ತಿರುವನಂತಪುರಂ:
ಮಲಯಾಳಂ ನಟಿ ರಿನಿ ಆನ್ ಜಾರ್ಜ್ ಅವರ ಕಿರುಕುಳ ಆರೋಪದ ಬೆನ್ನಲ್ಲೇ, ತೃತೀಯ ಲಿಂಗಿ ಮಹಿಳೆಯೊಬ್ಬರು ಕೇರಳದ ಕಾಂಗ್ರೆಸ್ ಶಾಸಕ ರಾಹುಲ್ ಮಂಕುತ್ತಿಲ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ತನಗೆ ಕರೆ ಮಾಡಿ ನಿನ್ನ ಮೇಲೆ ಅತ್ಯಾಚಾರ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಹಲವು ಅಶ್ಲೀಲ ಮಾತುಗಳನ್ನಾಡಿ ಕಿರಕುಳ ನೀಡಿದ್ದಾರೆ. ಬೆಂಗಳೂರು ಅಥವಾ ಹೈದರಾಬಾದ್‌ನಲ್ಲಿ ನಿನ್ನ ಮೇಲೆ ಅತ್ಯಾಚಾರ ಮಾಡಲು ಬಯಸಿದ್ದೇನೆ ಎಂದು ಅವರು ನನಗೆ ಬೆದರಿಕೆ ಹಾಕಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ.
ಅವಂತಿಕಾ ಎಂದು ಗುರುತಿಸಲ್ಪಟ್ಟ ತೃತೀಯ ಲಿಂಗಿ ಮಹಿಳೆಯೊಬ್ಬರು, ಶಾಸಕ ತಮ್ಮ ಮೇಲೆ ಅತ್ಯಾಚಾರ ಮಾಡಲು ಬಯಸಿರುವುದಾಗಿ ಸಂದೇಶ ಕಳುಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. ಚುನಾವಣೆಯ ಸಮಯದಲ್ಲಿ ನಡೆದ ಚರ್ಚೆಯಲ್ಲಿ ತಾವು ಭೇಟಿಯಾಗಿದ್ದಾಗಿ ಅವಂತಿಕಾ ಹೇಳಿಕೊಂಡಿದ್ದಾರೆ, ನಂತರ ಅವರು ಸಾಮಾಜಿಕ ಮಾಧ್ಯಮದ ಮೂಲಕ ಅವರನ್ನು ಸಂಪರ್ಕಿಸಿದರು. ಇದು ಸಾಮಾನ್ಯ ಸ್ನೇಹವಾಗಿ ಪ್ರಾರಂಭವಾಯಿತು, ಆದರೆ ಅವರು ಬರು ಬರುತ್ತಾ ಬಹಳ ಅಸಹ್ಯಕರವಾಗಿ ನಡೆದುಕೊಳ್ಳಲು ಪ್ರಾರಂಭಿಸಿದರು ಎಂದು ತಿಳಿಸಿದ್ದಾಳೆ.
ಮಲಯಾಳಂ ನಟಿ ರಿನಿ ಜಾರ್ಜ್ ,ರಾಹುಲ್ ವಿರುದ್ಧ ಆರೋಪ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ತನಗೆ ಅನುಚಿತ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಆತ ಫೈವ್ ಸ್ಟಾರ್ ಹೋಟೆಲ್‌ಗೆ ಆಹ್ವಾನಿಸಿದ್ದಾನೆ ಎಂದಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರಿಗೆ ಹಲವು ಬಾರಿ ದೂರುಗಳನ್ನು ನೀಡಿದರೂ ವರಿಷ್ಠರು ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಆನ್‌ಲೈನ್ ಸಂದರ್ಶನವೊಂದರಲ್ಲಿ ರಿನಿ ಜಾರ್ಜ್, “ಸಾಮಾಜಿಕ ಜಾಲತಾಣದ ಮೂಲಕ ಈ ರಾಜಕಾರಣಿಯೊಂದಿಗೆ ಸಂಪರ್ಕಕ್ಕೆ ಬಂದೆ. ಮೂರು ವರ್ಷಗಳ ಹಿಂದೆ ಆತನಿಂದ ಅನುಚಿತ ಸಂದೇಶಗಳು ಬಂದವು” ಎಂದು ಹೇಳಿದ್ದಾರೆ. ಆತ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸುವ ಆಫರ್ ನೀಡಿದ್ದಾನೆ ಎಂದೂ ಆಕೆ ಆರೋಪಿಸಿದ್ದಾರೆ. ತನ್ನ ದೂರುಗಳನ್ನು ಪಕ್ಷದ ವರಿಷ್ಠರು ನಿರ್ಲಕ್ಷಿಸಿದ್ದಾರೆ ಎಂದು ದೂರಿರುವ ನಟಿ, ಆ ಯುವ ನಾಯಕನಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “ನಾನು ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದಾಗ, ಆತ ನೀನು ಯಾರಿಗಾದರೂ ಹೇಳು ಎಂದು ನಿರ್ಲಕ್ಷ್ಯದಿಂದ ಪ್ರತಿಕ್ರಿಯಿಸಿದ” ಎಂದು ರಿನಿ ತಿಳಿಸಿದ್ದಾರೆ.
ಇನ್ನು ನಟಿ ರಿನಿ ಆರೋಪದ ಬೆನ್ನಲ್ಲೇ ರಾಹುಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ʻನನ್ನ ವಿರುದ್ಧ ಯಾವುದೇ ಕಾನೂನು ದೂರು ಇದೆಯೇ? ಹೇಳಿಕೆ ನೀಡಿದ ಮಹಿಳೆ ನನ್ನ ಹೆಸರನ್ನು ಹೇಳಿಲ್ಲ. ಅವರು ನನ್ನ ಸ್ನೇಹಿತೆ. ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ದೂರು ದಾಖಲಾಗಿದೆಯೇ? ಪಕ್ಷದ ಕಾರ್ಯಕರ್ತರು ನನ್ನನ್ನು ಸಮರ್ಥಿಸಬೇಕಾಗಿಲ್ಲ. ಅದಕ್ಕಾಗಿಯೇ ನಾನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ನೀಡುವಂತೆ ಪಕ್ಷ ನನ್ನನ್ನು ಕೇಳಿಲ್ಲʼ ಎಂದು ಅವರು ಹೇಳಿದ್ದಾರೆ.








