟ್ಟ ಹಾಕಲು ಮುಂದಿನ ಮೂರು ತಿಂಗಳಲ್ಲಿ ಕಾವೇರಿ-2 ತಂತ್ರಾಂಶ ರಾಜ್ಯದ ಎಲ್ಲ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದ್ದಾರೆ.

    ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಹತ್ತೇ ನಿಮಿಷಗಳಲ್ಲಿ ಪೂರ್ಣಗೊಳಿಸುವ ಮಹತ್ವಾಕಾಂಕ್ಷೆಯ ಕಾವೇರಿ-2 ತಂತ್ರಾAಶ ಯೋಜನೆಗೆ ಚಾಲನೆ ನೀಡಿದ ಅವರು,ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಆಸ್ತಿ ನೋಂದಣಿಗಾಗಿ ಜನರು ದಿನಗಟ್ಟಲೆ ಅಲೆದಾಡುವ ಪರಿಸ್ಥಿತಿ ಇತ್ತು.

    ಆದರೆ ಕಾವೇರಿ-2 ಯೋಜನೆಯ ಮೂಲಕ ಇನ್ನು ಮುಂದೇ ಹತ್ತೇ ನಿಮಿಷಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಇಂದು ಚಾಲನೆ ಪಡೆದ ಯೋಜನೆ ಮುಂದಿನ ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಜಾರಿಯಾಗಲಿದ್ದು,ಆಸ್ತಿ ನೋಂದಣಿ ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂದು ವಿವರಿಸಿದರು. ಆಸ್ತಿ ನೋಂದಣಿ ವ್ಯವಹಾರ ಇನ್ನು ಮುಂದೆ ಪಾರದರ್ಶಕವಾಗಿ ನಡೆಯಲಿದ್ದು ,ಮೋಸದಿಂದ ಒಂದು ಆಸ್ತಿಯನ್ನು ಹಲವರಿಗೆ ಮಾರಾಟ ಮಾಡುವ ಜಾಲಕ್ಕೆ ಕಡಿವಾಣ ಬೀಳಲಿದೆ ಎಂದು ಸಚಿವ ಅಶೋಕ್ ಇದೇ ಸಂದರ್ಭದಲ್ಲಿ ವಿವರ ನೀಡಿದರು.

     ಇನ್ನು ಮುಂದೆ ಯಾವುದೇ ಆಸ್ತಿ ನೋಂದಣಿ ಮಾಡಿಸಬೇಕೆಂದರೆ ಜನರು ತಮಗೆ ಬೇಕಾದ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಗುರುತಿಸಿ ಆನ್ ಲೈನ್ ನಲ್ಲಿ ಅರ್ಜಿಯನ್ನು ರವಾನಿಸಬೇಕು. ನೋಂದಣಿಯಾಗಬೇಕಾದ ಆಸ್ತಿಗೆ ಸಂಬಂಧಿಸಿದ ವಿವರವನ್ನು ಅರ್ಜಿಯಲ್ಲಿ ನಮೂದಿಸಿ ಕಳಿಸಿದರೆ ಉಪನೋಂದಣಾಧಿಕಾರಿಗಳು ಅದನ್ನುಪರಿಶೀಲಿಸಿ ಯಾವ ತೊಡಕೂ ಇಲ್ಲವೆಂದರೆ ನೋಂದಣಿ ಕಾರ್ಯಕ್ಕೆ ಅಗತ್ಯವಾದ ಮಾಹಿತಿಯನ್ನು ನೀಡುತ್ತಾರೆ.

     ಒಂದು ವೇಳೆ ಸದರಿ ಆಸ್ತಿಯಲ್ಲಿ ಏನೇ ತೊಡಕುಗಳು ಇದ್ದರೂ ಆ ಕುರಿತು ವಿವರ ನೀಡುತ್ತಾರೆ .ಹೀಗಾಗಿ ಮೋಸದ ವ್ಯವಹಾರ ಮಾಡುವವರನ್ನು ಆರಂಭದಲ್ಲೇ ಪತ್ತೆ ಮಾಡಿದಂತಾ ಗುತ್ತದೆ.ಮತ್ತು ಜನರೂ ಅನಗತ್ಯವಾಗಿ ಆಸ್ತಿ ಖರೀದಿ ಮಾಡುವ,ನೋಂದಣಿ ಮಾಡಿಸುವ ಸಮಸ್ಯೆಗೆ ಬೀಳದಂತಾಗುತ್ತದೆ. ಆದರೆ ಆಸ್ತಿ ನೋಂದಣಿಗೆ ಯಾವುದೇ ಸಮಸ್ಯೆ ಇಲ್ಲವೆಂದರೆ ಸದರಿ ಆಸ್ತಿಯ ಮಾರ್ಗಸೂಚಿ ಮೌಲ್ಯದಿಂದ ಹಿಡಿದು ಪ್ರತಿಯೊಂದು ವಿವರವೂ ಜನರಿಗೆ ರವಾನೆಯಾಗುತ್ತದೆ.

    ಹೀಗಾಗಿ ಜನರು ಸದರಿ ನೋಂದಣಿಗೆ ಅಗತ್ಯವಾದ ಹಣವನ್ನು ಚಲನ್ ಮೂಲಕ ಕಟ್ಟಿ ನೋಂದಣಿಗೆ ದಿನಾಂಕವನ್ನು ನಿಗದಿ ಮಾಡಿಕೊಳ್ಳಬಹುದು. ಈ ಮುಂಚೆ ಉಪನೋಂದಣಾಧಿಕಾರಿಗಳ ಸಮ ಯಾವಕಾಶವನ್ನು ನೋಡಿಕೊಂಡು ಜನರು ನೋಂದಣಿಗೆ ಮುಂದಾಗಬೇಕಾಗುತ್ತಿತ್ತು. ಆದರೆ ಜನ ಮನೆಯಲ್ಲಿ ಕುಳಿತೇ ತಮ್ಮ ಆಸ್ತಿ ನೋಂದಣಿಯ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಿಕೊಂಡು ಸರಿಯಾದ ಕಾಲಕ್ಕೆ ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋದರೆ ಹತ್ತೇ ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇದಾದ ನಂತರ ನೋಂದಣಿಗೆ ಸಂಬಂಧಪಟ್ಟ ದಾಖಲೆ ಪತ್ರಗಳು ನೋಂದಣಿ ಮಾಡಿಸಿದವರ ಖಾತೆಯ ಡಿಜಿ ಲಾಕರ್ ನಲ್ಲಿರುತ್ತದೆ ಎಂದು ಸಚಿವ ಅಶೋಕ್ ನುಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap