ಕೆಐಎಡಿಬಿಯಿಂದ ರಾಜ್ಯದ್ಯಂತ 15 ಹೊಸ ಕೈಗಾರಿಕಾ ಲೇಔಟ್‌ ಸ್ಥಾಪನೆ…!

ಬೆಂಗಳೂರು,

    ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ರಾಜ್ಯದಾದ್ಯಂತ 15 ಹೊಸ ಕೈಗಾರಿಕಾ ಲೇಔಟ್‌ಗಳನ್ನು ಸ್ಥಾಪಿಸಲು ಮತ್ತು ಹೆಚ್ಚಿನ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಲು ಇತರ ಹಲವು ಕೈಗಾರಿಕಾ ಪ್ರದೇಶಗಳನ್ನು ವಿಸ್ತರಿಸಲು ಯೋಜಿಸುತ್ತಿದೆ.

   ಸಿಲಿಕಾನ್ ಸಿಟಿಯ ಹೊಭಾಗಗಳಲ್ಲಿ ಹೊಸ ಕೈಗಾರಿಕಾ ಲೇಔಟ್‌ಗಳನ್ನು ಸ್ಥಾಪಿಸುವ ಈ ಕ್ರಮವು ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೆಚ್ಚುತ್ತಿರುವ ಲೇಔಟ್‌ಗಳ ಬೇಡಿಕೆಗಳಿಗೆ ಸಹಾಯ ಮಾಡುತ್ತದೆ ಎಂದು ಕೆಐಎಡಿಬಿ ಅಧಿಕಾರಿಗಳು ಹೇಳಿದ್ದಾರೆ.

   “ಕಳೆದ ಕೆಲವು ವರ್ಷಗಳ ಮಾರುಕಟ್ಟೆಯ ಬೇಡಿಕೆಯನ್ನು ವಿಶ್ಲೇಷಿಸಿದ್ದೇವೆ ಮತ್ತು ಕೈಗಾರಿಕಾ ಲೇಔಟ್‌ಗಳನ್ನು ಸ್ಥಾಪಿಸಲು ಹಲವು ಸ್ಥಳಗಳನ್ನು ಈಗಾಗಲೇ ಗುರುತಿಸಿದ್ದೇವೆ. ಕೆಲವು ಪ್ರದೇಶಗಳನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿದ್ದರೆ, ಕೆಲವನ್ನು ಇತ್ತೀಚೆಗೆ ಆಯ್ಕೆ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಬೆಂಗಳೂರು ಸ್ಯಾಚುರೇಟೆಡ್ ಆಗಿದ್ದು, ಜನರು ಹೊರಹೋಗುವ ಅವಶ್ಯಕತೆಯಿದೆ ಎಂದು ಕೆಐಎಡಿಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಆರ್ ಮಾಹಿತಿ ನೀಡಿದ್ದಾರೆ.

    ಹೊಸದಾಗಿ ಬೆಂಗಳೂರಿನ ಹೊರ ವಲಯಗಳಲ್ಲಿ ನಿರ್ಮಾಣವಾಗಲಿರುವ ಈ 15 ಹೊಸ ಕೈಗಾರಿಕಾ ಲೇಔಟ್‌ಗಳು ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ಹಾಸನ ಮತ್ತು ಯಾದಗಿರಿ ಸುತ್ತಮುತ್ತ ನಿರ್ಮಾಣವಾಗುವ ನಿರೀಕ್ಷೆಯಿದೆ. ಇದರಿಂದ ಬೆಂಗಳೂರಿನ ಜನದಟ್ಟಣೆ ಕೊಂಡ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಯಿದೆ.

    ಈ ಬಗ್ಗೆ ಇನ್ನು ಅಧಿಕೃತ ಆದೇಶಶ ಬರಬೇಕಿದೆ. ಕೆಐಎಡಿಬಿ ಹೊಸ ಕೈಗಾರಿಕಾ ಲೇಔಟ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಲೇ ಇದ್ದರೂ, ಮಂಡಳಿಯು ಅಭಿವೃದ್ಧಿಪಡಿಸಿದ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವ ಕೈಗಾರಿಕೋದ್ಯಮಿಗಳು ಮೂಲಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಲೇಔಟ್‌ಗಳ ವಿಸ್ತರಣೆಗಿಂತ ಉತ್ತಮ ಸೌಲಭ್ಯಗಳನ್ನು ಒದಗಿಸುವತ್ತ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap