ಗುಬ್ಬಿ:
ತಾಲೂಕಿನ ಕಸಬಾ ಹೋಬಳಿ ತಿಪ್ಪುರು ಗ್ರಾಮದ ಕೆರೆಯ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಯಾವ ಕ್ಷಣದಲ್ಲಾದರು ಕೆರೆ ಏರಿ ಒಡೆದು ನೀರು ಸಂಪೂರ್ಣ ಖಾಲಿಯಾಗುವುದೆಂಬ ಆತಂಕದಲ್ಲಿ ಇಲ್ಲಿನ ರೈತರು ಮತ್ತು ನಾಗರೀಕರು ಇದ್ದಾರೆ.
ಸುಮಾರು 20 ವರ್ಷಗಳಿಂದ ಹೇಮಾವತಿ ನದಿಯ ನೀರಿನಿಂದ ತುಂಬುವ ಈ ಕೆರೆ ಸುತ್ತಮುತ್ತಲ ಹತ್ತಾರು ಗ್ರಾಮದ ಜಾನುವಾರು ಹಾಗೂ ಜನಗಳ ಕುಡಿಯುವ ನೀರಿನ ಬರ ತಪ್ಪಿಸಿದೆ.
ಸುತ್ತಮುತ್ತಾ ಇರುವ ತೋಟಗಳಲ್ಲಿ ಕೊರೆದಿರುವ ಕೊಳವೆಬಾವಿಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚಿ ರೈತರು ಸಂತಸದಿಂದ ಇರುವ ಸಂದರ್ಭದಲ್ಲಿ ಕೆರೆಯ ಏರಿಯ ಪಕ್ಕದಲ್ಲಿ ಬೆಳೆದಿದ್ದ ಬ್ರಹತ್ ಮರ ಒಣಗಿದೆ ಎಂದು ಗ್ರಾಮಸ್ಥರು ಕಿತ್ತು ಹಾಕಿದ್ದಾರೆ ಇದರ ಬೇರುಗಳು ಈಗ ಸತ್ತು ಅವು ಕೆರೆಯ ಒಳಬಾಗ ಸೇರಿದ್ದರಿಂದ ಇಲ್ಲಿ ರಂದ್ರವಾಗಿ ಅಲ್ಲಿಂದ ನೀರು ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿನ ನಿವೃತ್ತ ಕೆ ಎಸ್ ಆರ್ ಟಿ ಸಿ ವಿಭಾಗಾಧಿಕಾರಿ ಶಿವಮೂರ್ತಿ ದೂರು ನೀಡಿದರು ಪ್ರಯೋಜವಾಗಿಲ್ಲ ಅಧಿಕಾರಿಗಳು ದೂರು ಸ್ವೀಕರಿಸಿ ನಮ್ಮ ಇಲಾಖೆಯಲ್ಲಿ ಇದನ್ನು ರಿಪೇರಿ ಮಾಡಲು ಯಾವುದೇ ಹಣ ವಿಲ್ಲ ಹಣ ಬಂದ ನಂತರ ನೋಡುತ್ತೇವೆ ಎನ್ನುತ್ತಾರಂತೆ.
ಅವರು ಹಣ ಬಂದ ಮೇಲೆ ರಿಪೇರಿ ಮಾಡುವಹೊತ್ತಿಗೆ ಕೆರೆ ನೀರು ಸಂಪೂರ್ಣ ಖಾಲಿಯಾಗುತ್ತೆ ಎನ್ನುತ್ತಾರೆ ಇಲ್ಲಿನ ಗ್ರಾಮ ಪಂಚಾಯ್ತಿ ಸದಸ್ಯ ಶಿವನಂಜಯ್ಯ. ಸುಮಾರು 20 ವರ್ಷಗಳಿಂದ ಕೆರೆ ಅಭಿವೃದ್ಧಿಯಾಗಿಲ್ಲ ಇದರ ಏರಿ ಸುಸ್ತಿಯಲ್ಲಿ ಇಲ್ಲ ತಿಪ್ಪುರು ಗ್ರಾಮದ ರೈತರು ಈ ಕೆರೆಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ ಇದು ಒಡೆದರೆ ಹೇಗೆ ಎಂದರು.
ಕೂಡಲೇ ಹೇಮಾವತಿ ಇಲಾಖಾ ಎಂಜಿನಿಯರ್ ಗಳೋ ಅಥವಾ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಇದರ ದುರಸ್ಥಿ ಕಾರ್ಯ ಕೈಗೊಳ್ಳಬೇಕೆಂದು ಇವರು ಆಗ್ರಹಿಸಿದ್ದಾರೆ.