ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ

ಮಂಗಳೂರು :

    ಕರ್ನಾಟಕ ಸರಕಾರದ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ: 42 ವಿವಿಧ ಪಂಗಡಗಳಿದ್ದರೂ ಕ್ರಿಶ್ಚಿಯನ್ ಕೊಂಕಣಿ ಪಂಗಡಕ್ಕೆ ಮಾತ್ರವೇ ಮಣೆ ಹಾಕುವುದು ಸರಿಯಲ್ಲ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಮಾಜಿ ಸದಸ್ಯ ಅರುಣ್ ಜಿ ಶೇಟ್ ಹೇಳಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಕರ್ನಾಟಕ ಸರಕಾರದ ಕೊಂಕಣಿ ಸಾಹಿತ್ಯ ಅಕಾಡೆಮಿಯು ವರ್ಷದ ಪ್ರಶಸ್ತಿಗಳನ್ನು ಘೋಷಿಸಿದೆ. ಇಲ್ಲಿ ಪ್ರಶಸ್ತಿಗಳನ್ನು ಪಡೆದ ಸಾಹಿತಿಗಳ ವಿಚಾರದಲ್ಲಿ ನಮ್ಮ ತಕರಾರಿಲ್ಲಾ ಹಾಗೂ ಅಭಿನಂದನೆಯೂ ಇದೆ.

    ಆದರೆ ಘೋಷಿಸಿದ ಅಷ್ಟೂ ಗೌರವ ಹಾಗೂ ಪುಸ್ತಕ ಪ್ರಶಸ್ತಿಗಳು ಕ್ರಿಶ್ಚಿಯನ್ ಪಂಗಡಕ್ಕೆ ಮಾತ್ರವೇ ಒಲಿಯುವಂತೆ ಮಾಡಿದೆ ಈಗಿನ ತಥಾಕಥಿಕ ತನ್ನನ್ನು ತಾನು ಜಾತ್ಯಾತೀತ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೇಸ್ ಪಕ್ಷ ಅಧಿಕಾರದ ಸರಕಾರದ ಅಧೀನದಲ್ಲಿ ಬರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ.

   ಈ ಮ್ಯಾಜಿಕ್ ಮಾಡಲು ಸಾಧ್ಯವಾದದ್ದು ಬಹುಷಃ ಈ ಸರ್ತಿ ಕೊಂಕಣಿ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಓರ್ವ ಕ್ರಿಶ್ಚಿಯನ್ ಅನ್ನು ಕರ್ನಾಟಕ ಸರಕಾರ ನೇಮಿಸಿದ್ದೇ ಪೂರಕ ಕಾರಣ ಇರಬಹುದೇನೊ…? ಇಲ್ಲಿ ಕೊಂಕಣಿ ಭಾಷೆ ಮಾತನಾಡುವ 42 ಹಿಂದೂ ಪಂಗಡಗಳಿದ್ದರೂ. ಅದು ಕೊಂಕಣಿ ಸಾಹಿತ್ಯ ಅಕಾಡೆಮಿಯಲ್ಲಿ ದರ್ಜಾಗಿದ್ದರೂ, ಸಾಹಿತ್ಯ ಕ್ಷೇತ್ರದಲ್ಲೂ ಈ ಜಾತ್ಯಾತೀತ ಸರಕಾರ ಪ್ರಶಸ್ತಿಗಳನ್ನು ನೀಡುವುದರಲ್ಲೂ ತನ್ನ ಕೋಮು ಓಟ್ ಬ್ಯಾಂಕ್ ಅನ್ನು ಖುಷಿಪಡಿಸುವ ಹುಂಬ ಪ್ರಯತ್ನಕ್ಕೆ ಮುಂದಾಗಿದೆ ಅಂದರೆ ಎಂತಹ ದಾರ್ಷ್ಟ್ಯ ಮೆರೆದಿದೆ ಅನ್ನುವುದು ಇಲ್ಲಿ ವೇದ್ಯವಾಗುತ್ತದೆ. ಕೊನೆಗೆ ಸಾಮಾಜಿಕವಾಗಿ ಆದರೂ ಅಕಾಡೆಮಿಯ ಸದಸ್ಯರಾದವರು ಇವನ್ನು ನೋಡಬಹುದಿತ್ತು. ಇವರಿಗೆ ಇಲ್ಲಿ ತಮ್ಮ ಮತ ಚಾಲಾಯಿಸುವ ಹಕ್ಕು ಇದೆ.

   ಆದರೆ ಅವರಿಗೂ ಈ ಷಡ್ಯಂತ್ರದ ವಿರೋಧ ಹೋದಲ್ಲಿ ಎಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳಬೇಕಾದೀತೋ ಅನ್ನುವು ಭಯವು ಕಾಡಿರಬಹುದು ಪಾಪ. ಕೊಂಕಣಿ ಭಾಷಿಕರಲ್ಲಿ ಮುಸ್ಲಿಂ ರು ಇದ್ದಾರೆ ಕ್ರಿಶ್ಚಿಯನ್ ರು ಇದ್ದಾರೆ, ಅಷ್ಟೇ ಅಲ್ಲಾ 40 ವಿವಿಧ ಹಿಂದೂ ಪಂಗಡಗಳಲ್ಲಿ ಹಿಂದುಳಿದ ವರ್ಗ, ದಲಿತರು- ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತರೂ ಸೇರಿದಂತೆ ಎಲ್ಲಾ ವರ್ಗದವರಿದ್ದರೂ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರತಿಪಾದಿಸುವ ಅ.ಹಿಂ.ದ. ನ್ಯಾಯ ಈಗ ಎಲ್ಲಿ ಹೋಯಿತು…?
ಇದೀಗ ಪ್ರಕಟವಾದ ಪ್ರಶಸ್ತಿಗಳ ಪಟ್ಟಿಯನ್ನೊಮ್ಮೆ ಗಮನಿಸಿದರೆ ಈ ಒಂದು ಸಮಾದಾಯದಲ್ಲಿ ಮಾತ್ರವೇ ಸಾಹಿತಿಗಳು, ಜಾನಪದ, ಕಲೆಗಾರರು, ಪುಸ್ತಕ ಬರೆಯುವವರು ಇರುವುದು ಎಂದು ನಂಬಿದ್ದಾರೊ ಹೇಗೆ…?

   ಸಾಹಿತ್ಯ ಕ್ಷೇತ್ರದ ಅಕಾಡೆಮಿಯಲ್ಲಿಯೂ ಈ ರೀತಿಯಲ್ಲಿ ಮತೀಯವಾದ ಅಂಟಿಕೊಂಡಿರುವುದು ನಮ್ಮ ದೌರ್ಭಾಗ್ಯವೇ ಆಗಿದೆ. ಇದೀಗ ಈ ವಿಚಾರಕ್ಕೆ ವಿರೋಧ ಹೆಚ್ಚು ಆದ ಪಕ್ಷದಲ್ಲಿ ಮುಂದೆ ಸರಿಮಾಡಿಕೊಳ್ಳುತ್ತೇವೆ ಎಂಬ ಸಮಜಾಯಿಷಿ ಬರಬಹುದೇನೊ. ಆದರೆ ಇಲ್ಲಿ ನೋವುಂಟು ಮಾಡಿರುವ ವಿಚಾರ ಅಂದರೆ ಕೊಂಕಣಿ ಸಾಹಿತ್ಯ ಅಕಾಡೆಮಿ ಎಲ್ಲಾ ಜನರ ತೆರಿಗೆ ಹಣದಿಂದ ನಡೆಯುವಂತಹದು. ಇವರು ಈಗಾಗಲೇ ಹೊಸತನದ ಸಾಹಿತ್ಯ ತೃಷೆಯಿಂದ ಸೊರಗುತ್ತಿರುವ ಕರ್ನಾಟಕದ ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತಿರುವ ಸಾಹಿತಿಗಳನ್ನು ಕಲೆಗಾರರೇ ಮುಂತಾದವರನ್ನು ಮುಖ್ಯಧಾರೆಗೆ ತಂದು ನಿಲ್ಲಿಸಲು ಸೋಪಾನವಾಗುವ ಕಾರ್ಯ ಈ ಅಕಾಡೆಮಿಯಿಂದ ಆಗಬೇಕಿತ್ತು.

   ಆದರೆ ಅದರ ಗೋಜಿಗೇ ಹೋಗದ ಈ ಸರ್ತಿಯ ಕೊಂಕಣಿ ಅಕಾಡೆಮಿ ಸಮಿತಿಯು ಕೇವಲ ಬಿಲ್ ಗಳ ಮೇಲೆ ಬಿಲ್ ಗಳನ್ನು ವೆಚ್ಚ ರೂಪದಲ್ಲಿ ತೋರಿಸಿ ಬಹು ದುಬಾರಿ ಎನಿಸಿಕೊಂಡರೂ. ಕಳೆದ ಬಹು ವರ್ಷಗಳ ಬೇಡಿಯಾಗಿದ್ದ ಕೊಂಕಣಿ ಅಕಾಡೆಮಿಗೆ ಸ್ವಂತ ಭವನ ಹೊಂದುವ ಕನಸನ್ನು ಹಿಂದಿನ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಅವಧಿಯಲ್ಲಿ ಮಂಜೂರಾದ ಕೊಂಕಣಿ ಭವನ ಕಟ್ಟಡವನ್ನು ಕಟ್ಟುವ ಕಾಮಗಾರಿಯು ಶೇಕಡಾ 70ರಷ್ಟು ಕೆಲಸ ಮುಗಿಸಿದ್ದರೂ. ಕಳೆದ ಎರಡು ವರ್ಷದಿಂದ ಈ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳದೇ ಕಾಯುತ್ತಿದೆ ಎಂದರೆ ಇವರುಗಳ ಇಚ್ಚಾಶಕ್ತಿ ಎತ್ತ ಕಡೆ ಇದೆ ಅನ್ನುವುದು ಇಲ್ಲಿ ಕಾಣಬಹುದು.

   ಅಕಾಡೆಮಿಯ ಪ್ರಶಸ್ತಿಗಳು ಕಾಂಪೆಟೇಟಿವ್ ಎಕ್ಸಾಂಗಳಿಗೆ ಒಳಗಾಗಿ ನಿರ್ಣಯವಾಗುವುದಲ್ಲಾ. ಇವು ಪ್ರತಿಯೊಂದು ಪಂಗಡದಲ್ಲಿ ಅವರವರ ಕೊಂಕಣಿ ಭಾಷಾ ಸಂಸ್ಕೃತಿಗೆ ತಕ್ಕಂತೆ ಅಭಿರುಚಿಯನ್ನು ಮೂಡಿಸುವುದರ ಜೊತೆಗೆ ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಏನಾದರೂ ಸಾಧನೆಯನ್ನು ಮಾಡಬೇಕು ಎಂಬ ಛಲವನ್ನು ಸಾಹಿತಿಗಳಲ್ಲಿ ಮೂಡಿಸಲು ಸಹಕಾರಿ ಹಾಗೂ ಪ್ರೇರಕ ಅಂಶವೂ ಆಗಿದೆ. ಆದರೆ ಸ್ವಾಯತ್ತ ಮಂಡಳಿಯೇ ಆಗಿರುವ ಅಕಾಡೆಮಿಯಂತಹ ದೊಡ್ಡ ವೇದಿಕೆಗಳು ಈ ರೀತಿಯಲ್ಲಿ ಸರಕಾರದ ಕೈಗೊಂಬೆಯಂತೆ ತನ್ನ ಓಟ್ ಬ್ಯಾಂಕ್ ತೀಟೆಗೆ ಬಲಿಯಾಗುವಂತೆ ಆದಲ್ಲಿ ಅದು ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಅಂಟಿರುವ ಗ್ರಹಣ ಅನ್ನುವುದು ಅತಿಶಯೋಕ್ತಿಯಲ್ಲಾ ಎಂದಿದ್ದಾರೆ.

Recent Articles

spot_img

Related Stories

Share via
Copy link