ಕೊರಟಗೆರೆ :
ಶಾಸಕ ಡಾ.ಜಿ.ಪರಮೇಶ್ವರ್ ಮಾರ್ಗದರ್ಶನದ ಮೇರೆಗೆ ತುಮಕೂರು ಸಿದ್ಧಾರ್ಥ ಆಸ್ಪತ್ರೆಯಿಂದ 10 ಮಂದಿವುಳ್ಳ ವೈದ್ಯಕೀಯ ತಂಡ, ಸ್ಥಳೀಯ ಆಶಾ ಕಾರ್ಯಕರ್ತರು, ಕಂದಾಯ ಹಾಗೂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಪ್ರತಿದಿನ ಎರಡು ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳಲ್ಲಿರುವ ಕೊರೋನ ಸೋಂಕಿತರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಸೋಂಕಿತರ ತಪಾಸಣೆ ಮಾಡಿ ಆತ್ಮಸ್ಥೈರ್ಯ ತುಂಬಿ. ಸ್ಥಳದಲ್ಲಿಯೇ ಅವಶ್ಯವುಳ್ಳ ವಿಶೇಷ ವೈದ್ಯಕೀಯ ಕಿಟ್‍ನ್ನು ಸೋಂಕಿತರು, ಅವರೊಂದಿಗೆ ಒಡನಾಟ ಹೊಂದಿದ್ದ ಮೊದಲನೆ ಮತ್ತು ಎರಡನೆ ಸಂರ್ಪಕದವರಿಗೂ ನೀಡುತ್ತಿದ್ದಾರೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ಸೋಂಕಿತರಿಗೆ ಅತ್ಯಂತ ವಿನೂತನ ಕಾರ್ಯಕ್ರಮವನ್ನು ನೀಡಿ, ಈ ಮೂಲಕ ಇದು ಜಿಲ್ಲೆಯಲ್ಲಿಯೇ ವಿನೂತನ ಕಾರ್ಯವಾಗಿದೆ.
ಪ್ರಥಮವಾಗಿ ತಾಲ್ಲೂಕಿನ ಜಟ್ಟಿಅಗ್ರಹಾರ ಹಾಗೂ ಬುಕ್ಕಾಪಟ್ಟಣ ಗ್ರಾಪಂಯ ಗ್ರಾಮಗಳಲ್ಲಿ ಈ ವೈದ್ಯಕೀಯ ತಂಡ ಕೆಲಸ ಆರಂಭಿಸಿದ್ದಾರೆ. ಪ್ರಥಮ ಹಂತದಲ್ಲಿ ಮೇ 31 ರಿಂದ ಜೂ.11 ರವರೆಗೆ ತಾಲ್ಲೂಕು ವ್ಯಾಪ್ತಿಯಲ್ಲಿ, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತದನಂತರ ಕೋರ ಮತ್ತು ಪುರವರಗಳಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.
ಈ ಸಂದರ್ಭದಲ್ಲಿ ಸಿದ್ಧಾರ್ಥ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ್‍ಯಶಸ್ ಮಾತನಾಡಿ, ಸಂಸ್ಥೆಯ ಛಾನ್ಸಲರ್‍ರವರಾದ ಡಾ.ಜಿ.ಪರಮೇಶ್ವರ್‍ರವರ ಆದೇಶದ ಮೇರೆಗೆ ತಾಲ್ಲೂಕಿನಲ್ಲಿ ಕೊರೋನ ಸೋಂಕಿತರ ಮನೆಗಳಿಗೆ ನಮ್ಮ ವೈದ್ಯರ ತಂಡ ಭೇಟಿ ನೀಡಿ, ತಪಾಸಣೆ ನಡೆಸಿ, ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತದೆ. ಅವರ ಆಹಾರ ಮತ್ತು ಜೀವನ ಶೈಲಿಯ ಬಗ್ಗೆ ಅರಿವು ಮೂಡಿಸಿ, ಅವರಿಗೆ ವಿಶೇಷ ಮೆಡಿಕಲ್ ಕಿಟ್‍ನ್ನು ನೀಡುತ್ತಿದ್ದೇವೆ. ಅವರ ಸಂಪರ್ಕದಲ್ಲಿರುವವರಿಗೂ ಸಹ ತಪಾಸಣೆ ಮಾಡಿ ಮುಂಜಾಗ್ರತಾ ಕ್ರಮವಾಗಿ ಅವರಿಗೂ ಸಹ ಮೆಡಿಕಲ್ ಕಿಟ್‍ಗಳನ್ನು ನೀಡುತ್ತಿದ್ದೇವೆ. ಯಾವೊಬ್ಬ ಸೋಂಕಿತರಿಗೂ ಮಾತ್ರೆ ಮತ್ತು ಇನ್ನಿತರ ಔಷಧಿ ಸಾಮಗ್ರಿಗಳಿಗೆ ಕೊರತೆ ಬರಬಾರದು ಎನ್ನುವುದು ಡಾ.ಜಿ.ಪರಮೇಶ್ವರ್‍ರವರ ಆದೇಶವಾಗಿದೆ. ಅದಕ್ಕಾಗಿ ಪ್ರತಿ ಹಳ್ಳಿಗಳ ಸೋಂಕಿತರ ಮನೆಗಳಿಗೆ ಭೇಟಿ ನೀಡಿ, ಈ ಸೇವೆಯನ್ನು ಆರಂಭಿಸಿದ್ದು ಮೊದಲನೆ ದಿನ ಜಟ್ಟಿಅಗ್ರಹಾರ ಮತ್ತು ಬುಕ್ಕಪಟ್ಟಣ ಗ್ರಾಪಂಗಳಲ್ಲಿ ಆರಂಭಿಸಿ ದಿನಕ್ಕೆ ಎರಡು ಗ್ರಾಪಂಯಂತೆ ಈ ಕಾರ್ಯ ಮುಂದುವರೆಯುತ್ತದೆ ಎಂದರು.
ತಹಸೀಲ್ದಾರ್ ಗೋವಿಂದರಾಜು ಮಾತನಾಡಿ, ಶಾಸಕರಾದ ಡಾ.ಜಿ.ಪರಮೇಶ್ವರ್ ಆದೇಶದಂತೆ ಪ್ರತಿ ಹಳ್ಳಿಗಳ ಸೋಂಕಿತರ ಮನೆಗಳಿಗೆ ಸಿದ್ಧಾರ್ಥ ಸಂಸ್ಥೆಯ ವೈದ್ಯಕೀಯರ ತಂಡ ತಪಾಸಣೆಗೆ ಭೇಟಿ ನೀಡುತ್ತಿದೆ. ಅವರೊಂದಿಗೆ ನಮ್ಮ ಕಂದಾಯ ಇಲಾಖೆ, ಗ್ರಾಪಂಯ ಸಿಬ್ಬಂದಿ, ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಪೊಲೀಸ್ ಇಲಾಖೆ ಕೈ ಜೋಡಿಸಿದೆ. ಈ ಕೆಲಸವು ಅತ್ಯಂತ ಉತ್ತಮವಾಗಿದ್ದು, ಇದರಿಂದ ಕೊರೋನ ರೋಗವನ್ನು ಬೇಗ ಇಳಿಕೆ ಮಾಡಲು ಸಾಧ್ಯವಾಗುತ್ತದೆ. ಸೋಂಕಿತರಲ್ಲಿ ರೋಗ ತೀವ್ರತೆ ಹೆಚ್ಚಾಗಿ ಕಂಡುಬಂದಲ್ಲಿ ತಕ್ಷಣ ಅವರನ್ನು ಸಾರ್ವಜನಿಕ ಆಸ್ಪತ್ರೆ ಅಥವಾ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಇಒ ಶಿವಪ್ರಕಾಶ್, ಗ್ರಾಪಂ ಕೆ.ಎಲ್.ಮಂಜುನಾಥ್, ಸಿದ್ಧಾರ್ಥ ಸಂಸ್ಥೆಯ ವೈದ್ಯಕೀಯ ತಂಡದ ಡಾ.ರಾಜೇಶ್, ಡಾ.ಭಾನುಶ್ರೀ, ಡಾ.ಕೀರ್ತನಾ, ಡಾ.ಚೈತ್ರ, ಡಾ.ನೂರಪ್, ಡಾ.ಮಣಿಕಂಠ, ಡಾ.ಸುಧಾಕರ್, ಡಾ.ನಾಗೇಂದ್ರ, ಡಾ.ಜಯಪ್ರಕಾಶ್, ಡಾ.ಮನಾಲಿ, ಕಂದಾಯ, ಗ್ರಾಪಂ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ