ಅತ್ಯಾಚಾರ ಆರೋಪಿ ಕ್ರೈಸ್ತ ಸನ್ಯಾಸಿ ಬಂಧನ

ಕೊಚ್ಚಿ/ತಿರುವನಂತಪುರ:

Image result for bishop franco

      ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿರುವ ಜಲಂಧರ್‌ ಬಿಷಪ್‌ ಪ್ರಾಂಕೊ ಮುಲಕ್ಕಲ್‌ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

      ಭಾರತ ದಲ್ಲಿ ಅತ್ಯಾಚಾರ ಆರೋಪದ ಮೇಲೆ ಬಂಧಿತರಾದ ಮೊದಲ ಕ್ಯಾಥೊಲಿಕ್ ಬಿಷಪ್ ಎಂಬ ಕುಖ್ಯಾತಿಗೆ ಫ್ರಾಂಕೊ ಗುರಿಯಾಗಿ ದ್ದಾರೆ. ಜೂನ್ 28ರಂದು ಬಿಷಪ್ ವಿರುದ್ಧ ಕುರವಿಳಂಗದ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಸೆ.25ಕ್ಕೆ ಕೇರಳ ಹೈಕೋರ್ಟ್ ಎದುರು ಬಿಷಪ್​ರ ಜಾಮೀನು ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.

      ಪ್ರಕರಣದ ಕುರಿತು ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆ ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದ್ದು, ಸಂತ್ರಸ್ತೆಗೆ ನ್ಯಾಯ ದೊರಕಲಿದೆ ಎಂದು ಸರ್ಕಾರ ಹೇಳಿದೆ.

      ‘ಸರ್ಕಾರವು ಸಂತ್ರಸ್ತೆ ಹಾಗೂ ಬಿಷಪ್‌ ವಿರುದ್ಧ ಪ್ರತಿಭಟನೆ ನಡೆಸುವ ಕ್ರೈಸ್ತ ಸನ್ಯಾಸಿನಿಯರ ಜೊತೆಗಿದೆ’ ಎಂದು ಸಚಿವ ಇ.ಪಿ. ಜಯರಾಜನ್‌ ಹೇಳಿದ್ದಾರೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

      

Recent Articles

spot_img

Related Stories

Share via
Copy link
Powered by Social Snap