ಗೆದ್ದ ಬಳಿಕ ಮುಂದೆಯೂ ನಾನೇ ಅಧಿಕಾರದಲ್ಲಿರುತ್ತೇನೆಂದು ಪ್ರತಿಯೊಬ್ಬ ವ್ಯಕ್ತಿಯೂ ಹೇಳುತ್ತಾರೆ. ಆದರೆ, ಗೆಲುವು, ಸೋಲು ಎಂಬುದು ಜನರ ಮತ್ತು ಮತದಾರರ ಕೈಯಲ್ಲಿಸುತ್ತದೆ. 2024ರಲ್ಲಿಯೂ ನಾನೇ ಧ್ವಜಾರೋಹಣ ಮಾಡುತ್ತೇನೆಂದು ಹೇಳುವುದು ಅಹಂಕಾರದ ಪರಮಾವಧಿ. ಸ್ವಾತಂತ್ರ್ಯ ದಿನಾಚರಣೆಯ ದಿನವೂ ವಿಪಕ್ಷಗಳ ವಿರುದ್ಧ ಹೇಳಿಕೆ ನೀಡಿದರೆ. ದೇಶವನ್ನು ಹೇಗೆ ಕಟ್ಟುತ್ತಾರೆಂದು ಪ್ರಶ್ನಿಸಿದರು.
ಇದೇ ವೇಳೆ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲೇಕೆ ಭಾಗಿಯಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲನೆಯದಾಗಿ, ನನಗೆ ಸ್ವಲ್ಪ ಕಣ್ಣಿನ ಸಮಸ್ಯೆಗಳಿವೆ. ಎರಡನೆಯದಾಗಿ, ನಿಯಮಗಳ ಪ್ರಕಾರ ನಾನು 9.20 ಕ್ಕೆ ನನ್ನ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೇಕಾಗಿತ್ತು. ಇದೇ ಸಮಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿಯೂ ತ್ರಿವರ್ಣ ಧ್ವಜ ಹಾರಿಸಬೇಕಿತ್ತು. ಹಾಗಾಗಿ ಕೆಂಪುಕೋಟೆಗೆ ತೆರಳಲು ಸಾಧ್ಯವಾಗಲಿಲ್ಲ. ಪ್ರಧಾನಿ ಮೋದಿ ಹೋಗುವುದಕ್ಕೂ ಮುನ್ನ ಬೇರೆಯವರನ್ನು ಒಳ ಹೋಗಲು ಅನುಮತಿ ನೀಡುವುದಿಲ್ಲ. ಅಷ್ಟರ ಮಟ್ಟಿಗೆ ಸೆಕ್ಯುರಿಟಿ ಬಿಗಿಯಾಗಿರುತ್ತದೆ…ಸಮಯಕ್ಕೆ ಸರಿಯಾಗಿ ಇಲ್ಲಿಗೆ ತಲುಪಲು ಆಗುವುದಿಲ್ಲ ಎಂದುಕೊಂಡೆ… ಭದ್ರತೆಯ ಪರಿಸ್ಥಿತಿಯಿಂದಾಗಿ ಅಲ್ಲಿಗೆ ಹೋಗದೆ ಇರುವುದೇ ಒಳಿತು ಎಂದುಕೊಂಡೆ ಎಂದು ತಿಳಿಸಿದರು.
ಕಾಂಗೆಸ್ ಸಂಸದ ಕೆಸಿ ವೇಣುಗೋಪಾಲ್ ಮಾತನಾಡಿ, 2024ರ ಚುನಾವಣೆಯಲ್ಲಿ ಯಾರು ಅಧಿಕಾರಕ್ಕೆ ಬರಬೇಕು, ಯಾರು ಸೋಲಬೇಕೆಂಬುದನ್ನು ಜನರು ನಿರ್ಧರಿಸುತ್ತಾರೆ. 2024ರವರೆಗಾದರೂ ಕಾಯೋಣ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ್ದ ಖರ್ಗೆಯವರು, ಮಾಜಿ ಪ್ರಧಾನಿ ನೆಹರೂ ಅವರು ಉಕ್ಕು ಕಾರ್ಖಾನೆಗಳನ್ನು ಸ್ಥಾಪಿಸಿದರು, ಸಾರ್ವಜನಿಕ ವಲಯದ ಘಟಕಗಳನ್ನು ರಚಿಸಿದರು, ರಾಷ್ಟ್ರದ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದರು. ಅವರು ಐಐಟಿಗಳು, ಐಐಎಂಗಳು, ಎಐಐಎಂಎಸ್, ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋವನ್ನು ಸ್ಥಾಪಿಸಿದರು ಮತ್ತು ದೇಶದಲ್ಲಿ ಪರಮಾಣು ಸಂಶೋಧನೆಗೆ ಅಡಿಪಾಯ ಹಾಕಿದರು ಎಂದು ಸ್ಮರಿಸಿದರು.