ಕೊರಟಗೆರೆ :
ಪಟ್ಟಣದ 4 ನೆ ವಾರ್ಡ್‍ನ ಮರುಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 17 ಅಂತಿಮ ದಿನವಾಗಿದ್ದು, ಒಟ್ಟು 7 ಮಂದಿ ನಾಮ ಪತ್ರ ಸಲ್ಲಿಸಿದ್ದಾರೆ.
ಪಟ್ಟಣ ಪಂಚಾಯತಿ 4 ನೇ ವಾರ್ಡ್‍ನ ಸದಸ್ಯ ಎನ್.ಕೆ. ನರಸಿಂಹಪ್ಪರವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಾರ್ಚ್ 17 ರಂದು ನಾಮ ಪತ್ರ ಸಲ್ಲಿಸಲು ಅಂತಿಮ ದಿನವಾಗಿತ್ತು. ಕಾಂಗ್ರೆಸ್‍ನಿಂದ ಕೆ.ಎನ್ ನಂದೀಶ್, ಜೆಡಿಎಸ್‍ನಿಂದ ಮಾರುತಿ ಎನ್.ಸಿ, ಬಿಜೆಪಿಯಿಂದ ಕೆ. ಗೋಪಿನಾಥ್ ನಾಮ ಪತ್ರ ಸಲ್ಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ಆರ್.ನಾರಾಯಣ ಸ್ವಾಮಿ, ವಿಜಯಲಕ್ಷ್ಮೀ, ಸಿ.ರಂಜಿತ್, ಟಿ.ಹೆಚ್ ನಾಗರಾಜು ನಾಮಪತ್ರ ಸಲ್ಲಿಸಿದ್ದಾರೆ.
ವಿಶೇಷವೇನೆಂದರೆ ನಾಮಪತ್ರ ಸಲ್ಲಿಸಿರುವವರಲ್ಲಿ ಮೂರು ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ನಾಲ್ಕು ಮಂದಿ ಯುವಕರುಗಳಾಗಿದ್ದಾರೆ. ಪ್ರಮುಖ ಪಕ್ಷಗಳು ಸಹ ಯುವಕರಿಗೆ ಆದ್ಯತೆ ನೀಡಿವೆ. ಮಾರ್ಚ್ 18 (ಇಂದು) ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಮಾರ್ಚ್ 20 ಕಡೆಯ ದಿನವಾಗಿದೆ. ಮಾರ್ಚ್ 29 ರಂದು ಮತದಾನ ನಡೆಯಲಿದ್ದು, 31 ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ