ಮುಂಬೈ : ಬಾಲಿವುಡ್‌ ಕಿಂಗ್‌ ಖಾನ್‌ ಗೆ ಜೀವ ಬೆದರಿಕೆ ಕರೆ…!

ಮುಂಬೈ: 

   ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ಗೂ  ಅವರಿಗೆ ಜೀವ ಬೆದರಿಕೆ ಕರೆ ಮಾಡಿದ್ದ ಮೊಬೈಲ್‌ ಸ‍ಂಖ್ಯೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಛತ್ತೀಸ್‌ಗಢದ ವಕೀಲರೊಬ್ಬರ ಮೊಬೈಲ್‌ನಿಂದ ಈ ಬೆದರಿಕೆ ಕರೆ ಬಂದಿರುವ ಬಗ್ಗೆ ಪೊಲೀಸ್‌ ತನಿಖೆಯಲ್ಲಿ ಬಯಲಾಗಿದ್ದು, ಇದೀಗ ಆತನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಹಲವು ವರ್ಷಗಳ ಹಿಂದೆ ಈತ ಶಾರೂಖ್‌ ಖಾನ್‌ ವಿರುದ್ಧ ದೂರು ದಾಖಲಿಸಿದ್ದ ಎನ್ನಲಾಗಿದೆ.

   ಇತ್ತೀಚೆಗೆ ಬಾಲಿವುಡ್‌ ನಟರಿಕೆ ಬೆದರಿಕೆ ಬರುವುದು ಹೆಚ್ಚಾಗಿದೆ. ಕೆಲ ದಿನಗಳಿಂದ ನಟ ಸಲ್ಮಾನ್‌ ಖಾನ್‌ಗೆ ಸಾಲು ಸಾಲು ಕೊಲೆ ಬೆದರಿಕೆ ಬಂದಿದ್ದು ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಇದೀಗ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ಗೂ  ಬೆದರಿಕೆ ಬಂದಿದೆ. ನ. 5 ರಂದು ಬಾಂದ್ರಾ ಪೊಲೀಸ್ ಠಾಣೆಗೆ ಕರೆ ಮಾಡಿ ಶಾರುಖ್‌ ಖಾನ್‌ಗೆ ಕೊಲೆ ಬೆದರಿಕೆ ಹಾಗೂ 50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ನಂತರ ಕೊಲೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭ ಮಾಡಿದ್ದರು. ಇದೀಗ ಕರೆ ಬಂದಿರುವ ಪೋನ್‌ ಸಂಖ್ಯೆಯನ್ನು ಪತ್ತೆ ಮಾಡಲಾಗಿದೆ. ಛತ್ತೀಸ್‌ಗಢದ ರಾಯ್‌ಪುರದ ವಕೀಲ ಫೈಜಾನ್ ಖಾನ್  ಮೊಬೈಲ್‌ ಸಂಖ್ಯೆಯಿಂದ ಈ ಕರೆ ಮಾಡಲಾಗಿದೆ. 1994 ರ ಅಂಜಾಂ  ಚಿತ್ರದಲ್ಲಿ ಜಿಂಕೆ ಬೇಟೆಯ ಸಂಭಾಷಣೆಯ ಕುರಿತು ಶಾರುಖ್‌ ವಿರುದ್ಧ ಇದೇ ಫೈಜಾನ್ ಖಾನ್ ದೂರು ದಾಖಲಿಸಿದ್ದರು. ಇದೀಗ ಅವರ ಮೊಬೈಲ್‌ ಸಂಖ್ಯೆಯಿಂದಲೇ ಶಾರುಖ್‌ಗೆ ಬೆದರಿಕೆ ಕರೆ ಹೋಗಿದೆ.

    ಮೊಬೈಲ್‌ ಸಂಖ್ಯೆ ಪತ್ತೆ ಮಾಡಿದ ಪೊಲೀಸರು ಹೆಚ್ಚಿನ ತಿನಿಖೆಗಾಗಿ ಫೈಜಾನ್ ಖಾನ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಅವರು ತಮ್ಮ ಮೊಬೈಲ್‌ ಕಳುವಾಗಿದೆ ನಾನು ನ. 2ರಂದೇ ಪೊಲೀಸರಿಗೆ ದೂರು ನೀಡಿದ್ದೇನೆ. ನನಗೂ ಬೆದರಿಕೆ ಕರೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

   ವಿಚಾರಣೆಯ ನಂತರ ಮಾತನಾಡಿದ ಅವರು “ನನ್ನ ಫೋನ್ ಕಳೆದುಹೋಗಿದೆ, ನಾನು ಈಗಾಗಲೇ ದೂರು ದಾಖಲಿಸಿದ್ದೇನೆ. ಇಂದು, ಮುಂಬೈ ಪೊಲೀಸರು ನನ್ನ ಮನೆಗೆ ಬಂದರು ಮತ್ತು ಅವರು ಕರೆ ಬಗ್ಗೆ ಕೇಳುತ್ತಿದ್ದಾರೆ. ನಾನು ಅವರಿಗೆ ‘ನಾನು ವಕೀಲ, ನನ್ನ ಫೋನ್ ಕಳೆದುಹೋಗಿದೆ ಮತ್ತು ಯಾರು ಕರೆ ಮಾಡಿದ್ದಾರೆ ಎಂದು ನನಗೆ ತಿಳಿದಿಲ್ಲ.ತನ್ನ ಫೋನ್ ಸಂಖ್ಯೆಗೆ ಲಿಂಕ್ ಮಾಡಿದ ವಾಟ್ಸಾಪ್ ಅನ್ನು ಬೇರೆ ಫೋನ್‌ನಲ್ಲಿ ಬಳಸಲಾಗುತ್ತಿದೆ ಎಂಬುದು ತಿಳಿದು ಬಂದಿದೆ. ನನ್ನ ಮೊಬೈಲ್‌ ಸಂಖ್ಯೆಯಿಂದ ಕರೆ ಹೋಗಿರುವುದು ನಿಜ, ಆದರೆ ಯಾರು ಮಾಡಿದ್ದಾರೆಂದು ತಿಳಿದಿಲ್ಲ, ನಾನು ಪೊಲೀಸರಲ್ಲಿ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಎಂದು ವಿನಂತಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. 

   ಆಜಾಂ ಚಿತ್ರದ ಒಂದು ಸಂಭಾಷಣೆಯಲ್ಲಿ ಶಾರುಖ್‌ ಜಿಂಕೆಯನ್ನು ಕೊಲ್ಲುವ ಮಾತನ್ನಾಡಿದ್ದರು. ಆ ಸಂಬಂಧ ಫೈಜಾನ್ ಖಾನ್, ಶಾರುಖ್‌ ಮೇಲೆ ದೂರನ್ನು ದಾಖಲಿಸಿದ್ದರು. ನನಗೆ ಬಿಷ್ಣೋಯ್‌ ಸಮಾಜದ ಹಲವು ಸ್ನೇಹಿತರಿದ್ದಾರೆ. ಅವರ ಪದ್ಧತಿಯಲ್ಲಿ ಜಿಂಕೆಯನ್ನು ಕೊಲ್ಲುವುದು ಸೇರಿದಂತೆ ಹಲವು ನಿಷೇಧವಿದೆ. ಅವರು ಅದನ್ನು ದೇವರೆಂದು ಪೂಜಿಸುತ್ತಾರೆ. ಇದು ಒಂದು ಧರ್ಮದ ನಡುವೆ ಭಿನ್ನಾಭಿಪ್ರಾಯ ತಂದಿಡುತ್ತದೆ ಅದಕ್ಕಾಗಿಯೇ ನಾನು ದೂರು ದಾಖಲಿಸಿದ್ದು ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link
Powered by Social Snap