ಧಾನಿ ಮೋದಿಯನ್ನು ಅವಹೇಳನ ಮಾಡಿ ಪೋಸ್ಟ್ : ಕಿಡಿಗೇಡಿ ವಿರುದ್ಧ ದೂರು

ಬೆಂಗಳೂರು:‌

     ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​​  ಮಾಡಿದ್ದ ಟಿ.ಎಫ್​.ಹಾದಿಮನಿ ಎಂಬಾತನ ವಿರುದ್ಧ ನಗರದ ಯಶವಂತಪುರದ ಸೈಬರ್ ಕ್ರೈಂ  ಠಾಣೆಗೆ ಬಿಜೆಪಿ ದೂರು ನೀಡಿದೆ. ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ರವಿಕುಮಾರ್ ನೇತೃತ್ವದಲ್ಲಿ ಸೋಮವಾರ ದೂರು ನೀಡಲಾಗಿದೆ. ಈ ವೇಳೆ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮತ್ತು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ ಕುಮಾರ್ ಉಪಸ್ಥಿತರಿದ್ದರು.

     ಜೂನ್​ 16ರ ಬೆಳಗ್ಗೆ 9 ಗಂಟೆಗೆ ನಾನು ನನ್ನ ಪಕ್ಷದ ಕಚೇರಿಯಲ್ಲಿ, ಪಕ್ಷದ ಕೆಲಸದ ನಿಮಿತ್ತ ಫೇಸ್‌ಬುಕ್ ಅನ್ನು ನೋಡುತ್ತಿದ್ದಾಗ ಟಿ.ಎಫ್​.ಹಾದಿಮನಿ ಎಂಬ ವ್ಯಕ್ತಿಯ ಫೇಸ್‌ಬುಕ್ ಪುಟದಲ್ಲಿ ನಮ್ಮ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಕುರಿತು ತೇಜೋವಧೆ ಮತ್ತು ಈ ದೇಶದ ಜನತೆಯ ಭಾವನೆಗಳಿಗೆ ಧಕ್ಕೆ ತರುವ ರೀತಿ ಹಾಗೂ ಸಮಾಜದ ಸಮುದಾಯದ ನಡುವೆ ಬಿರುಕು ಮೂಡಿಸುವ ರೀತಿಯಲ್ಲಿ ಅವಮಾನ ಮಾಡಿ ಈ ಕೆಳಕಂಡಂತೆ ಪೋಸ್ಟ‌ನ್ನು ಹಂಚಿಕೊಂಡಿದ್ದರು.

    ನರೇಂದ್ರ ಮೋದಿಯವರು ಒಂದು ಮಹಿಳೆಯನ್ನು ಎತ್ತಿಕೊಂಡಿರುವ ರೀತಿ ಒಂದು ಪೋಸ್ಟರ್‌ ಅನ್ನು ಹಂಚಿಕೊಂಡಿದ್ದು, ಸದರಿ ಪೋಸ್ಟರ್‌ಗೆ “ಸ್ವಂತ ಹೆಂಡತಿಯನ್ನೇ ಬಿಟ್ಟ ನಮ್ಮ ಪ್ರಧಾನಿಗಳು… ಏನಿದು” ಎಂಬ ಟ್ಯಾಗ್‌ ಲೈನ್‌ ಕೊಟ್ಟಿರುತ್ತಾರೆ. ಇನ್ನೊಂದು ಪೋಸ್ಟರ್‌ನಲ್ಲಿ “ನಮ್ಮ ದೇಶ ಕಂಡ ಅತ್ಯದ್ಭುತ ನಟ, ನಾಟಕಕಾರರ ಇಂದಿನ ಹತ್ತು ಸಾವಿರದ ಒಂಬತ್ತನೇ ಹೊಸ ವೇಷ, ನಿನ್ನ ಯ್ಯಾಸಕ್ ನನ್ನ ದ್ವಾಸೆ ಉಯ್ಯ” ಎಂದು ಹಾಕಿದ್ದಾರೆ. ನರೇಂದ್ರ ಮೋದಿಯವರು ಕ್ಯಾಮೆರ ಹಿಡಿದುಕೊಂಡು ಫೋಟೋ ತೆಗೆಯುವಂತೆ ಹಾಗೂ ಮೂರು ಜನ ಫೋಟೋಗ್ರಾಫರ್‌ಗಳು ನರೇಂದ್ರ ಮೋದಿಜೀಯವರ ಫೋಟೋವನ್ನು ಸೆರೆಹಿಡಿಯುತ್ತಿರುವಂತೆ ಪೋಸ್ಟ್‌ನ್ನು ಹಂಚಿಕೊಂಡು “ಒಬ್ಬ Ameture” ಎಂದು ಅವಹೇಳನಕಾರಿಯಾಗಿ ಹಂಚಿಕೊಂಡಿರುತ್ತಾನೆ ಎಂದು ಉಲ್ಲೇಖಿಸಲಾಗಿದೆ. 

    ಇದಷ್ಟೇ ಅಲ್ಲದೆ ಅವರ ಇಡೀ ಫೇಸ್‌ಬುಕ್ ಪುಟದಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳನ್ನು ಹಾಗೂ ರಾಜ್ಯದ ಪ್ರಮುಖರನ್ನು ಅವಹೇಳನಕಾರಿಯಾಗಿ ನಿಂದಿಸುವ, ತೇಜೋವಧೆ ಮತ್ತು ಸಮಾಜದಲ್ಲಿ ಸಮುದಾಯಗಳ ಮಧ್ಯದಲ್ಲಿ ಶಾಂತಿ ಕೆದಡುವಂತಹ ಅನೇಕ ಪೋಸ್ಟರ್‌ಗಳನ್ನು ಹಂಚಿಕೊಳ್ಳಲಾಗಿದೆ. ಆದ್ದರಿಂದ ಟಿ.ಎಫ್​.ಹಾದಿಮನಿ ಮೇಲೆ 124, 146, 144(2), 268, 352, 353, 353(2)(3), 499, 502. 177. 203, 153, 153ಎ. ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್​​ಐಆರ್​​ ದಾಖಲಿಸಿ, ಅಪರಾಧಿಯನ್ನು ಬಂಧಿಸುವಂತೆ ಕೋರಲಾಗಿದ್ದು, ಜೊತೆಗೆ ಅವರ ಫೇಸ್ ಬುಕ್ ಖಾತೆಯಲ್ಲಿಯರುವ ಎಲ್ಲಾ ಮಾಹಿತಿಗಳನ್ನು ಕ್ರೂಢಿಕರಿಸಿ, ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಈ ಕುರಿತಾಗಿ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಪ್ರತಿಕ್ರಿಯಿಸಿದ್ದು, ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಮೋದಿಯವರ ಮೇಲೆ ಅಭಿಮಾನ ಇಟ್ಟುಕೊಂಡಿರುವವರ ಮನಸ್ಸಿಗೆ ಇದರಿಂದ ಘಾಸಿಯಾಗಿದೆ ಎಂದಿದ್ದಾರೆ. ಹಾದಿಮನಿ ಎನ್ನುವವರು ಮಹಿಳೆ ಜೊತೆ ಮೋದಿ ಇರುವಂತೆ ಎಡಿಟ್ ಮಾಡಿದ ಫೋಟೋ ಹಂಚಿಕೊಂಡಿದ್ದಾರೆ. ಆ ಮೂಲಕ ಚಾರಿತ್ರ್ಯವಧೆ ಮಾಡಲಾಗಿದೆ. ಅವರ ಗೌರವಕ್ಕೆ ಚ್ಯುತಿ ತಂದಿದ್ದಾರೆ. ಕೂಡಲೇ ಹಾದಿಮನಿಯನ್ನು ಪೊಲೀಸರು ಬಂಧಿಸಬೇಕು. ಅವರ ವಿರುದ್ಧ ಎಫ್​ಐಆರ್ ದಾಖಲಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link