KGF 2 ಹವಾ: 20 ಕೋಟಿ ದಾಟಿದ ಮುಂಗಡ ಬುಕ್ಕಿಂಗ್‌ ಮೊತ್ತ!

ಬೆಂಗಳೂರು: 

ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಬಹುನಿರೀಕ್ಷಿತ ಸಿನಿಮಾ ಏಪ್ರಿಲ್‌ 14ರಂದು ಬಿಡುಗಡೆಗೆ ಸಜ್ಜಾಗಿದೆ. ದೇಶ-ವಿದೇಶಗಳಲ್ಲಿ  ಅಭಿಮಾನಿಗಳು ಈ ಚಿತ್ರವನ್ನು ಸ್ವಾಗತಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಇನ್ನು ಕೆಜಿಎಫ್‌ ಸಿನಿಮಾದ ಜೊತೆ ಅಂದರೆ ಏಪ್ರಿಲ್‌ 13ರಂದು  ಅಭಿನಯದ ಬೀಸ್ಟ್‌ ಚಿತ್ರವೂ ರಿಲೀಸ್‌ ಆಗುತ್ತಿದೆ. ಆದರೆ ಕೆಜಿಎಫ್‌ ಅಲೆಗೆ ಬೀಸ್ಟ್‌ ಸಿನಿಮಾ ಮಂಕಾಗುವ ಲಕ್ಷಣಗಳು ಕಂಡುಬರುತ್ತಿದೆ.

CSK vs RCB, IPL 2022: ಬೆಂಗಳೂರು vs ಚೆನ್ನೈ: ಐಪಿಎಲ್​​ನಲ್ಲಿಂದು ರಣ ರೋಚಕ ಕದನ

ಭರ್ಜರಿ ಮುಂಗಡ ಬುಕ್ಕಿಂಗ್‌:

ಈಗಾಗಲೇ ಆನ್‌ಲೈನ್‌ ಮೂಲಕ ಮುಂಗಡ ಬುಕ್ಕಿಂಗ್‌ ಪ್ರಾರಂಭವಾಗಿದ್ದು, ಹಿಂದಿ ಭಾಷಾ ಪ್ರದೇಶದಲ್ಲೇ ಇದುವರೆಗೆ ರೂ. 11.40 ಕೋಟಿ ಮೊತ್ತದ ಟಿಕೆಟ್‌ ಬುಕ್ಕಿಂಗ್‌ ಆಗಿದೆ. ಇನ್ನು ಕೆಜಿಎಫ್‌ ಚಾಪ್ಟರ್‌ 2ನ ಐದು ಭಾಷಾ ಅವತರಣಿಕೆಗಳು ಸೇರಿ ರೂ. 20 ಕೋಟಿ ಮೊತ್ತದ ಮುಂಗಡ ಬುಕ್ಕಿಂಗ್‌ ಆಗಿದೆ. ಮೊದಲ ದಿನದ ಟಿಕೆಟ್‌ ದರ ರೂ. 1,450ರಿಂದ ರೂ. 2,000ವರೆಗೂ ಇದೆ. ಮೊದಲ ಪ್ರದರ್ಶನ ನಡುರಾತ್ರಿ 1 ಗಂಟೆಯಿಂದ ಆರಂಭವಾಗಲಿದೆ.

ಏಪ್ರಿಲ್‌ 14ರಂದು ಕೆಜಿಎಫ್‌ ಚಾಪ್ಟರ್‌-2 ರಾಜ್ಯದ 500 ಏಕತೆರೆಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ. ತಮಿಳುನಾಡಿನಲ್ಲಿ 1 ಸಾವಿರ ಏಕತೆರೆಯ ಚಿತ್ರಮಂದಿರಗಳ ಪೈಕಿ 350 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ತೆಲುಗು ಭಾಷೆಯಲ್ಲೂ ಇದೇ ರೀತಿಯ ಪ್ರತಿಕ್ರಿಯೆ ಇದೆ.

RRR 1000cr: ಸಾವಿರ ಕೋಟಿ ಕ್ಲಬ್ ಸೇರಿದ RRR: ‘ದಂಗಲ್’ ದಾಖಲೆ ಮುರಿಯಲು ಇನ್ನೆಷ್ಟು ಬೇಕು?

ಇನ್ನೊಂದೆಡೆ ರಿಲೀಸ್‌ ಆಗುತ್ತಿರುವ ಬೀಸ್ಟ್‌ ಚಿತ್ರವು ಏಪ್ರಿಲ್‌ 13ರಂದು ರಾಜ್ಯದ 300 ಚಿತ್ರಮಂದಿರಗಳಲ್ಲಿ 1,500 ಪ್ರದರ್ಶನ ಕಾಣಲಿದೆ. ಮರುದಿನ ಕೆಜಿಎಫ್‌ -2 ಬಿಡುಗಡೆ ಹಿನ್ನೆಲೆಯಲ್ಲಿ ‘ಬೀಸ್ಟ್‌’ ಚಿತ್ರವು 50 ಚಿತ್ರಮಂದಿರಗಳಲ್ಲಷ್ಟೇ ಪ್ರದರ್ಶನ ಕಾಣಲಿದೆ.

ಶಾಹಿದ್‌ ʼಜರ್ಸಿʼ ಸಿನಿಮಾ ಮುಂದೂಡಿಕೆ:

ಏಪ್ರಿಲ್‌ 13 ರಂದು ಜರ್ಸಿ, ಏ.14ರಂದು ಕೆಜಿಎಫ್‌-2 ಸಿನಿಮಾಗಳು ರಿಲೀಸ್‌ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಿನಿಮಾಕ್ಕೆ ಹೊಡೆತ ಬೀಳಬಾರದು ಎಂಬ ಉದ್ದೇಶದಿಂದ ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಅಭಿನಯದ ʼಜರ್ಸಿ ʼ ಸಿನಿಮಾ ರಿಲೀಸ್‌ ದಿನಾಂಕವನ್ನು ಮುಂದೂಡಲಾಗಿದೆ.

 ಅವಕಾಶ ವಂಚಿತರನ್ನು ಮುಖ್ಯ ವಾಹಿನಿಗೆ ತರುವುದು ನಮ್ಮ ಮುಖ್ಯ ಗುರಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಪೋಲೆಂಡ್‌ನಲ್ಲೂ ಕೆಜಿಎಫ್‌-2 ಹವಾ:

ಕೆಜಿಎಫ್‌ ಹವಾ ದೇಶ ಮಾತ್ರವಲ್ಲದೆ, ವಿದೇಶಗಳಲ್ಲೂ ಹರಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಪುರಾವೆ ಎಂಬಂತೆ ಇದೀಗ ಪೋಲೆಂಡ್‌ ನ ವಾರ್ಸಾದ ಕಿನೋಗ್ರಾಮ್‌ನಲ್ಲಿ ಲೋಕಾ ಫಿಲ್ಮ್ಸ್‌ಗೆ ಸಂಬಂಧಿಸಿದ ಯುನೈಟೆಡ್ ಫಿಲ್ಮ್ಸ್ ಯುರೋಪಾದಿಂದ ಮೊದಲ ಬಾರಿಗೆ ಭವ್ಯವಾದ ಟಿಕೆಟ್ ಬಿಡುಗಡೆ ಕಾರ್ಯಕ್ರಮವನ್ನು ನಡೆಸಲಾಗಿದೆ. ಇದು ಪೋಲೆಂಡ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಡೆದ ಭವ್ಯವಾದ ಕಾರ್ಯಕ್ರಮ ಎಂಬುದು ವಿಶೇಷ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap