ರೈತರಿಗೆ ದೊಡ್ಡ ಶಾಕ್‌ ನೀಡಿದ ಕೊಚಿಮುಲ್‌ …..!

ಕೋಲಾರ:

    ಇತ್ತೀಚೆಗಷ್ಟೇ ನಂದಿನಿ ಹಾಲಿನ ದರ ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ಗ್ರಾಹಕರಿಗೆ ಶಾಕ್ ಕೊಟ್ಟಿತ್ತು. ಇದರ ಬೆನ್ನಲ್ಲೇ ಇದೀಗ ಕೋಚಿಮುಲ್ ಹಾಲು ಉತ್ಪಾದಕರಿಗೆ 2 ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿದೆ.ಕೋಚಿಮುಲ್ ಆಡಳಿತ ಮಂಡಳಿ ಹಾಲು ಉತ್ಪಾದಕರಿಗೆ ದಿಢೀರನೆ 2 ರೂಪಾಯಿ ಕಡಿತ ಮಾಡಿ ಆದೇಶಿಸಿದೆ. ಪ್ರತಿ ಲೀಟರ್ ಹಾಲಿನ ಮೇಲೆ 2 ರುಪಾಯಿ ಕಡಿತ ಮಾಡಿದ್ದು, ನಾಳೆ ಬೆಳಿಗ್ಗೆಯಿಂದ ಜಾರಿಗೆ ಬರುವಂತೆ ಕೋಚಿಮುಲ್ ಸೂಚಿಸಿದೆ. ಕೋಚಿಮುಲ್ ಇದಕ್ಕೂ ಮೊದಲು ಹಾಲು ಉತ್ಪಾದಕರಿಗೆ 33.40 ರೂಪಾಯಿ ನೀಡುತ್ತಿತ್ತು. ಆದರೆ ನಾಳೆಯಿಂದ ಹಾಲು ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್​ಗೆ 31.40 ರೂಪಾಯಿ ನೀಡಲು ಆದೇಶಿಸಿದೆ.

 

 

Recent Articles

spot_img

Related Stories

Share via
Copy link