ನಡುರಸ್ತೆಯಲ್ಲಿ ಶಾಲಾ ಬಾಲಕಿಯರ ಕಿತ್ತಾಟ…!

ನವದೆಹಲಿ :

     ನೀರಿನ ವಿಚಾರವಾಗಿ, ಬಾಯ್‌ಫ್ರೆಂಡ್‌ ವಿಚಾರವಾಗಿ ಹೀಗೆ ಕೆಲವೊಂದು ಕಾರಣಗಳಿಗೆ ಹುಡುಗಿಯರು, ಮಹಿಳೆಯ ನಡೆವೆ ಜಡೆ ಜಗಳಗಳು ಏರ್ಪಡುತ್ತಿರುತ್ತವೆ. ಇಂತಹ ಬೀದಿ ಕಾಳಗಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಸಾಮಾನ್ಯವಾಗಿ ಇಂತಹ ರಂಪಾಟಗಳು ಏರ್ಪಟ್ಟಾಗ ಹೆಚ್ಚಿನವರು ಜಗಳವನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಆದ್ರೆ ಇಲ್ಲೊಂದಷ್ಟು ಹುಡುಗರು ಜಡೆ ಜಗಳವನ್ನು ನೋಡಿ ಫುಲ್‌ ಎಂಜಾಯ್‌ ಮಾಡಿದ್ದಾರೆ. ಹೌದು ನಡುಬೀದಿಯಲ್ಲಿ ಶಾಲಾ ಬಾಲಕಿಯರ ಎರಡು ತಂಡಗಳ ನಡುವೆ ಜಗಳ ಏರ್ಪಟ್ಟಿದ್ದು, ಈ ಜಗಳವನ್ನು ಬಿಡಿಸುವ ಬದಲು ಅಲ್ಲಿದ್ದ ಹುಡುಗರು ಕುಣಿದು ಕುಪ್ಪಳಿಸಿದ್ದಾರೆ. ಈ ಫನ್ನಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ‌

 
   ಜನವರಿ 2 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ದೃಶ್ಯವಂತೂ ತುಂಬಾನೇ ಫನ್ನಿಯಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇವರು ಸಿನಿಮಾ ನೋಡ್ದಂಗೆ ಜಗಳವನ್ನು ಎಂಜಾಯ್‌ ಮಾಡ್ತಿದ್ದಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಹುಡುಗರೇ ಅವರನ್ನು ಜಗಳಕ್ಕೆ ಹುರಿದುಂಬಿಸುವಂತಿದೆʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

Recent Articles

spot_img

Related Stories

Share via
Copy link