ಕೊರಟಗೆರೆ : ಗ್ರಾಪಂ ಗದ್ದುಗೆಗಾಗಿ ಕಾಂಗ್ರೆಸ್-ಜೆಡಿಎಸ್ ಪೈಪೋಟಿ

ಕೊರಟಗೆರೆ : 

      ಕೊರಟಗೆರೆ ತಾಲ್ಲೂಕಿನ 24 ಗ್ರಾಪಂ ವ್ಯಾಪ್ತಿಯ 392 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 185, ಜೆಡಿಎಸ್ ಬೆಂಬಲಿತ 128, ಬಿಜೆಪಿ ಬೆಂಬಲಿತ 32 ಮತ್ತು ಪಕ್ಷೇತರರು 47 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಾಂಗ್ರೆಸ್‍ನ ಹಾಲಿ ಶಾಸಕರು ಮತ್ತು ಜೆಡಿಎಸ್‍ನ ಮಾಜಿ ಶಾಸಕರು ತಮ್ಮ ಪಕ್ಷದ ಕಡೆಗೆ ಗ್ರಾಪಂನ ನೂತನ ಸದಸ್ಯರನ್ನು ಸೆಳೆದು ಗ್ರಾಪಂನ ಅಧ್ಯಕ್ಷತೆ ಗದ್ದುಗೆಗಾಗಿ ಹತ್ತಾರು ರೀತಿಯ ಕಸರತ್ತು ಪ್ರಾರಂಭ ಮಾಡಿದ್ದಾರೆ.

      ಕೊರಟಗೆರೆ ತಾಲ್ಲೂಕಿನ 24 ಗ್ರಾಪಂನ 392 ಸ್ಥಾನಗಳಲ್ಲಿ 222 ಮಹಿಳಾ ಮತ್ತು 170 ಪುರುಷ ಸದಸ್ಯರು ಆಯ್ಕೆಯಾಗಿದ್ದಾರೆ. ಗ್ರಾಪಂಗೆ ಎರಡನೆ ಸಲ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ 75 ಮಂದಿ ಮಾತ್ರ ಪುನರಾಯ್ಕೆಯಾಗಿದ್ದರೆ ಇನ್ನುಳಿದ ಸುಮಾರು 317 ಅಭ್ಯರ್ಥಿಗಳು ಗ್ರಾಪಂಗೆ ಹೊಸದಾಗಿ ಆಯ್ಕೆಯಾಗಿ, ಗ್ರಾಪಂನಲ್ಲಿ ನೂತನಇತಿಹಾಸ ಸೃಷ್ಟಿ ಮಾಡಿದ್ದಾರೆ. ಗ್ರಾಪಂಗೆ ಆಯ್ಕೆ ಆಗಿರುವ ಪೈಕಿ ಶೇ.67 ರಷ್ಟು ಯುವಕರೆ ಇರುವುದು ರಾಜಕೀಯ ಧುರೀಣರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

      ಗ್ರಾಪಂ ಚುನಾವಣೆಯಲ್ಲಿ ದೊಡ್ಡಸಾಗ್ಗೆರೆ ಗ್ರಾಪಂ ವ್ಯಾಪ್ತಿಯ ಅಲ್ತಾಹ್‍ಪಾಷ 0 ಮತ ಪಡೆದರೆ, ಕೋಳಾಲದ 1ನೇ ವಾರ್ಡಿನ ಶ್ರೀನಿವಾಸಮೂರ್ತಿ 728 ಮತದ ಭಾರಿ ಅಂತರ ಮತ್ತು ಹೊಳವನಹಳ್ಳಿ 3ನೆ ವಾರ್ಡಿನ ಸುಮಿತ್ರಉಮೇಶ್ 505 ಮತ ಅಂತರದ ಗೆಲುವು ಸಾಧಿಸಿದ್ದಾರೆ. ಗ್ರಾಪಂಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪರವಾಗಿ ಆಗಮಿಸಿದ್ದ ಸುಮಾರು 5 ಸಾವಿರಕ್ಕೂ ಅಧಿಕ ಜನರು ತಮ್ಮ ಬೆಂಬಲಿಗರು ಜಯಗಳಿಸಿದ ಕೂಡಲೆ ಸಾಮಾಜಿಕ ಅಂತರ ಮರೆತು, ಮಾಸ್ಕ್ ಇಲ್ಲದೆ ಕುಣಿದು ಕುಪ್ಪಳಿಸಿರುವ ಘಟನೆ ನಡದಿದೆ.

 
ಗ್ರಾಪಂ ಅಭ್ಯರ್ಥಿಗೆ ಶೂನ್ಯ ಮತ :

      ದೊಡ್ಡಸಾಗ್ಗೆರೆ ಗ್ರಾಪಂ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 115 ರಲ್ಲಿ, ಭಕ್ತರಹಳ್ಳಿಯ ಬಿಸಿಎಂ-ಎ ಮೀಸಲು ಕ್ಷೇತ್ರಕ್ಕೆ 3 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂದಾತ್‍ಪಾಷ114, ಬಾಣಯ್ಯ96 ಮತ ಪಡೆದಿದ್ದರೆ, ಅಲ್ತಾಫ್ ಪಾಷ ಶೂನ್ಯ ಸಂಪಾದನೆ ಮಾಡಿದ್ದಾರೆ. ಅಲ್ತಾಫ್‍ಪಾಷ ತನ್ನ ಮತವನ್ನು ಕೂಡ ತಾನೆ ಹಾಕಿಕೊಳ್ಳದೆ ತನ್ನ ಪ್ರತಿಸ್ಪರ್ಧಿಗೆ ಬೆಂಬಲ ನೀಡಿರುವ ಘಟನೆ ನಡೆದಿದೆ.

1 ಮತದ ಅಂತರದ ಗೆಲುವು :

      ಮಣುವಿನಕುರಿಕೆ ಕ್ಷೇತ್ರದ ಶಿವಕುಮಾರ್ ಮತ್ತು ಶಿವಣ್ಣ ತಲಾ 374 ುಮತ ಪಡೆದಿದ್ದು, ಲಾಟರಿಯಲ್ಲಿ ಶಿವಕುಮಾರ್‍ಗೆ ಜಯಲಕ್ಷ್ಮೀ ಒಲಿದಿದ್ದಾಳೆ. ಮಧ್ಯ ವೆಂಕಟಾಪುರದ ವಿಶ್ವನಾಥ ಮತ್ತು ನವೀನ ತಲಾ 477 ಮತ ಪಡೆದಿದ್ದು, ಲಾಟರಿಯಲ್ಲಿ ನವೀನ್‍ಗೆ ಜಯ ಲಭಿಸಿದೆ. ಸಿದ್ದರಬೆಟ್ಟದ ಅಖಂಡಾರಾಧ್ಯ 47 ಮತ್ತು ನಂಜಾರಾಧ್ಯ 46 ಮತ, ದಾಸರನಹಳ್ಳಿ ಕ್ಷೇತ್ರದ ಪುಟ್ಟಮ್ಮ 305 ಮತ್ತು ಲಕ್ಷ್ಮಮ್ಮ 304 ಮತ ಪಡೆದು, ಅಖಂಡಾರಾಧ್ಯ ಮತ್ತು ಪುಟ್ಟಮ್ಮ ಇಬ್ಬರೂ ಒಂದು ಮತದ ಅಂತರದಲ್ಲಿ ಜಯ ದಾಖಲಿಸಿದ್ದಾರೆ. ಬೋಚನಹಳ್ಳಿಯ ಛಾಯಾದೇವಿ 239 ಮತ್ತು ರಾಮಲಕ್ಷ್ಮಮ್ಮ 237 ಮತ ಪಡೆದು, ಛಾಯಾದೇವಿ 2 ಮತಗಳ ಅಂತರದ ಗೆಲುವು ಪಡೆದಿದ್ದಾರೆ.

       1985 ರಲ್ಲಿ ಮಂಡಲ್ ಪಂಚಾಯತಿ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಉಪಾಧ್ಯಕ್ಷ ಆಗಿದ್ದೆ. ಗ್ರಾಮದ ಅಭಿವೃದ್ದಿ ಮತ್ತು ಒಗ್ಗಟ್ಟಿನ ದೃಷ್ಟಿಯಿಂದ 2020 ರಲ್ಲಿ ಸ್ಪರ್ಧಿಸಿ ಮತ್ತೆ ಈಗ ಗ್ರಾಪಂಯ ಸದಸ್ಯ ಆಗಿದ್ದೇನೆ. ಗ್ರಾಮಸ್ಥರ ಸಲಹೆ, ಪ್ರೋತ್ಸಾಹ ಮತ್ತು ಸಹಕಾರದಿಂದ ಗ್ರಾಮದ ಅಭಿವೃದ್ದಿಯ ಜೊತೆ ಸ್ನೇಹ ಪೂರ್ವಕವಾಗಿ ಕೆಲಸ ಮಾಡುತ್ತೇನೆ. ಕ್ಯಾಮೇನಹಳ್ಳಿ ಗ್ರಾಪಂಯು ಕೊರಟಗೆರೆ ಕ್ಷೇತ್ರಕ್ಕೆ ಮಾದರಿ ಆಗುವಂತೆ ಮಾಡುತ್ತೇನೆ.

 -ಹೆಚ್.ವಿ.ವೀರಯ್ಯ, ಗ್ರಾಪಂ ಸದಸ್ಯ. ಹೆಚ್.ವಿ.ಪಾಳ್ಯ.

      ಬುಕ್ಕಾಪಟ್ಟಣ 2ನೆ ವಾರ್ಡಿನಲ್ಲಿ ಎಸ್‍ಟಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ನನಗೆ ಗ್ರಾಪಂ ಚುನಾವಣೆಯಲ್ಲಿ ಕಿರಿಯ ವಯಸ್ಸಿಗೆ ಗ್ರಾಪಂಯ ಸದಸ್ಯತ್ವ ಸ್ಥಾನ ದೊರೆತಿದೆ. ಹಿರಿಯರ ಮಾರ್ಗದರ್ಶನ ಮತ್ತು ಸಹಕಾರ ಪಡೆದು ಗ್ರಾಮದ ಅಭಿವೃದ್ದಿ ಪಡಿಸುತ್ತೇನೆ. 2020ರ ಗ್ರಾಪಂ ಚುನಾವಣೆಯಲ್ಲಿ ಯುವಕರೆ ಮೇಲುಗೈ ಸಾಧಿಸಿರುವುದೂ ವಿಶೇಷವಾಗಿದೆ.

-ವಿನಯ್, ಗ್ರಾಪಂ ಸದಸ್ಯ. ಬುಕ್ಕಾಪಟ್ಟಣ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link