ಕೊರಟಗೆರೆ : ಅನಾಮಿಕ ವ್ಯಕ್ತಿಯೇ ಅಂತಃರಾಜ್ಯ ಕುಖ್ಯಾತ ಕಳ್ಳ

ಕೊರಟಗೆರೆ : 

      ಇರಕಸಂದ್ರ ಕಾಲೋನಿಯ ಎಸ್‍ಎಲ್‍ಎನ್ ಪಬ್ಲಿಕ್ ಶಾಲೆಯ ಮುಂಭಾಗದ ರಸ್ತೆಬದಿಯಲ್ಲಿ ನಿಂತಿದ್ದ ಅನಾಮಿಕ ವ್ಯಕ್ತಿಯನ್ನೇ ವಿಚಾರಣೆ ನಡೆಸಿದ ಪೊಲೀಸರಿಗೆ ಐದು ಪ್ರಕರಣಗಳಿಗೆ ಬೇಕಾಗಿದ್ದ ಅಂತರಜಿಲ್ಲಾ ಕಳ್ಳನೊರ್ವ ಸಿಕ್ಕಿಬಿದ್ದಿರುವ ಘಟನೆ ಗುರುವಾರ ನಡೆದಿದೆ.

      ಕೊರಟಗೆರೆ ತಾಲೂಕು ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಇರಕಸಂದ್ರ ಕಾಲೋನಿಯ ಪಬ್ಲಿಕ್ ಶಾಲೆಯ ಮುಂಭಾಗ ನಿಂತಿದ್ದ ವ್ಯಕ್ತಿಯ ಗಮನಿಸಿದ ನಡೆಸಿದ ಮುಖ್ಯಪೇದೆ ಮೋಹನ್‍ಕುಮಾರ್ ಠಾಣೆಗೆ ಕರೆದುಕೊಂಡು ಹೋಗಿ ಪಿಎಸೈ ನವೀನ್‍ಕುಮಾರ್ ಸಮ್ಮುಖದಲ್ಲಿ ವಿಚಾರಣೆ ನಡೆಸಿದ ವೇಳೆ ಕಳ್ಳನ ಕರಾಮತ್ತು ಬಯಲಾಗಿದೆ.

      ತುಮಕೂರು ನಗರ ಬೆಳಗುಂಬ ರಸ್ತೆಯ ಜ್ಯೋತಿಪುರ ವಾಸಿವಾದ ರಘು(28) ಎಂಬಾತನೇ ಬಂಧಿತ ಆರೋಪಿ. ಈತನ ವಿರುದ್ದ ಈಗಾಗಲೇ ತುಮಕೂರು ಗ್ರಾಮಾಂತರ, ಹೆಬ್ಬೂರು, ಕೋರಾ ಮತ್ತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ವಿವಿಧ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ ಮತ್ತೇ ಬಿಡುಗಡೆ ಆದ ನಂತರವು ಮತ್ತೇ ಹಳೇ ಚಾಳಿಯನ್ನೇ ಮುಂದುವರಿಸಿದ್ದಾನೆ.

      ಜೈಲಿನಿಂದ ಬಿಡುಗಡೆಯಾದ ಆರೋಪಿ ತುಮಕೂರು ಜಿಲ್ಲೆಯ ಕೋರಾ, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರದ ದೊಡ್ಡಬೆಳವಂಗಲದ ನಾಲ್ಕು ಕಡೆ ಮತ್ತೇ ಕಳ್ಳತನ ಮಾಡಿರುವ ಪ್ರಕರಣಗಳು ಮತ್ತೇ ಬೆಳಕಿಗೆ ಬಂದಿವೆ. ಆರೋಪಿಯಿಂದ 14ಲಕ್ಷ ವೆಚ್ಚದ ಸುಮಾರು 350ಗ್ರಾಂ ಬಂಗಾರದ ಒಡವೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರು ಹೆಚ್ಚುವರಿ ಅಧೀಕ್ಷಕರು ಉದೇಶ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಮತ್ತು ಕೊರಟಗೆರೆ ಸಿಪಿಐ ಮಾರ್ಗದರ್ಶನದಲ್ಲಿ ಕೋಳಾಲ ಪಿಎಸೈ ನವೀನಕುಮಾರ್, ಹೆಚ್‍ಸಿ ಮೋಹನಕುಮಾರ್, ಮಂಜುನಾಥ, ಮಲ್ಲಿಕಾರ್ಜುನ್, ರಾಮು ನೇತೃತ್ವದ ಪೊಲೀಸರ ತಂಡವನ್ನು ಜಿಲ್ಲಾ ಎಸ್ಪಿ ಡಾ.ಕೆ.ವಂಶಿಕೃಷ್ಣ ಅಭಿನಂದಿಸಿದ್ದಾರೆ.

Recent Articles

spot_img

Related Stories

Share via
Copy link