ಸ್ಯಾನಿಟೈಸಿಂಗ್‍ಗೆ ಆಧುನಿಕ ಯಂತ್ರೋಪಕರಣ ಬಳಸಿ – ಡಾ.ಜಿಪರಮೇಶ್ವರ್

 ಕೊರಟಗೆರೆ :

      ಯಮ ಸ್ವರೂಪಿ ಮಾರಕ ಕೊರೋನಾ ಸೋಂಕು ಹರಡುವಿಕೆಯ ತಡೆಗಾಗಿ ಕೊರಟಗೆರೆ ಪಟ್ಟಣದ 15 ವಾರ್ಡ್‍ಗಳಿಗೂ ಸ್ಯಾನಿಟೈಸಿಂಗ್ ಮಾಡುವಂತೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಡಾ.ಜಿಪರಮೇಶ್ವರ್ ಆದೇಶಿಸಿದ್ದಾರೆ.

     ಅಂತೆಯೆ ಪಟ್ಟಣ ಪಂಚಾಯ್ತಿ ಅಧಿಕಾರಿ ವರ್ಗ ಹಾಗೂ ಸದಸ್ಯರು ಶನಿವಾರ 13 ನೇ ವಾರ್ಡ್‍ನ ಸಜ್ಜನರ ಬೀದಿಯಲ್ಲಿ ಸ್ಯಾನಿಟೈಸರ್ ಸಿಂಪಡÀಣೆ ಮಾಡಿದರು. ಈ ಸಂದರ್ಭದಲ್ಲಿ ಸ್ವತಃ ಡಾ. ಜಿ ಪರಮೇಶ್ವರ್ ಹಾಜರಿದ್ದು, ಇನ್ನೂ ಉತ್ತಮ ಯಂತ್ರೋಪಕರಣಗಳನ್ನು ಬಳಸಿ ಸ್ಯಾನಿಟೈಸಿಂಗ್ ಮಾಡುವಂತೆ ತಿಳಿಸಿದರು.

     ಕೊರಟಗೆರೆ ತಾಲ್ಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ತಾಲ್ಲೂಕು ಸಾರ್ವನಿಕ ಆಸ್ಪತ್ರೆಯೊದಂರಲ್ಲೆ ದಿನಂಪ್ರತಿ ಸಾವುಗಳ ಸಂಖ್ಯೆ ಏರುತ್ತಿವೆ. ಜೊತೆಗೆ ಕೊರಟಗೆರೆ ಪಟ್ಟಣದ 15 ವಾರ್ಡ್‍ಗಳಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತದೆ. ಆದ್ದರಿಂದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿ ಸ್ಯಾನಿಟೈಸರ್ ಸಿಂಪಡಿಸುವಂತೆ ಸೂಚಿಸಿದರು.

ಕೊರಟಗೆರೆ ಪಟ್ಟಣದಲ್ಲಿ ಕೊರೋನಾ ಸೋಂಕು ನಿರ್ವಹಣೆಯ ನಿಟ್ಟಿನಲ್ಲಿ ಪಪಂ ಹೆಚ್ಚು ಕಾರ್ಯ ಪ್ರವೃತ್ತವಾಗಬೇಕು. ಗ್ರಾಮ ನೈರ್ಮಲ್ಯ, ಶುದ್ದ ಕುಡಿಯುವ ನೀರು, ಚರಂಡಿ ಶುದ್ದೀಕರಣ, ಬ್ಲೀಚಿಂಗ್ ಪೌಡರ್ ಸಿಂಪಡಣೆ ಸೇರಿದಂತೆ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು. ಪಟ್ಟಣ ವ್ಯಾಪ್ತಿಯ ಮಾರುಕಟ್ಟೆ ಸೇರಿದಂತೆ ಜನ ಸಂದಣಿ ಪ್ರದೇಶಗಳಲ್ಲಿ ವ್ಯಕ್ತಿಗತ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸದವರ ಹಾಗೂ ಅನಾವಶ್ಯಕವಾಗಿ ಅಲೆದಾಡುವ ಜನರಿಗೆ ದಂಡದ ಜೊತೆಗೆ ಅರಿವು ಮೂಡಿಸುವ ಕಾರ್ಯ ಪಪಂಯಿಂದ ಆಗಬೇಕು ಎಂದರು. ಹದಿಮೂರನೆ ವಾರ್ಡ್ ಸದಸ್ಯ ಓಬಳರಾಜು ಸಿಂಪಡಣೆ ಸಂದರ್ಭದಲ್ಲಿ ಹಾಜರಿದ್ದು, ಪಪಂ ಸಿಇಓ ಲಕ್ಷ್ಮಣ್ ಗೆ ಹಲವು ಸಲಹೆ ನೀಡಿದರು.

ವಾಸವಾಂಬ ದರ್ಶನ :

      ಡಾ. ಜಿ. ಪರಮೇಶ್ವರ್ 13 ನೆ ವಾರ್ಡ್‍ನಲ್ಲಿ ಸ್ಯಾನಿಟೈಜ್ ಸಿಂಪಡಣೆ ವೀಕ್ಷ್ಷಿಸುವ ಸಂದರ್ಭದಲ್ಲಿ ವಾಸವಿ ಸಂಘದವರು ವಾಸವಿ ಜಯಂತಿ ಪ್ರಯುಕ್ತ ದೇವಾಲಯಕ್ಕೆ ಸ್ವಾಗತಿಸಿದರು. ಆಗ ಪರಮೇಶ್ವರ್ ಖುಷಿ ಪಟ್ಟು, ನನ್ನ ಯೋಗ ನೊಡ್ರೀ, ನನಗೆ ವಾಸವಿ ಜಯಂತಿ ಎಂದು ಗೊತ್ತೇ ಇರಲಿಲ್ಲ. ಇದು ನನ್ನ ಸೌಭಾಗ್ಯ ಎಂದು ಪರಮೇಶ್ವರ್ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು, ಶ್ರೀಮಾತೆ ಸಮಾಜದಲ್ಲಿ ಅಂಟಿಕೊಂಡಿರುವ ಕೊರೋನಾ ರೋಗದಿಂದ ಜನರನ್ನು ಮುಕ್ತಿಗೊಳಿಸಲಿ ಎಂದು ಪ್ರಾರ್ಥಿಸಿದರು.

      ಕೊರಟಗೆರೆ ಪಟ್ಟಣದ 15 ವಾರ್ಡ್‍ಗಳಲ್ಲಿಯೂ ಸ್ಯಾನಿಟೈಸರ್ ಸಿಂಪಡಣೆ ಸಮರೋಪಾದಿಯಲ್ಲಿ ಸಾಗುತ್ತಿದ್ದು, ನಾನು ಪ್ರತಿನಿಧಿಸುವ 13ನೇ ವಾರ್ಡ್‍ಗೆ ಸ್ಯಾನಿಟೈಸರ್ ಒಂದು ಬಾರಿ ಪೂರ್ಣ ಸಿಂಪಡಣೆ ಮುಗಿದಿದೆ. 2ನೆ ಬಾರಿ ಸಜ್ಜನರ ಬೀದಿಯಲ್ಲಿ ಡಾ.ಜಿ ಪರಮೇಶ್ವರ್ ವೀಕ್ಷಣೆಗಾಗಿ ಅಧರ್ ಭಾಗ ಸಿಂಪಡಣೆ ಮಾಡಿದೆ. ಶೀಘ್ರವಾಗಿ 2ನೆ ಸುತ್ತಿನ ಸಿಂಪಡಣೆ ಕಾರ್ಯ ಮುಗಿಸಲಾಗುವುದು. ಈ ಭಾಗದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಸೋಂಕಿತರು ಔಷಧೋಪಚಾರಗಳ ಅವಶ್ಯಕತೆ ಇದ್ದರೆ ನನ್ನನ್ನು ಸಂಪರ್ಕಿಸಬಹುದು. ಯಾವುದೇ ಕಾಯಿಲೆಯಾಗಿರಲಿ ಔಷಧಿಗಳಿಗೆ ನನ್ನನ್ನು ಸಂಪರ್ಕಿಸಬಹುದು.

-ಕೆ.ಆರ್.ಓಬಳರಾಜು, ಪ.ಪಂ ಸದಸ್ಯ, ಕೊರಟಗೆರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link