ಕೊರಟಗೆರೆ : ಮೂಲ ಸೌಕರ್ಯಕ್ಕಾಗಿ ಗ್ರಾಪಂ ಚುನಾವಣೆ ಬಹಿಷ್ಕಾರ!!

ಕೊರಟಗೆರೆ : 

ನಾಲ್ಕು ತಿಂಗಳಿಂದ ಕುಡಿಯುವ ನೀರಿಲ್ಲ, ಬೀದಿ ದೀಪ ಇಲ್ಲದೇ ಕತ್ತಲೆ ಕವಿದಿದೆ, ಚರಂಡಿ ಸ್ವಚ್ಛತೆಯೇ ಇಲ್ಲದೇ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಮತ್ತು ಮೂಲಭೂತ ಸೌಕರ್ಯವೆ ಮರೀಚಿಕೆ ಆಗಿದೆ ಎಂದು ಆರೋಪಿಸಿ ಬಸವೇಶ್ವರ ಬಡಾವಣೆಯ ಮತದಾರರು ಗ್ರಾಪಂ ಚುನಾವಣಾ ಮತದಾನವನ್ನು ಬುಧವಾರ ಬಹಿಷ್ಕಾರ ಮಾಡಿದ್ದಾರೆ.

      ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಗ್ರಾಪಂ ವ್ಯಾಪ್ತಿಯ 1ನೇ ವಾರ್ಡಿನ ಬಸವೇಶ್ವರ ಬಡಾವಣೆಯ 100ಕ್ಕೂ ಹೆಚ್ಚು ಮನೆಗಳ 500ಕ್ಕೂ ಅಧಿಕ ಮತದಾರರು ಗ್ರಾಪಂ ಚುನಾವಣೆ ಬಹಿಷ್ಕರಿಸಿ ತಮ್ಮ ಬಡಾವಣೆಗೆ ಬರುವ ನಾಲ್ಕು ಮಾರ್ಗಗಳ ದಾರಿಗಳನ್ನು ಮುಚ್ಚಿ ಗ್ರಾಪಂ ಪಿಡಿಓ ಮತ್ತು ತಾಪಂ ಇಓ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

      ಬಸವೇಶ್ವರ ಬಡಾವಣೆಯ ವಾಸಿಯಾದ ಆಟೋ ಗೋವಿಂದ ಮಾತನಾಡಿ, ಬಸವೇಶ್ವರ ಬಡಾವಣೆಗೆ ಆಯ್ಕೆಯಾದ ಗ್ರಾಪಂ ಮಾಜಿ ಸದಸ್ಯನಿಗೆ ಈಗ ನಮ್ಮ ವಾರ್ಡು ಬೇಕಿಲ್ಲದ ಪರಿಣಾಮ ಸಮಸ್ಯೆ ಎದುರಾಗಿದೆ. ಸಮಸ್ಯೆಯ ಬಗ್ಗೆ ಗ್ರಾಪಂ ಪಿಡಿಓ ಮತ್ತು ತಾಪಂ ಇಓಗಳ ಗಮನಕ್ಕೆ 4 ತಿಂಗಳಿಂದ ತಂದರೂ ಪ್ರಯೋಜವಿಲ್ಲದ ಪರಿಣಾಮ ನಾವು ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ ಎಂದು ಹೇಳಿದರು.

      ಹೊಳವಹಳ್ಳಿ 1ನೇ ವಾರ್ಡಿನ ಸ್ಥಳೀಯ ಮಹಿಳೆ ಭಾಗ್ಯಲಕ್ಷ್ಮೀ ಮಾತನಾಡಿ, 4 ತಿಂಗಳಿಂದ ಕುಡಿಯುವ ನೀರು ಸ್ಥಗಿತವಾಗಿದೆ. ಕಳೆದ ಐದು ವರ್ಷದಿಂದ ಚರಂಡಿ ಸ್ವಚ್ಛತೆ ಇಲ್ಲದೇ ಸಾಂಕ್ರಾಮಿಕ ರೋಗ ಹರಡುತ್ತಿದೆ. ಕೊರೊನಾ ರೋಗಕ್ಕಿಂತ ಚರಂಡಿಯ ದುರ್ವಾಸನೆಯೇ ಹೆಚ್ಚಾಗಿ ವಾಸಿಸಲು ಕಷ್ಟಸಾಧ್ಯವಾಗಿದೆ. ನಮಗೆ ಸೌಲಭ್ಯ ನೀಡದ ಮೇಲೆ ನಾವು ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡುವ ಪ್ರಶ್ನೆಯೇ ಇಲ್ಲ ಎಂದು ಆರೋಪ ಮಾಡಿದರು.

      ಮತದಾನ ಬಹಿಷ್ಕರಿಸಿದ ಬಡಾವಣೆಯ ಮತದಾರರನ್ನು ಮನವೊಲಿಸಿದ ಕೊರಟಗೆರೆ ಎಎಸೈ ಯೋಗೀಶ್ ತಕ್ಷಣ ನೀರು ಸರಬರಾಜು ಮಾಡುವಂತೆ ಪಿಡಿಓಗೆ ಸೂಚನೆ ನೀಡಿದರು. ಪಿಡಿಓ ಚೆಲುವರಾಜು ಸ್ಥಳದಲ್ಲಿ ಮೊಕ್ಕಾಂ ಹೂಡಿ ಕುಡಿಯುವ ನೀರು ಸರಬರಾಜು ಆದ ನಂತರ ಸ್ವಚ್ಛತೆಯ ಕೆಲಸ ಮಾಡುವುದಾಗಿ ಭರವಸೆ ನೀಡಿದ ಘಟನೆ ನಡೆಯಿತು.

      ಮತದಾನ ಬಹಿಷ್ಕಾರ ಸಂದರ್ಭದಲ್ಲಿ ಸ್ಥಳೀಯರಾದ ಬಸವರಾಜು, ನಾಗರಾಜು, ದೇವರಾಜು, ಪಾರ್ವತಮ್ಮ, ಲಕ್ಷ್ಮಮ್ಮ, ಶಶಿಕುಮಾರ್, ರಾಮಾಂಜಿನಪ್ಪ, ರಂಗಯ್ಯ, ಅನ್ವರ್‍ಬಾಷ, ಹನುಮಂತರಾಜು, ರಾಮಯ್ಯ, ಕುಮಾರ್, ಸಿದ್ದಪ್ಪ, ತಿಮ್ಮಯ್ಯ, ಸೋಮಣ್ಣ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap