ಕೊರಟಗೆರೆ ಪ.ಪಂ. ಚುನಾವಣೆ : ಶೇ.81.88 ಮತದಾನ

ಕೊರಟಗೆರೆ :

      ಪಪಂ ಮಾಜಿ ಸದಸ್ಯನ ಅಕಾಲಿಕ ಮರಣದಿಂದ ಕೊರಟಗೆರೆ ಪಟ್ಟಣದ 4ನೇ ವಾರ್ಡಿನ ಉಪ ಚುನಾವಣೆಯಲ್ಲಿ ಶೇ. 81.88ರಷ್ಟು ಮತದಾನ ಆಗಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಜಿದ್ದಾಜಿದ್ದಿನ ಸ್ಪರ್ಧೆ ಇದ್ದಾಗ್ಯೂ ಯಾವುದೆ ಅಹಿತಕರ ಘಟನೆ ನಡೆಯದೆ ಮತದಾನ ಸೋಮವಾರ ಶಾಂತಿಯುತವಾಗಿ ನಡೆದಿದೆ.

      ಕೊರಟಗೆರೆ ಪಟ್ಟಣ ಪಂಚಾಯಿತಿ 4ನೇ ವಾರ್ಡಿನ ಸದಸ್ಯ ನರಸಿಂಹಪ್ಪರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಮಾ.29ರಂದು ಗಿರಿನಗರದ ಸರಕಾರಿ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು 1283 ಮತಗಳಿವೆ. ಅದರಲ್ಲಿ 549 ಪುರುಷ ಮತ್ತು 499 ಮಹಿಳಾ ಮತದಾರರು ಸೇರಿದಂತೆ ಒಟ್ಟು 1048 ಜನ ಮತ ಚಲಾಯಿಸಿ ಒಟ್ಟು ಶೇ. 81.88ರಷ್ಟು ಮತದಾನವಾಗಿದೆ.

      ಕಾಂಗ್ರೆಸ್ ಪಕ್ಷದಿಂದ ನಂದೀಶ್, ನರಸಿಂಹಪ್ಪ, ಜೆಡಿಎಸ್ ಪಕ್ಷದಿಂದ ಮಾರುತಿ ಎನ್.ಸಿ, ಬಿಜೆಪಿ ಪಕ್ಷದಿಂದ ಗೋವಿನಾಥ್ ನಡುವೆ ಜಿದ್ದಾಜಿದ್ದಿನ ಚುನಾವಣೆ ನಡೆದಿದೆ. ಮೂರು ಪಕ್ಷದ ಜಿಪಂ, ತಾಪಂ, ಪಕ್ಷದ ಅಧ್ಯಕ್ಷರು ಮತ್ತು ಪಪಂ ಸದಸ್ಯರು ಮತ ಯಾಚನೆ ಮಾಡಿದ ಘಟನೆಯು ನಡೆದಿದೆ. ಮತದಾರ ಪ್ರಭು ಯಾರ ಕಡೆಗೆ ಒಲಿದಿದ್ದಾನೆ ಎಂಬುದು ಮಾ.31ರಂದು ತಿಳಿಯಲಿದೆ.

      ಮತಗಟ್ಟೆಯಲ್ಲಿ 95 ವರ್ಷದ ವಯೋವೃದ್ದೆಯೊಬ್ಬರು ತಮ್ಮ ಮೊಮ್ಮಗನ ಸಹಾಯದಿಂದ ಮತಗಟ್ಟಿ ಕೇಂದ್ರಕ್ಕೆ ಬಂದು ತಮ್ಮ ಮತ ಚಲಾಯಿಸಿ ಇತರ ಮತದಾರರಿಗೆ ಮಾದರಿಯಾದ ವಿಶೇಷತೆ ಕಂಡು ಬಂತು. ಕೊರಟಗೆರೆ ತಹಸೀಲ್ದಾರ್ ಗೋವಿಂದರಾಜು, ಸಿಪಿಐ ನದಾಫ್, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್, ಪಿಎಸೈ ಮುತ್ತುರಾಜು, ಎಎಸೈ ಯೋಗೀಶ್ ಚುನಾವಣೆಯ ಭದ್ರತೆಗೆ ನಿಯೋಜನೆಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap