ಜ.22ರಂದು ಕಿತ್ತಗಳಿಯಲ್ಲಿ KNR ಕುಟುಂಬದಿಂದ ರಾಮನಿಗೆ ವಿಶೇಷ ಪೂಜೆ….!

ಮಧುಗಿರಿ :

     ತಾಲೂಕಿನ ದೊಡ್ಡೇರಿ ಹೋಬಳಿಯ ಕಿತ್ತಗಳಿ ಗ್ರಾಮದ ಶ್ರೀರಾಮ ದೇವಾಲಯದಲ್ಲಿ ಜನವರಿ 22 ರ ಸೋಮವಾರ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಕುಟುಂಬದವರ ವತಿಯಿಂದ
ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ದೇವಾಲಯದ ಪದಾಧಿಕಾರಿಗಳು ತಿಳಿಸಿದ್ದಾರೆ.

    ಈ ಹಿಂದೆ ಸುಮಾರು 15 ಲಕ್ಷ ರೂ ಗಳ ವೆಚ್ಚದಲ್ಲಿ ದೇವಾಲಯವನ್ನು ಅಭಿವೃದ್ಧಿ ಪಡಿಸಿದ್ದು ಅಂದೂ ಬೆಳಗ್ಗೆ 9 ರಿಂದ 12 ಘಂಟೆಯ ವರೆಗೂ ಶ್ರೀರಾಮನ ಮೂರ್ತಿಗೆ ಹೋಮ , ಹವನ , ವಿಶೇಷ ಆಲಂಕಾರ , ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಹಕಾರ ಸಚಿವ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ , ಅವರ ಧರ್ಮ ಪತ್ನಿ ಜಿ.ಪಂ ಮಾಜಿ ಅಧ್ಯಕ್ಷೆ ಎಸ್.ಆರ್ ಶಾಂತಲಾ ರಾಜಣ್ಣ ಮತ್ತು ಕುಟುಂಬ ವರ್ಗದವರು ಸೇರಿದಂತೆ ಜನ ಪ್ರತಿನಿಧಿಗಳು ಮುಖಂಡರು , ಆಗಮಿಸಲಿದ್ದಾರೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap