”ಕೆಜಿಎಫ್​ 2” ಸಿನಿಮಾ ತೆರೆಗೆ ಬರಲು ಸಜ್ಜು: ಯಶ್​ ಕಟೌಟ್ ​ಗೆ ಬರುತ್ತಿದೆ ಭಾರೀ ಬೇಡಿಕೆ

ಬೆಂಗಳೂರು: 

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್​ 2 ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಬೆಂಗಳೂರಲ್ಲಿ ಯಶ್​ ಕಟೌಟ್​ಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಇದೇ ಏಪ್ರಿಲ್​ 14ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರ ತೆರೆಕಾಣೋಕೆ ಇನ್ನು 10 ದಿನಗಳು ಮಾತ್ರ ಬಾಕಿ ಉಳಿದಿವೆ.

ಅದಕ್ಕೂ ಮೊದಲೇ ಥಿಯೇಟರ್​ನಲ್ಲಿ ಕಟೌಟ್​ ಹಾಕೋಕೆ ಫ್ಯಾನ್ಸ್ ರೆಡಿ ಆಗಿದ್ದಾರೆ. ಕೆಜಿಎಫ್​ 2 ಚಿತ್ರಕ್ಕೆ ಇರುವ ಹೈಪ್ ತುಂಬಾನೇ ದೊಡ್ಡದು. ಈ ಕಾರಣಕ್ಕೆ ಫ್ಯಾನ್ಸ್ ಕೂಡ ಚಿತ್ರವನ್ನು ಸ್ವಾಗತಿಸಲು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಚಿರಂಜೀವಿ ಸರ್ಜಾ ನಟನೆಯ ‘ರಾಜ ಮಾರ್ತಾಂಡ’ ಸಿನಿಮಾ ಪೋಸ್ಟರ್ ಬಿಡುಗಡೆ

ನಂಜನಗೂಡು ಮೊದಲಾದ ಕಡೆಗಳಿಂದ ಬೆಂಗಳೂರಿಗೆ ಬಂದು ಕಟೌಟ್​ ರೆಡಿ ಮಾಡಿಸಲು ಆರ್ಡರ್​ ನೀಡುತ್ತಿದ್ದಾರೆ. ಹೀಗಾಗಿ, ‘ಕೆಜಿಎಫ್​ 2’ ರಿಲೀಸ್ ದಿನದಂದು ಹಲವು ಚಿತ್ರಮಂದಿರಗಳಲ್ಲಿ ಯಶ್ ಅವರ ದೊಡ್ಡ ದೊಡ್ಡ ಕಟೌಟ್ ತಲೆ ಎತ್ತಲಿದೆ ಎಂದು ಹೇಳಲಾಗಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap