ಯಡಿಯೂರಪ್ಪ ವಿದಾಯದಲ್ಲಿ ಆರ್‍ಎಸ್‍ಎಸ್ ಪಿತೂರಿ ; ಕೆ.ಎನ್.ರಾಜಣ್ಣ

 ತುಮಕೂರು : 

      ಯಡಿಯೂರಪ್ಪ ಅವರ ರಾಜೀನಾಮೆ ಹಿಂದೆ ಗರ್ಭಗುಡಿ ಸಂಸ್ಕøತಿಯ ಆರ್‍ಎಸ್‍ಎಸ್, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮತ್ತವರ ಟೀಂನ ಪಿತೂರಿಗಳು ಹಿಂದಿನಿಂದಲೂ ನಡೆದಿದ್ದು, ಅಂತಿಮವಾಗಿ ಸಿಎಂ ಸ್ಥಾನದಲ್ಲಿದ್ದ ನಾಯಕನ ಮನನೋಯಿಸಿ, ಕಣ್ಣಲ್ಲಿ ನೀರು ಹಾಕಿಸಿ ರಾಜೀನಾಮೆ ಕೊಡಿಸಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.

      ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಯಡಿಯೂರಪ್ಪ ವ್ಯಕ್ತಿತ್ವ ನೋಡಿ ಜನತೆ ಮತ ಚಲಾಯಿಸಿದರೇ ವಿನಃ ಮೋದಿ ಅಮಿತ್ ಷಾ ಮುಖ ನೋಡಿ ಬಿಜೆಪಿಗೆ ಮತ ಬಿದ್ದಿಲ್ಲ, ಯಡಿಯೂರಪ್ಪ ಬಿಜೆಪಿ ತೊರೆದಿದ್ದಾಗ 40 ಸೀಟ್ ಮಾತ್ರ ಪಕ್ಷಕ್ಕೆ ಬಂದಿದ್ದು, ಅವರು ಪಕ್ಷಕ್ಕೆ ಮರಳಿ ಬಂದಮೇಲೆ 100ಕ್ಕೂ ಅಧಿಕ ಸ್ಥಾನ ದೊರೆಯಿತು. ಬಿಎಸ್‍ವೈ ಹೋರಾಟದ ಹಿನ್ನೆಲೆಯಿಂದ ಬಂದಿದ್ದರಿಂದ ನನಗೆ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಇತರೆ ಮುಖ್ಯಮಂತ್ರಿಗಳಂತೆ ಆಸ್ತಿವಂತ ಕುಟುಂಬದಿಂದ ಬಂದವರಲ್ಲ.ಸಮಾಜಕ್ಕೆ ಒಳಿತು ಮಾಡಬೇಕೆಂಬ ಉದ್ದೇಶದಿಂದ ರೈತರು, ಅಸಹಾಯಕರು, ನೊಂದವರ ಪರವಾಗಿ ಹೋರಾಟ ಮಾಡಿ ಅಧಿಕಾರಕ್ಕೆ ಬಂದವರು. ಅಂತಹ ನಾಯಕನನ್ನು ಪಕ್ಷ ಕಡೆಗಾಲದಲ್ಲಿ ಉತ್ತಮವಾಗಿ ನಡೆಸಿಕೊಳ್ಳಬೇಕು. ಮೋದಿ, ಅಮಿತ್‍ಷಾ ರೈಡ್ ಮಾಡಿಸುತ್ತಾರೆಂದು ಭಯಬಿದ್ದು, ಕೇಂದ್ರ ನಾಯಕರ ವರ್ತನೆಗಳ ಬಗ್ಗೆ ಬಿಜೆಪಿ ಶಾಸಕರು ತುಟಿ ಬಿಚ್ಚದಾಗಿದ್ದಾರೆ ಎಂದರು.
ಯಡಿಯೂರಪ್ಪ ಅವರ ಮೇಲೆ ಅನೇಕ ಆರೋಪ ಹೊರೆಸಿ ಅಧಿಕಾರದಿಂದ ತೆಗೆದಿರುವ ಬಿಜೆಪಿ ನಾಯಕರು ನೂತನ ಸಿಎಂ ಆಗಿ ಇನ್ನೂ ಕೆಟ್ಟವರನ್ನು ಮಾಡಿದರೆ ಅದರ ದುಷ್ಪರಿಣಾಮ ರಾಜ್ಯದ ಜನತೆ ಎದುರಿಸಬೇಕಾಗುತ್ತದೆ. ಬಿಜೆಪಿಗೂ ಅದರಿಂದ ತೊಂದರೆ ಕಟ್ಟಿಟ್ಟ ಬುತ್ತಿ ಎಂದರು.

ಮಧ್ಯಂತರ ಚುನಾವಣೆ ಮಾಡಬಾರದು :

      ಪ್ರಸಕ್ತ ರಾಜಕೀಯ ವಿದ್ಯಮಾನದ ಹಿನ್ನೆಲೆಯಲ್ಲಿ ಮಧ್ಯಂತರ ಚುನಾವಣೆ ಸೂಕ್ತವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆ.ಎನ್.ಆರ್. ಅವರು ನಾನಂತೂ ಮಧ್ಯಂತರ ಚುನಾವಣೆಗೆ ಆಗ್ರಹಿಸೋಲ್ಲ. ಒಮ್ಮೆ ಚುನಾವಣೆಗೆ ಹೋದರೆ ಎಷ್ಟು ಖರ್ಚು ಬರುತ್ತೆ. ಜನರ ತೆರಿಗೆ ದುಡ್ಡನ್ನು ಈರೀತಿ ಅಪವ್ಯಯಮಾಡಬೇಕೇ.5ವರ್ಷಕ್ಕೆ ಆಯ್ಕೆಯಾಗಿರುವ ಶಾಸಕರು ಅಷ್ಟು ವರ್ಷ ಜನಸೇವೆ ಮಾಡಲುಅವಕಾಶ ವಾಗಬೇಕು. ಅಧಿಕಾರಕ್ಕೋಸ್ಕರ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಉಪ ಚುನಾವಣೆ, ಮಧ್ಯಂತರ ಚುನಾವಣೆಗೆ ಆಸ್ಪದ ಮಾಡಿಕೊಟ್ಟರೆ, ಮುಂದಿನ ಚುನಾವಣೆ ಖರ್ಚನ್ನು ಅವರಿಂದಲೇ ಭರಿಸಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap