ಕೊರಟಗೆರೆ :
2020-21 ನೇ ಸಾಲಿನಲ್ಲಿ ಕೊರಟಗೆರೆ ಪಟ್ಟಣ ಪಂಚಾಯಿತಿ ಆಯವ್ಯಯ ಸಭೆಯಲ್ಲಿ 2,11,922 ರೂ.ಗಳ ಉಳಿತಾಯ ಬಜೆಟ್‍ಅನ್ನು ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್ ಮಂಡಿಸಿದ್ದಾರೆ.
ಇತ್ತೀಚೆಗೆ ಪ.ಪಂ. ಅಧ್ಯಕ್ಷೆ ಮಂಜುಳಾ ಸತ್ಯನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದ ಆಯವ್ಯಯ ಮಂಡನೆ ಸಭೆಯಲ್ಲಿ ನಿರೀಕ್ಷಿತ ಆದಾಯವಾಗಿ ಕಂದಾಯ, ಅಂಗಡಿ ಮಳಿಗೆ ಬಾಡಿಗೆ, ನೀರಿನ ಬಳಕೆ ಶುಲ್ಕ, ಉದ್ದಿಮೆಗಳ ಪರವಾನಗಿ, ಅಭಿವೃದ್ದಿ ಶುಲ್ಕ, ಕಟ್ಟಡ ಪರವಾನಗಿ, ನಲ್ಲಿ ಸಂಪರ್ಕ, ಸಂತೆ ಹರಾಜು, ಪಾರ್ಕಿಂಗ್ ಶುಲ್ಕ, ಮುದ್ರಾಂಕ ಶುಲ್ಕ, ಬ್ಯಾಂಕ್ ಬಡ್ಡಿ, ಟೆಂಡರ್ ಫಾರಂ ಮಾರಾಟ, ಖಾತಾ ನಕಲು, ಬದಲಾವಣೆ, ನೆÀಲಬಾಡಿಗೆ ಸೇರಿದಂತೆ ಇನ್ನಿತರ ಆದಾಯಗಳಿಂದ ಒಟ್ಟು 1,94,29,090 ರೂ.ಗಳ ವರಮಾನವನ್ನು ತೋರಿಸಲಾಗಿದೆ. ಸರ್ಕಾರದಿಂದ ನಿರೀಕ್ಷಿತ ಅನುದಾನಗಳಾದ ಎಸ್‍ಎಫ್‍ಸಿ ಮುಕ್ತ ನಿಧಿ ಅನುದಾನ, ಎಸ್‍ಸಿಪಿ/ಟಿ.ಎಸ್.ಪಿ. 15ನೆ ಹಣಕಾಸು ಮೂಲ ಅನುದಾನ, ಸ್ವಚ್ಛ ಭಾರತ್ ಅನುದಾನ, ಬರ ಪರಿಹಾರ ನಿಧಿ, ನಲ್ಮ್ ಅನುದಾನ, ನೌಕರರ ವೇತನ, ವಿದ್ಯುತ್ ಶಕ್ತಿ ಅನುದಾನಗಳು ಸೇರಿದಂತೆ ಒಟ್ಟು 8,61,24,337 ರೂ.ಗಳ ಅಂದಾಜು ಮಾಡಲಾಗಿದೆ.
ಪಟ್ಟಣ ಪಂಚಾಯಿತಿ ನಿಧಿ ಮತ್ತು ಸರ್ಕಾರದ ಅನುದಾನ ಸೇರಿ 10,55,53,427 ರೂ. ಗಳ ಉಳಿತಾಯ ಆಯವ್ಯವನ್ನು ಮಂಡಿಸಲಾಗಿದೆ. ಉಳಿದಂತೆ ನೌಕರರ ವೇತನ, ಬೀದಿ ದೀಪ ನಿರ್ವಹಣೆ, ಸ್ವಚ್ಛತೆ ನಿರ್ವಹಣೆ, ನೀರು ಸರಬರಾಜು, ಪಂಪು, ಮೋಟಾರ್, ಕೈಪಂಪು ರಿಪೇರಿ, ಬೀದಿ ದೀಪ, ನೀರು ಸರಬರಾಜು, ವಿದ್ಯುತ್ ಬಿಲ್, ಕಛೇರಿ ಉಪಕರಣಗಳು ಮತ್ತು ಪೀಠೋಪಕರಣಗಳ ಖರ್ಚು ಶೇ.24.10 ರಲ್ಲಿ ಎಸ್.ಸಿ., ಎಸ್.ಟಿಗೆ, ಶೇ.7.25, ಹಿಂದುಳಿದ ವರ್ಗಕ್ಕೆ ಶೇ.3, ಅಂಗವಿಕಲರಿಗೆ ವೆಚ್ಚಗಳು, ರಸ್ತೆ, ಫುಟ್‍ಪಾತ್, ಚರಂಡಿ, ಮಳೆ ನೀರು ಚರಂಡಿ, ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿ, ತ್ಯಾಜ್ಯವಸ್ತುಗಳ ಸಂಬಂಧಿಸಿದ ವೆಚ್ಚ, ನೀರು ಸರಬರಾಜು ಮೂಲಗಳು, ಪಂಪು ಮೋಟಾರ್, ಪೈಪ್‍ಗಳ ಖರೀದಿ, ವಾಟರ್ ಟಾಂಕ್ ನಿರ್ಮಾಣ, ಅಭಿವೃದ್ದಿ ಪೈಪ್ ಲೈನ್, ಪಾರ್ಕ ನಿರ್ಮಾಣ, ವ್ಯಾಣಿಜ್ಯ ಮಳಿಗೆಗಳು, ಕಟ್ಟಡ, ಸಮುದಾಯ ಭವನ, ಕಾಂಪೌಂಡ್ ಕಾಮಗಾರಿಗಳು, ಬೀದಿ ದೀಪ ಅಳವಡಿಕೆ, ಕಛೇರಿ, ಸಾಮಾನ್ಯ ವೆಚ್ಚ, ರಾಷ್ಟ್ರೀಯ ಹಬ್ಬಗಳು, ಸರ್ಕಾರದ ಪಾವತಿ ಕರಗಳು, ತೆರಿಗೆ, ಹೊರಗುತ್ತಿಗೆಯ ಕೆಲಸಗಾರರಿಗೆ ವೇತನ, ಇತರೆ ಖರ್ಚುಗಳು ಒಟ್ಟಾರೆ ಸೇರಿ 10,53,41,505 ರೂ.ಗಳ ಖರ್ಚನ್ನು ಅಂದಾಜು ಮಾಡಿ ಒಟ್ಟು 2,11,922 ರೂ.ಗಳ ಉಳಿತಾಯ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ