1000 ಇಲಿ ಕೊಂದು ಬೆಕ್ಕು ಹಜ್‌ ಗೆ ಹೋದಂತೆ : ಕವಿತಾ

ಹೈದರಾಬಾದ್:

     ಕಾಂಗ್ರೆಸ್‌ ಪಕ್ಷ 62 ವರ್ಷ ದೇಶವನ್ನು ಆಳಿತು. ಗರೀಬಿ ಹಠಾವೋ ಘೋಷಣೆಯ ಹೊರತಾಗಿಯೂ ಬಡವರು ಬಡವರಾಗಿಯೇ ಉಳಿದರು ಎಂದು ಹೇಳಿದರು. 2024ರ ಲೋಸಕಭೆ ಚುನಾವಣೆಯಲ್ಲಿ ನಿಜಾಮಾಬಾದ್‌ನಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಿದ ಬಳಿಕ ಕ್ಷೇತ್ರಕ್ಕೆ ಅವರ ಮೊದಲ ಭೇಟಿ ಇದಾಗಿದೆ.

    ಸಾವಿರ ಇಲಿಗಳನ್ನು ಕೊಂದು ಬೆಕ್ಕೊಂದು ಹಜ್‌ ಯಾತ್ರೆಗೆ ಹೋದಂತೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಭಾರತ್‌ ಜೋಡೊ ಯಾತ್ರೆ ಎಂದು  ಬಿಆರ್‌ಎಸ್‌ ಪಕ್ಷದ ನಾಯಕಿ ಕವಿತಾ ಅವರು ಟೀಕಿಸಿದ್ದಾರೆ.

    ನಿಜಾಮಾಬಾದ್‌ಗೆ ಬಂದ ಅವರನ್ನು ಬಿಆರ್‌ಎಸ್ ಪಕ್ಷದ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು. ರಾಹುಲ್ ಗಾಂಧಿ ಕಾಲ್ನಡಿಗೆ ಯಾತ್ರೆ ಮಾಡಿದರು. ಅದು ನನಗೆ ಹೇಗನ್ನಿಸಿತ್ತು ಗೊತ್ತಾ? ಸಾವಿರ ಇಲಿಗಳನ್ನು ಕೊಂದು ಬೆಕ್ಕೊಂದು ಹಜ್‌ ಯಾತ್ರೆ ಮಾಡಿದಂತೆ’ ಎಂದು ವ್ಯಂಗ್ಯವಾಡಿದರು.

    ಕಳೆದ 10 ವರ್ಷದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ರಾಜ್ಯದಲ್ಲಿ ಉಂಟು ಮಾಡಿದ ಕ್ರಾಂತಿಯನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಅಲ್ಪಸಂಖ್ಯಾತ ಸಹೋದರ, ಸಹೋದರಿಯರು ಯಾರಿಗೆ ಮತ ಹಾಕಬೇಕು ಎಂಬುದನ್ನು ಯೋಚಿಸಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap