ಕೊಡಿಗೇನಹಳ್ಳಿ:
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಎಸ್‍ಎಸ್‍ಎಸ್‍ಸಿ ಪರೀಕ್ಷೆ ಜುಲೈ19 ರ ಸೋಮವಾರ ಹೋಬಳಿಯ ಕೇಂದ್ರವಾದ ಕೊಡಿಗೇನಹಳ್ಳಿ ಸರ್ವೋದಯ ಸಂಯುಕ್ತ ಪದವಿ ಪೂರ್ವ ಕಾಲೇಜು ಕೇಂದ್ರಲ್ಲಿ ಕೋವಿಡ್ ಮಾರ್ಗ ಸೂಚಿ ಅನ್ವಯ ಸಾಮಾಜಿಕ ಅಂತರ ಪಾಲನೆ, ವಿದ್ಯಾರ್ಥಿಗಳಿಗೆ ಸ್ಯಾನಿಟೈಸೇಶನ್, ಥರ್ಮಲ್ ಸ್ಕ್ರೀನಿಂಗ್ ಬಳಿಕ ಮಾಸ್ಕ್ ವಿತರಿಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಕಳುಹಿಸಲಾಯಿತು.
ಈ ದಿನದ ಗಣೆತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೇಗೆ 258 ವಿದ್ಯಾರ್ಥಿಗಳಲ್ಲಿ 120 ಬಾಲಕಿಯರು ಮತ್ತು 138 ಬಾಲಕರು ಪರೀಕ್ಷೆಯನ್ನು ತೆಗೆದುಕೊಂಡಿದ್ದು ಒಬ್ಬ ವಿದ್ಯಾರ್ಥಿ ಗೈರುಹಾಜರಿಯಾಗಿದ್ದು ಒಟ್ಟು 257 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಈ ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಅನ್ಯ ಕೇಂದ್ರಗಳಿಂದ ವಲಸೆ ಎಂದು ಪರೀಕ್ಷಾ ಅಧೀಕ್ಷಕರಾದ ಬಿ.ಎಸ್ ಪುಟ್ಟನರಸರೆಡ್ಡಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಮಧುಗಿರಿ ರೋಟರಿ ಸಂಸ್ಥೆಯಿಂದ ಮಾಸ್ಕ್ ವಿತರಿಸಿದರು ಕೇಂದ್ರದ ಸುತ್ತ್ತ ಮುತ್ತ ಪೋಲಿಸ್ ಇಲಾಖೆಯಿಂದ ನಿಷೇದಾಜ್ಞೆ ಜಾರಿಗೊಳಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ