ಮುಂಬೈ :
ಕರಣ್ ಜೋಹರ್ ಹಾಗೂ ಕಾರ್ತಿಕ್ ಆರ್ಯನ್ ಮಧ್ಯೆ ಸಾಕಷ್ಟು ಮನಸ್ತಾಪಗಳು ಇದ್ದವು. ಕಾರ್ತಿಕ್ ಆರ್ಯನ್ ಅವರನ್ನು ಸಿನಿಮಾ ಒಂದರಿಂದ ಕರಣ್ ಜೋಹರ್ ಹೊರಕ್ಕೆ ಇಟ್ಟಿದ್ದರು. ಕಾರ್ತಿಕ್ ಆರ್ಯನ್ ಹೊರಗಿನ ವ್ಯಕ್ತಿ ಎಂದು ಯಾವಾಗಲೂ ಅಂದುಕೊಳ್ಳುತ್ತಲೇ ಬರುತ್ತಿದ್ದ ಕರಣ್ ಜೋಹರ್ ಈಗ ಬದಲಾದಂತೆ ಕಾಣುತ್ತಿದ್ದಾರೆ. ಈಗ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಂಡಿದ್ದಾರೆ. ಈ ಸಂದರ್ಭ ಸಂಭಾಷಣೆಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
‘ನಾನು ನಿಮಗೆ ರಾಜಮನೆತನದವರನ್ನು ಪರಿಚಯಿಸುತ್ತೇನೆ. ಇಲ್ಲಿ ಖಾನ್ ಹಾಗೂ ಕಪೂರ್ಗಳೇ ಒರಿಜಿನಲ್ ಗ್ಯಾಂಗ್ಸ್ಟರ್ಗಳು. ಈಗಿನ ಕಾಲದ ಹೀರೋಗಳು ಫ್ರಾಂಚೈಸಿಗಳನ್ನು ಕದಿಯುತ್ತಾರೆ’ ಎಂದು ಕರಣ್ ಜೋಹರ್ ಹೇಳಿದ್ದಾರೆ. ಇದು ಅವರು ಕಾರ್ತಿಕ್ ಆರ್ಯನ್ಗೆ ಹೇಳಿದ ಮಾತು. ಅಲ್ಲದೆ ತಮ್ಮನ್ನು ತಾವು ಅವರು ಕಿಂಗ್ಮೇಕರ್ ಎಂದು ಕರೆದುಕೊಂಡಿದ್ದಾರೆ.‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ಮೊದಲು ಅಕ್ಷಯ್ ಕುಮಾರ್ ಅವರು ನಟಿಸಿದ್ದರು. ಆ ಬಳಿಕ ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಎಂಟ್ರಿ ಆಯಿತು. ಎರಡನೇ ಪಾರ್ಟ್ಗೆ ಅವರೇ ಹೀರೋ ಆದರು. ಈ ಸಿನಿಮಾ ಹಿಟ್ ಆದ ಬಳಿಕ ಅವರನ್ನೇ ಸಿನಿಮಾದಲ್ಲಿ ಮುಂದುವರಿಸಲಾಗಿದೆ. ಈ ವಿಚಾರ ಇಟ್ಟುಕೊಂಡೇ ಕರಣ್ ಜೋಹರ್ ಅವರು ಕಾರ್ತಿಕ್ ಆರ್ಯನ್ನ ಕಾಲೆಳೆದಿದ್ದಾರೆ.
