ಮತ್ತೆ ರಾಜ್ಯದ ಭವಿಷ್ಯ ನುಡಿದ ಕೋಡಿಶ್ರೀ….!

ಹುಬ್ಬಳ್ಳಿ:

      ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದ್ದು, ಜಲಪ್ರಳಯ ಆಗುವ ಲಕ್ಷಣಗಳಿವೆ. ಪ್ರಕೃತಿ ಮುನಿದಿದ್ದು ಸರಿಯಾಗಲಿದೆ. ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜನರ ಅಕಾಲ ಮೃತ್ಯು ಸಂಭವಿಸುವ ಸಾಧ್ಯತೆ ಇದೆ’ ಎಂದು ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

      ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಾಗತಿಕ ಮಟ್ಟದಲ್ಲಿ ಜಲಪ್ರಳಯ ಸಂಭವಿಸಿ ಒಂದೆರಡು ರಾಷ್ಟ್ರಗಳು ಮುಳುಗುವ ಸಾಧ್ಯತೆ ಇದೆ. ಬೇರೆ ಎಲ್ಲೋ ಕಡೆ ಬಾಂಬ್ ಸ್ಫೋಟದಂತಹ ಘಟನೆಗಳು ಸಂಭವಿಸುತ್ತವೆ. ವಿಷಾನಿಲದಿಂದ ಭಾರತದಲ್ಲಿ ಜನರು ಅಕಾಲಿಕವಾಗಿ ಸಾವಿಗೀಡಾಗುವ ಸಂಭವ ಇದೆ’ ಎಂದರು.

     ‘ವಿಜಯದಶಮಿಯಿಂದ ಸಂಕ್ರಾಂತಿಯೊಳಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುವಂತ ದುರ್ಘಟನೆ ರಾಷ್ಟ್ರ ಮಟ್ಟದಲ್ಲಿ ನಡೆಯಲಿದೆ. ಆಳುವವರು ಅರಿತರೆ ಗಂಡಾಂತರದಿಂದ ಪಾರಾಗಬಹುದು. ಇಲ್ಲದಿದ್ದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಕರುನಾಡಿಗೂ ಕೆಲವು ಆಪತ್ತುಗಳು ಇದ್ದು, ಸಾವು ನೋವುಗಳು ಸಂಭವಿಸಲಿವೆ. ದೈವಕೃಪೆಯಿಂದ ಇವೆಲ್ಲವುಗಳಿಂದ ಪಾರಾಗಬಹುದು. ಭಾರತದಲ್ಲಿಯೂ ಒಂದು ಘಟನೆ ಆಗುತ್ತೆ. ತಪ್ಪಿಸುವಂತದ್ದು ಆಳುವವರ ಕೈಯಲ್ಲಿದೆ’ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap