ನವದೆಹಲಿ :
“ಉತ್ತರ ಕೊರಿಯಾದಲ್ಲಿ ಇನ್ನು ಮುಂದೆ ಯಾರೂ ಆತ್ಮಹತ್ಯೆ ಮಾಡಿಕೊಳ್ಳಲೇಬಾರದು” ಹೀಗೆಂದು ಹೊಸ ಆದೇಶವನ್ನು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೊಸ ಆದೇಶ ಹೊರಡಿಸಿದ್ದಾನೆ.
ಕ್ಷಿಪಣಿ ಉಡಾವಣೆ, ಅಣ್ವಸ್ತ್ರ ಪರೀಕ್ಷೆ ಸೇರಿದಂತೆ ಹಲವು ಹುಚ್ಚಾಟಗಳನ್ನು ನಡೆಸುವ ಆತ ಹುಬ್ಬೇರಿಸುವ ನಿರ್ಣಯ ಕೈಗೊಂಡಿದ್ದಾನೆ.
ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದನ್ನು ತಡೆಯುವ ಉದ್ದೇಶ ಈ ನಿರ್ಣಯದಲ್ಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.40ರಷ್ಟು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈ ಬಗ್ಗೆ ತಕ್ಕ ಕ್ರಮ ಕೈಗೊಳ್ಳುವಂತೆ ಕಿಮ್ ಸೂಚನೆ ನೀಡಿದ್ದಾನೆ. ಜತೆಗೆ ಆತ್ಮಹತ್ಯೆ ಕೃತ್ಯಗಳನ್ನು ಸಮಾಜ ದ್ರೋಹವೆಂದು ಪರಿಗಣಿಸುವಂತೆ ತಾಕೀತು ಮಾಡಿದ್ದಾನೆ.
