ಕೊಡಿಗೇನಹಳ್ಳಿ : ಅಕ್ರಮ ಗ್ಯಾಸ್ ದಂಧೆ : ಕ್ರಿಮಿನಲ್ ಕೇಸ್ ದಾಖಲು

 ಕೊಡಿಗೇನಹಳ್ಳಿ :

      ತಾಲ್ಲೂಕಿನಲ್ಲಿ ಅನಧಿಕೃತವಾಗಿ ಗ್ಯಾಸ್ ಸಿಲಿಂಡರ್ ದಾಸ್ತಾನು ಮಾಡಿದ್ದ ಇಬ್ಬರ ವಿರುದ್ದ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದ್ದು, ಇಬ್ಬರ ವಿರುದ್ದ ಕ್ರ್ರಿಮಿನಲ್ ಪ್ರಕರಣ ದಾಖಲಾಗಿದೆ.

       ಕಳೆದ ವರ್ಷ ಏ. 15 ರಂದು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಗುರುವಾರ ರಾತ್ರಿ ತಹಸೀಲ್ದಾರ್ ಡಾ. ವಿಶ್ವನಾಥ್ ಮತ್ತು ಆಹಾರ ಇಲಾಖೆಯ ಶಿರಸ್ತೆದಾರ್ ಗಣೇಶ್ ನೇತೃತ್ವದಲ್ಲಿ ಕಡಗತ್ತೂರು ಮತ್ತು ತೆರಿಯೂರು ಗ್ರಾಮಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿ 67 ಖಾಲಿ, 12 ಭರ್ತಿ ಹಾಗೂ 5 ಕೆಜಿ ತೂಕದ 15 ಸಿಲಿಂಡರ್‍ಗಳನ್ನು ಜಪ್ತಿಮಾಡಿ ಅಗತ್ಯ ವಸ್ತುಗಳ ಕಾಯ್ದೆಯಡಿ 1955 ಹಾಗೂ ಎಲ್‍ಪಿಜಿ 2000 ಆದೇಶದ ಅನ್ವಯದಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದರು.

      ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ವಶಪಡಿಸಿಕೊಂಡ ಅನಿಲ ಸಿಲಿಂಡರ್‍ಗಳನ್ನು ಎಪಿಎಂಸಿ ಗೋದಾಮಿನಲ್ಲಿ ದಾಸ್ತಾನು ಮಾಡಿ ದೂರು ದಾಖಲಿಸದೆ ವಿಳಂಬ ಮಾಡಿರುವುದಲ್ಲದೆ, ಈ ಬಗ್ಗೆ ನಿರ್ಲಕ್ಷ್ಷಿಸಿದ್ದಾರೆ ಎಂದು ಗ್ರಾಹಕರು ದೂರು ಸಲ್ಲಿಸಿದರು. ತಡವಾಗಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಹಮದ್ ನಸರುದ್ದೀನ್ ಜ. 15 ರಂದು ಕೊಡಿಗೇನಹಳ್ಳು ಪೋಲಿಸ್ ಠಾಣೆಗೆ ಭೇಟಿ ನೀಡಿ ನಾಗರಾಜು ಹಾಗೂ ಸಿದ್ದರೆಡ್ಡಿ ವಿರುದ್ದ ಕ್ರ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap