ಲಂಡನ್‌ನಲ್ಲಿ ಫಿಟ್‌ನೆಸ್ ಪರೀಕ್ಷೆ ಪೂರ್ಣಗೊಳಿಸಿದ ಕೊಹ್ಲಿ

ಮುಂಬಯಿ: 

    ಏಕದಿನ ನಾಯಕ ರೋಹಿತ್ ಶರ್ಮಾ ಸೇರಿದಂತೆ ಇತರ ಎಲ್ಲ ಭಾರತೀಯ ಆಟಗಾರರು ಕೆಳ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರ(ಸಿಒಇ)ದಲ್ಲಿ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಿದ್ದರು. ಇದೀಗ ವಿರಾಟ್‌ ಕೊಹ್ಲಿ  ಅವರು ಲಂಡನ್‌ನಲ್ಲಿಯೇ ತಮ್ಮ ಫಿಟ್‌ನೆಸ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ. ಜತೆಗೆ ವಿದೇಶಿ ನೆಲದಲ್ಲಿ ಈ ಪರೀಕ್ಷೆಗೆ ಒಳಗಾದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ.

    ವಿರಾಟ್ ಕೊಹ್ಲಿ ಪ್ರಸ್ತುತ ಯುನೈಟೆಡ್ ಕಿಂಗ್‌ಡಂನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ಕಾರಣ ಅವರು ಯಾವಾಗ ಫಿಟ್ನೆಸ್‌ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂಬುದರ ಕುರಿತು ಗೊಂದಲ ಉಂಟಾಗಿತ್ತು.ವರದಿಯ ಪ್ರಕಾರ, ಕೊಹ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ತಮ್ಮ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ವಿಶೇಷ ಅನುಮತಿ ಕೋರಿದ್ದರು. ಇದಕ್ಕೆ ಬಿಸಿಸಿಐ ಅನುಮೋದನೆ ನೀಡಿತ್ತು.

   ಹೀಗಾಗಿ ಕೊಹ್ಲಿ ಲಂಡನ್‌ನಲ್ಲಿಯೇ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಿ ತೇರ್ಗಡೆಯಾಗಿದ್ದಾರೆ ಎನ್ನಲಾಗಿದೆ. ಐಪಿಎಲ್ ಕೊನೆಗೊಂಡ ನಂತರ ಮತ್ತು ಮರುದಿನ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ಆಚರಿಸಿದಾಗಿನಿಂದ, ಕೊಹ್ಲಿ ಯುಕೆಗೆ ಹಾರಿದರು. ಮತ್ತು ಅಂದಿನಿಂದ ಅಲ್ಲಿ ವಾಸಿಸುತ್ತಿದ್ದಾರೆ.

   ಕೊಹ್ಲಿ ಆಸೀಸ್‌ ಸರಣಿಗೂ ಮುನ್ನ ನಡೆಯಲಿರುವ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಸರಣಿಯಲ್ಲಿ ಭಾರತ ‘ಎ’ ಪರ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ. ರೋಹಿತ್‌ ಕೂಡ ಆಡುವ ಸಾಧ್ಯತೆ ಇದೆ. ಆಸೀಸ್‌ನಲ್ಲಿ ಭಾರತ ತಂಡ ಅಕ್ಟೋಬರ್‌ 19ರಿಂದ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ.

Recent Articles

spot_img

Related Stories

Share via
Copy link