ರಾಜಕೀಯ ರ‍್ಯಾಲಿಗಳಿಗೆ KSRTC ಬಸ್‌ ಬುಕ್ಕಿಂಗ್‌ : ಸಾರ್ವಜನಿಕರಿಗೆ ತೊಂದರೆ

ಬೆಂಗಳೂರು

    ಕರ್ನಾಟಕ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ರಸ್ತೆ ಸಾರಿಗೆ ಸಂಸ್ಥೆಗಳು (ಆರ್‌ಟಿಸಿ) ರಾಜಕೀಯ ರ‍್ಯಾಲಿಗಳು ಮತ್ತು ಚುನಾವಣಾ ಸಂಬಂಧಿತ ಕೆಲಸಗಳಿಗಾಗಿ ಸಾವಿರಾರು ಬಸ್‌ಗಳನ್ನು ಬಾಡಿಗೆಗೆ ನೀಡಲು ಸಿದ್ಧತೆ ನಡೆಸಿವೆ. ಇದು ನೇರವಾಗಿ ಪ್ರಯಾಣಿಕರಿಗೆ ಹೊಡೆತ ಬೀಳಲಿದೆ.

     ರಾಜ್ಯ ಸರ್ಕಾರದ ರಸ್ತೆ ಸಾರಿಗೆ ಬಸ್‌ಗಳು ಮತ್ತು ಖಾಸಗಿ ವಾಹನಗಳ ಬಾಡಿಗೆಗೆ ಶುಲ್ಕವನ್ನು ನಿಗದಿಪಡಿಸಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಿಗೆ ಪ್ರತಿ ಕಿ.ಮೀಗೆ 57.5 ರೂಪಾಯಿ ಅಥವಾ ದಿನಕ್ಕೆ 11,500 ರೂ. ಖಾಸಗಿ ಬಸ್‌ಗಳು ಪ್ರತಿ ಕಿ.ಮೀಗೆ 43.5 ರೂ ಅಥವಾ ಬೆಂಗಳೂರಿನಲ್ಲಿ ದಿನಕ್ಕೆ 8,700 ರೂ. ಉಳಿದಂತೆ ಅವರ ಬಾಡಿಗೆ ಪ್ರತಿ ಕಿ.ಮೀಗೆ 42.5 ರೂ. ಅಥವಾ ದಿನಕ್ಕೆ 8,200 ರೂಪಾಯಿ ನಿಗದಿ ಮಾಡಿದೆ ಎಂದು ಡಿಎಚ್‌ ವರದಿ ಮಾಡಿದೆ.

     ಮುಂದಿನ ಆರು ವಾರಗಳ ಕಾಲ ಕರ್ನಾಟಕ ನಡೆಯಲಿರುವ 50ಕ್ಕೂ ಹೆಚ್ಚು ರಾಜಕೀಯ ರ‍್ಯಾಲಿಗಳಿಗೆ ನಾಗರಿಕರನ್ನು ಕರೆದೊಯ್ಯಲು ಕೆಆರ್‌ಟಿಸಿ ಬಸ್‌ಗಳಿಗೆ ಬಹು ಬೇಡಿಕೆಯಿದೆ. ಇವು ಒಂದು ಮತಗಟ್ಟೆ ಯಿಂದ ಇನ್ನೊಂದು ಮತಗಟ್ಟೆಗೆ ತೆರಳುವ ಸಿಬ್ಬಂದಿಗೆ ಅವು ಅತ್ಯಗತ್ಯ ಸಾರಿಗೆ ಸಾಧನಗಳೂ ಕೂಡ ಆಗಿವೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳನ್ನು ಬಾಡಿಗೆ ನೀಡಿದರೆ ದೈನಂದಿನ ನಿಯಮಿತ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.

    ಕಳೆದ ವಾರ ಮಾರ್ಚ್ 26 ರಂದು ನಡೆದ ಅನೇಕ ರಾಜಕೀಯ ರ‍್ಯಾಲಿಗಳ ಪರಿಣಾಮವಾಗಿ ಅನೇಕ ಪ್ರಯಾಣಿಕರು ಬೆಂಗಳೂರಿನಲ್ಲಿ ಕಡಿಮೆ ಬಸ್ ಸೇವೆಗಳಿಂದಾಗಿ ಜನರು ತೊಂದರೆ ಎದುರಿಸಿದ್ದರು. ಬಿಎಂಟಿಸಿ ರಾಜಕೀಯ ರ‍್ಯಾಲಿಗಾಗಿ 1,350 ಬಸ್‌ಗಳನ್ನು ಬಾಡಿಗೆಗೆ ನೀಡಿತ್ತು. ಅದೇ ದಿನ ಮೈಸೂರಿನಲ್ಲಿ ನಡೆದ ರಾಜಕೀಯ ರ‍್ಯಾಲಿಗಾಗಿ 2,000 ಕೆಎಸ್ಆರ್‌ಟಿಸಿ ಬಸ್ಸುಗಳನ್ನು ಬುಕ್ ಮಾಡಲಾಗಿತ್ತು. ರಾಜ್ಯದಲ್ಲಿ ಪ್ರಸ್ತುತ ಕೆಎಸ್‌ಆರ್‌ಟಿಸಿ 8,100 ಮತ್ತು ಬಿಎಂಟಿಸಿ 6,758 ಬಸ್‌ಗಳನ್ನು ಹೊಂದಿದೆ.

    ಯಾರಾದರೂ ಸಾಂದರ್ಭಿಕ ಒಪ್ಪಂದದ ಅಡಿಯಲ್ಲಿ ನಮ್ಮ ಬಸ್‌ಗಳನ್ನು ಬಾಡಿಗೆ ಕೇಳಿದರೆ ನಾವು ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಿಯಮಿತ ಸೇವೆಗಳಿಗೆ ಸಾಕಷ್ಟು ಬಸ್‌ಗಳಿವೆ ಎಂದು ನಾವು ಖಚಿತಪಡಿಸಿಕೊಂಡಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಹಜವಾಗಿ ಗ್ರಾಹಕರಿಗೆ ಗುತ್ತಿಗೆ ಸೇವೆ ನೀಡಲು ಕೆಎಸ್‌ಆರ್‌ಟಿಸಿ ತನ್ನ ಮೀಸಲು ಪೂಲ್ (ಒಟ್ಟು ಫ್ಲೀಟ್‌ನ 6%) ಮತ್ತು ಆಫ್-ರೋಡ್ ಬಸ್‌ಗಳಿಂದ (ಫ್ಲೀಟ್‌ನ 1-2%) ಬಸ್‌ಗಳನ್ನು ತೆಗೆದುಕೊಳ್ಳುತ್ತದೆ. ಇದು ಕಡಿಮೆ ಬೇಡಿಕೆಯೊಂದಿಗೆ ಡಿಪೋಗಳಿಂದ ಬಸ್‌ಗಳನ್ನು ಒದಗಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link