ಬದಲಾಗುತ್ತಿದೆ ದರ್ಶನ್‌ ಖೈದಿ ನಂ….!

ಬೆಂಗಳೂರು :

    ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್‌  ವಿಚಾರಣಾಧೀನ ಖೈದಿ ನಂ. 6106 ನೀಡಲಾಗಿತ್ತು. ಇದನ್ನು ಫ್ಯಾನ್ಸ್ ಸಂಭ್ರಮಿಸಿ ಹಚ್ಚೆ ಹಾಕಿಸಿಕೊಂಡಿದ್ದರು. ಕೆಲವರು ಕಾರುಗಳಿಗೆ ಈ ಸಂಖ್ಯೆಯನ್ನು ಬರೆದುಕೊಂಡಿದ್ದರು. ಈಗ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್​ ಆಗಲಿದ್ದಾರೆ. ಇದರಿಂದ ಅವರು ವಿಚಾರಣಾಧೀನ ಖೈದಿ ಸಂಖ್ಯೆ ಕೂಡ ಬದಲಾಗಲಿದೆ. ಈಗ ದರ್ಶನ್ ಫ್ಯಾನ್ಸ್ ಮತ್ತೆ ಹಚ್ಚೆ ಹಾಕಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

   ಫ್ಯಾನ್ಸ್ ದರ್ಶನ್​ನ ಮೇಲೆ ಅಂಧಾಭಿಮಾನ ತೋರಿಸುತ್ತಿದ್ದಾರೆ. ಈ ಕಾರಣದಿಂದಲೇ ದರ್ಶನ್ ಜೊತೆ ಅನೇಕರು ಅರೆಸ್ಟ್ ಆಗಿದ್ದಾರೆ. ದರ್ಶನ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಯಿತು. ಅವರ ಖೈದಿ ಸಂಖ್ಯೆಯನ್ನು ಕೆಲವರು ಹಚ್ಚೆ ಹಾಕಿಸಿಕೊಂಡರೆ ಇನ್ನೂ ಕೆಲವರು ತಮ್ಮ ವಾಹನಗಳಿಗೆ ಈ ನಂಬರ್​ನ ಸ್ಟಿಕ್ಕರ್ ಅಂಟಿಸಿದರು. ಅತ್ತ ಮಗನಿಗೆ ಖೈದಿ ಡ್ರೆಸ್ ಹಾಕಿಸಿ ಫೋಟೋಶೂಟ್ ಮಾಡಿಸೋ ಕೆಲಸವೂ ಆಯಿತು. ಈಗ ದರ್ಶನ್ ಫ್ಯಾನ್ಸ್ ಆರೋಪಿ ದರ್ಶನ್ ವಿಚಾರಣಾಧೀನ ಖೈದಿ ಸಂಖ್ಯೆ ಬದಲಾವಣೆ ಪಕ್ಕಾ ಆಗಿದೆ.

   ಬಳ್ಳಾರಿಗೆ ಶಿಫ್ಟ್​ ಆಗುತ್ತಿದ್ದಂತೆ ವಿಚಾರಣಾಧೀನ ಖೈದಿ ಸಂಖ್ಯೆ ಚೇಂಜ್ ಆಗಲಿದೆ. ಬಳ್ಳಾರಿ ಖೈದಿಗಳಂತೆ ನಟ ದರ್ಶನ್‌ಗೂ ವಿಚಾರಣಾಧೀನ ಖೈದಿ ಸಂಖ್ಯೆ ಸಿಗಲಿದೆ. ಮೂರು ಅಂಕಿಯ ವಿಚಾರಣಾಧೀನ ನಂಬರ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಬ್ಯಾರಕ್​​ಗೆ ಶಿಫ್ಟ್​​​ ಮಾಡಲಾಗುತ್ತದೆ. 

   ದರ್ಶನ್ ಅವರನ್ನು ನೋಡಲು ಈಗಲೇ ಬಳ್ಳಾರಿಯ ಕೇಂದ್ರ ಕಾರಾಗೃಹದ ಬಳಿ ಫ್ಯಾನ್ಸ್ ನೆರೆದಿದ್ದಾರೆ. ಜೈಲಿನಲ್ಲಿ ಸಿಗರೇಟ್ ಸೇದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರನ್ನು ಇಂದು ವಿಚಾರಣೆ ಮಾಡಬೇಕಿದೆ. ಆ ಬಳಿಕ ಸ್ಥಳಮಹಜರು ನಡೆಯಲಿದೆ. ಇದಾದ ಬಳಿಕ ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತದೆ.

Recent Articles

spot_img

Related Stories

Share via
Copy link