ಕೊರಟಗೆರೆ :
ನಮ್ಮ ಭಾರತೀಯ ಸಂಸ್ಕøತಿ ಉಳಿದಿರುವುದೇ ನಮ್ಮ ಹಬ್ಬಗಳಲ್ಲಿ. ಆಧುನಿಕತೆ ಹೆಚ್ಚಿದರೂ ಸಹ ನಮ್ಮಲ್ಲಿ ಹಬ್ಬಗಳು ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿರುವುದು ಉತ್ತಮವಾದ ಬೆಳವಣೆಗೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ತಿಳಿಸಿದರು.
ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿನ ಗೋಶಾಲೆಯಲ್ಲಿನ ಜಾನುವಾರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಠದಲ್ಲಿ ಸಂಕ್ರಾತಿ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಸೇರಿದಂತೆ ನಮ್ಮೊಟ್ಟಿಗಿರುವಂತಹ ಪ್ರತಿಯೊಂದು ವಸ್ತುವಿಗೂ ವಿಶೇಷ ಸ್ಥಾನವನ್ನು ಕಲ್ಪಿಸುವುದು ನಮ್ಮ ಹಬ್ಬಗಳಲ್ಲಿದ್ದು ಈ ರೀತಿಯ ವಿಶೇಷ ಗೌರವ ಸೂಚಿಸುವಂತಹ ಕೆಲಸವನ್ನು ಯಾವೊಂದು ವಿಶ್ವದ ದೇಶವೂ ಮಾಡಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಠದ ಗೋವುಗಳಿಗೆ ವಿಶೇಷ ಪೂಜೆಯನ್ನು ಮಾಡಲಾಯಿತು. ಅದೇ ರೀತಿ ಲಕ್ಷ್ಮಿನರಸಿಂಹಸ್ವಾಮಿ ದೇವಾಲದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಗಂಗಮುತ್ತರಾಜ್, ರಾಜಣ್ಣ, ರುದ್ರಮೂರ್ತಿ, ನಿವೃತ್ತ ಶಿಕ್ಷಕ ನರಸಿಂಹರಾಜು, ಜಯರಾಮಯ್ಯ, ಶಂಕರಪ್ಪ ಸೇರಿದಂತೆ ಇತರರು ಇದ್ದರು.