ಶಿರಸಿ:
ಕಮಾಟಗೇರಿಯ ರವೀಶ ಗಣಪತಿ ಚನ್ನಯ್ಯ (40) ಎಂಬ ವ್ಯಕ್ತಿಯನ್ನು ಸಲಾಖೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಆಗಸ್ಟ್ 14ರ ಮಧ್ಯರಾತ್ರಿ ಸಂಭವಿಸಿದೆ. ಕೂಲಿ ಹಣ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಈ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಮಾಟಗೇರಿಯ ಮಂಜುನಾಥ ಬಸ್ಯಾ ಚನ್ನಯ್ಯ ಕೊಲೆ ಆರೋಪಿಯಾಗಿದ್ದು, ಕೊಲೆಯಾದ ವ್ಯಕ್ತಿ ಈತನ ದೂರದ ಸಂಬಂಧಿ ಎನ್ನಲಾಗಿದೆ.ಈ ಹಿಂದೆ ಕೂಡ ಮಂಜುನಾಥ್ ಚನ್ನಯ್ಯ ತನ್ನ ಸ್ವಂತ ಮಾವನನ್ನೇ ಕೊಲೆಗೈದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಯಾದ ಹಿನ್ನೆಲೆ ಹೊಂದಿದ್ದಾನೆ ಎಂದು ತಿಳಿದುಬಂದಿದೆ.ಕೊಲೆ ಮಾಡಿ ಅಲ್ಲಿಯೇ ಸಮೀಪದಲ್ಲಿದ್ದ ಆರೋಪಿಯನ್ನು ಶಿರಸಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.ತನಿಖೆ ಮುಂದುವರಿದಿದೆ.








