ತುಮಕೂರು : ರಸ್ತೆಗಳಲ್ಲಿ ಬೀದಿದೀಪ ಬೆಳಗಿಸಿ ; ಸ್ಮಾರ್ಟ್‍ಸಿಟಿಗೆ ಕೆಎನ್‍ಆರ್ ಪತ್ರ

 ತುಮಕೂರು :

      ನಗರದ ಪ್ರಮುಖರಸ್ತೆಗಳು, ವೃತ್ತ, ತಿರುವುಗಳಲ್ಲಿ ಬೀದಿ ದೀಪಗಳು ಮಿನುಗದಿರುವುದು ರಾತ್ರಿಯ ವೇಳೆ ನಾಗರಿಕರ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದೆ. ಈ ಸಂಬಂಧ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರೇ ತುಮಕೂರು ಮಹಾನಗರಪಾಲಿಕೆ ಆಯುಕ್ತರು, ಸ್ಮಾರ್ಟ್‍ಸಿಟಿ ಎಂಡಿಯವರಿಗೆ ಪತ್ರ ಬರೆದು ಆಡಳಿತದ ಗಮನ ಸೆಳೆದಿದ್ದಾರೆ

      ಪಾಲಿಕೆ ಆಯುಕ್ತರಿಗೆ ಬರೆದ ಪತ್ರದಲ್ಲಿ ಕ್ಯಾತ್ಸಂದ್ರದಿಂದ ಗೋಕುಲಬಡಾವಣೆವರೆಗೆ(ಕೆ.ಎನ್.ರಾಜಣ್ಣ ಸರ್ಕಲ್) ಹಾದು ಹೋಗುವ ರಸ್ತೆ ಉತ್ತಮವಾಗಿದ್ದು, ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿಗೆ ಲಗತ್ತಾಗಿದೆ. ರಾತ್ರಿ ವೇಳೆ ಹೆಚ್ಚು ವಾಹನಗಳು ಓಡಾಡುತ್ತಿದ್ದು, ಈ ರಸ್ತೆಯಲ್ಲಿ ಸರಿಯಾಗಿ ಬೀದಿದೀಪಗಳು ಉರಿಯದೇ ಮಹಿಳೆಯರು ಮತ್ತು ವಾಹನ ಸವಾರರಿಗೆ ತುಂಬಾ ತೊಂದರೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೈಹಿಕ ದೌರ್ಜನ್ಯಗಳು, ಹಲ್ಲೆಗಳು ನಡೆಯುತ್ತಿದ್ದು ಈ ರಸ್ತೆಗೆ ಬೀದಿ ದೀಪಗಳ ಅವಶ್ಯಕತೆ ಹೆಚ್ಚಿದೆ. ಆದಷ್ಟು ಬೇಗ ಕ್ರಮ ವಹಿಸಿ ಬೀದಿದೀಪ ಅಳವಡಿಸಬೇಕೆಂದು ಕೋರಿದ್ದಾರೆ.

      ಸ್ಮಾರ್ಟ್ ಸಿಟಿ ಎಂಡಿ ಅವರಿಗೆ ಬರೆದಿರುವ ಮತ್ತೊಂದು ಪತ್ರದಲ್ಲಿ ಬಟವಾಡಿ ಸರ್ಕಲ್ (ಆರ್.ಎಸ್.ಆರಾಧ್ಯ ವೃತ್ತ) ಹೆಚ್ಚು ಜನರಿಂದ ಕೂಡಿದ ಪ್ರದೇಶವಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹಾಗೂ ಮೇಲುಸೇತುವೆ ಕೆಳಗಿನಿಂದ ತಿರುವು ಪಡೆದುರಾಜಧಾನಿ ಬೆಂಗಳೂರಿಗೆ ಹಾದು ಹೋಗುತ್ತವೆ.ಬ್ರಿಡ್ಜ್ ಕೆಳಗಡೆ ಹಾಗೂ ರಸ್ತೆಯಲ್ಲಿ ಸರಿಯಾಗಿ ಬೀದಿ ದೀಪಗಳು ಬೆಳಗದೆ ತೊಂದರೆಯಾಗಿದೆ ಬೇಗ ದೀಪ ಅಳವಡಿಸಬೇಕೆಂದು ಪತ್ರದಲ್ಲಿ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link