SRH ಕಾವ್ಯ ಮಾರನ್‌ ಬಗ್ಗೆ ನಿಮಗೆಷ್ಟು ಗೊತ್ತ……?

ಹೈದರಾಬಾದ್​:

    ಎಸ್​ಆರ್​ಎಚ್ ತಂಡದ ಮಾಲಕಿ ಕಾವ್ಯಾ ಮಾರನ್​ ಅವರನ್ನು ಕ್ರೀಡಾಭಿಮಾನಿಗಳಿಗೆ ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ಐಪಿಎಲ್​ ನೋಡುವವರಿಗೆ ಆಕೆ ಚಿರಪರಿಚಿತೆ. ಕ್ರಿಕೆಟ್​ ನೋಡದವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯಾ ಮಾರನ್​ ಸೌಂದರ್ಯಕ್ಕೆ ಫಿದಾ ಆಗುತ್ತಾರೆ.

    ಎಸ್​ಆರ್​ಎಚ್​ ತಂಡದ ಸಿಇಒ ಆಗಿರುವ ಕಾವ್ಯಾ ಮಾರನ್, ತಮಿಳುನಾಡಿನ ಖ್ಯಾತ ಉದ್ಯಮಿ ಕಲಾನಿಧಿ ಮಾರನ್ ಅವರ ಪುತ್ರಿ. ಕಾವ್ಯಾ ಮಾರನ್ ಅವರು ಕ್ರಿಕೆಟ್ ಅಭಿಮಾನಿಗಳಿಗೆ ಹಾಟ್ ಫೇವರಿಟ್ ಆಗಿದ್ದಾರೆ. ಹೀಗಾಗಿ ಆಕೆಗೆ ಅಡ್ಡಹೆಸರು ಇಟ್ಟಿದ್ದಾರೆ. ನಮ್ಮ ‘ಕಾವ್ಯಾ ಪಾಪಾ’ಳ ಮುಖದಲ್ಲಿ ಮೂಡುವ ಖುಷಿ ನೋಡುವುದಕ್ಕೋಸ್ಕರ ನಾವು ಕ್ರಿಕೆಟ್ ಮ್ಯಾಚ್ ನೋಡುತ್ತೇವೆ ಎನ್ನುತ್ತಾರೆ ಅಭಿಮಾನಿಗಳು. ಎಸ್‌ಆರ್‌ಎಚ್ ಪಂದ್ಯಗಳು ನಡೆಯುವ ಕ್ರೀಡಾಂಗಣದಲ್ಲಿ ಕಾವ್ಯಾ ಪಾಪಾ ಪ್ರತಿ ಬಾಲ್‌ಗೆ ನೀಡುವ ಎಕ್ಸ್‌ಪ್ರೆಶನ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತೀಚೆಗೆ ಕಾವ್ಯಾ ಮಾರನ್ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಕಾವ್ಯಾ ಮಾರನ್ ಈಗಾಗಲೇ ಹಲವರ ಜೊತೆ ಡೇಟ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

   ಕಾವ್ಯಾ ಮಾರನ್ ಅವರ ವೈಯಕ್ತಿಕ ಜೀವನದ ಬಗ್ಗೆ ಯಾರಿಗೂ ಹೆಚ್ಚು ತಿಳಿದಿಲ್ಲ. ಕಲಾನಿಧಿಯ ಮಗಳೆಂದು ಈ ಜಗತ್ತಿಗೆ ಪರಿಚಯವಾದರಷ್ಟೇ. ಆದರೆ, ಐಪಿಎಲ್​ನಿಂದಾಗಿ ಕಾವ್ಯಾ ತನ್ನದೇಯಾದ ಕ್ರೇಜ್​ ಸೃಷ್ಟಿಸಿದ್ದಾರೆ. ಕಾವ್ಯಾ ಅವರಿಗೆ 32 ವರ್ಷ ವಯಸ್ಸು. ಪ್ರಸ್ತುತ ಒಂಟಿಯಾಗೇ ಇದ್ದಾರೆ. ಆದರೆ, ಹಲವು ವರ್ಷಗಳಿಂದ ಕಾವ್ಯಾ ಮಾರನ್ ಸುತ್ತ ಹಲವು ಡೇಟಿಂಗ್ ವದಂತಿಗಳು ಕೇಳಿ ಬರುತ್ತಿವೆ. ಕಾವ್ಯಾ ನಿಜವಾಗಿಯೂ ಎಷ್ಟು ಜನರೊಂದಿಗೆ ಡೇಟಿಂಗ್ ಮಾಡಿದ್ದಾರೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಆದರೆ, ಈ ಉತ್ತರ ಹಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿದೆ. 

   ಕಾವ್ಯಾ ಮತ್ತು ಕಾಲಿವುಡ್​ ಸಂಗೀತ ನಿರ್ದೇಶಕ ಅನಿರುದ್ಧ್ ಪ್ರೀತಿಸುತ್ತಿದ್ದಾರೆ ಎಂದು ಹಿಂದೊಮ್ಮೆ ಎಲ್ಲರೂ ಭಾವಿಸಿದ್ದರು. ಆದರೆ, ಈ ಸುದ್ದಿ ಕ್ರಮೇಣ ತಣ್ಣಗಾಯಿತು. 2023ರ ಐಪಿಎಲ್​ನಲ್ಲಿ ರಿಷಬ್ ಪಂತ್ ಅವರೊಂದಿಗೆ ಕಾಣಿಸಿಕೊಳ್ಳುವ ಮೂಲಕ ಕಾವ್ಯಾ ಮತ್ತೆ ಸುದ್ದಿಯಾದರು. ಇಬ್ಬರ ನಡುವೆ ಏನೋ ಇದೆ ಎಂಬ ಚರ್ಚೆಯೂ ಆಯಿತು. ಆದರೆ, ರಿಷಬ್ ಇನ್ನೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದರು. ಹೀಗಾಗಿ ಅವರ ನಡುವಿನ ಡೇಟಿಂಗ್ ಸುದ್ದಿಗಳು ಕೇವಲ ವದಂತಿಗಳಾಗಿ ಉಳಿದವು. 

   ಪ್ರಸ್ತುತ 17ನೇ ಐಪಿಎಲ್ ಆವೃತ್ತಿ ಮುಗಿದಿದೆ. ಎಸ್​ಆರ್​ಎಚ್​​ ತಂಡದ ಅಭಿಷೇಕ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ 23 ವರ್ಷದ ಕ್ರಿಕೆಟಿಗನೊಂದಿಗೆ ಕಾವ್ಯಾ ಅವರಿಗೆ ನಿಕಟ ಸಂಬಂಧವಿದೆ ಇರುವಂತೆ ತೋರುತ್ತದೆ. ಕಾವ್ಯಾ ಅವರು ಅಭಿಷೇಕ್ ಶರ್ಮ ಜತೆ ತುಂಬಾ ಕ್ಲೋಸ್ ಆಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಬ್ಬರ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ. ಅಭಿಷೇಕ್​ ಅವರು ಹಲವು ವರ್ಷಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದಾರೆ. ಈ ತಂಡದ ಸ್ಟಾರ್ ಆಟಗಾರರನ್ನೇ ಹೊರಹಾಕಿರುವ ಕಾವ್ಯಾ ಮಾರನ್, ಅಭಿಷೇಕ್​ ಅವರನ್ನು ಮುಂದುವರಿಸುತ್ತಿದ್ದಾರೆ. ಹೀಗಾಗಿ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಪ್ರಚಾರ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. 

 

Recent Articles

spot_img

Related Stories

Share via
Copy link
Powered by Social Snap