ಕೆಜಿಎಫ್ ಚಾಪ್ಟರ್ 2 ವಿಶೇಷ ದಾಖಲೆ: ಒಂದೇ ವಾರದಲ್ಲಿ 800 ಕೋಟಿ ರೂಪಾಯಿ ಕಲೆಕ್ಷನ್‌

ಕೆಜಿಎಫ್ 2 :

ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ , ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ ಸೌಂಡ್ ಮಾಡುತ್ತಿದೆ. ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಬಾಕ್ಸ್ ಆಫೀಸ್‌ನಲ್ಲೂ ವಿಶೇಷ ದಾಖಲೆ ಬರೆಯುತ್ತಿದೆ.ಏಪ್ರಿಲ್ 14ರಂದು 10 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ, ನಿನ್ನೆಗೆ ಒಂದು ವಾರದ ಯಶಸ್ವಿ ಪ್ರದರ್ಶನವಾಗಿದೆ.

ಇಂದಿನ ಪಂದ್ಯದಲ್ಲಿ RCB – SRH ಮುಖಾಮುಖಿ

ಈ ಸಿನಿಮಾ ವಿಶ್ವಾದ್ಯಂತ 800 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಮಾಹಿತಿ ನೀಡಿದೆ.ಈ ಹಿಂದೆ ಸಂಸ್ಥೆ ಹೇಳಿದಂತೆ ವಿದೇಶ ಹೊರತುಪಡಿಸಿ ಭಾರತದಲ್ಲೇ ಮೊದಲನೇ ದಿನ 134.5 ಕೋಟಿ, ಎರಡನೇ ದಿನ ಭಾರತದಲ್ಲಿ 240 ಕೋಟಿ ಸಂಪಾದಿಸಿತ್ತು. ನಾಲ್ಕನೇ ದಿನದಲ್ಲಿ ವಿಶ್ವಾದ್ಯಂತ 540 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಸಂಸ್ಥೆ ಅಧಿಕೃತವಾಗಿ ಮಾಹಿತಿ ನೀಡಿತ್ತು.

ಕರ್ನಾಟಕದಲ್ಲಿ ಜೆಡಿಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ: ಹೆಚ್‌ಡಿಕೆ ಭರವಸೆ

ಈಗ ಎಂಟು ದಿನಕ್ಕೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಾದ್ಯಂತ 800 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಸಾವಿರ ಕೋಟಿಯ ಗಡಿ ತಲುಪುತ್ತಿದೆ. ದಕ್ಷಿಣ ಭಾರತದಲ್ಲಿ ಒಂದೂವರೆ ಕೋಟಿಗೂ ಅಧಿಕ ಜನ ಒಂದು ವಾರದಲ್ಲಿ ಈ ಸಿನಿಮಾ‌ ನೋಡಿದ್ದಾರೆ.ಕರ್ನಾಟಕದಲ್ಲಿ 40 ಲಕ್ಷ ಜನ, ತೆಲುಗಿನಲ್ಲಿ 50 ಲಕ್ಷ ಜನ,‌ ತಮಿಳುನಾಡಿನಲ್ಲಿ 30 ಲಕ್ಷ ಜನ, ‌ಕೇರಳದಲ್ಲಿ 25 ಲಕ್ಷ ಜನ ಸಿನಿಮಾ ವೀಕ್ಷಿಸಿದ್ದಾರೆ ಎನ್ನುವ ಮಾಹಿತಿ ದೊರಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap