ಕೊರೋನಾ ಸೋಂಕಿತರ ಮನೆಗೆ ಭೇಟಿ ನೀಡಿದ ಸಿದ್ಧಾರ್ಥ ವೈದ್ಯರ ತಂಡ

 ಕೊರಟಗೆರೆ : 

      ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಜಿ. ಪರಮೇಶ್ವರ್ ಕೊರೋನಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಪ್ರತಿಯೊಬ್ಬ ಸೋಂಕಿತರ ಮನೆಗೂ ಭೇಟಿ ನೀಡಿ, ತಪಾಸಣೆ ನಡೆಸಿ, ಔಷಧಿ ನೀಡುವ ಹತ್ತು ವೈದ್ಯರ ತಂಡವನ್ನು ತಮ್ಮ ಸ್ವಂತ ಖರ್ಚಿನಿಂದ ಕಳುಹಿಸಿಕೊಟ್ಟಿರುವುದು ಕ್ಷೇತ್ರದ ಜನರ ಬಗೆಗಿನ ಅವರ ಕಾಳಜಿಯನ್ನು ತೋರಿಸುತ್ತದೆ ಎಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ತಿಳಿಸಿದರು.

     ಅವರು ಸಿದ್ದಾರ್ಥ ಸಂಸ್ಥೆಯ 10 ವೈದ್ಯರ ತಂಡದ ಜೊತೆ ಕುರಂಕೋಟೆ ಮತ್ತು ತೋವಿನಕೆರೆ ಪಂಚಾಯತಿಗಳಲ್ಲಿ ಪ್ರತಿ ಕೊರೋನಾ ಸೋಂಕಿತರ ಮನೆಗೆ ಭೇಟಿ ನೀಡಿ, ಔಷಧಿ ವಿತರಣೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಸಕರಾದ ಡಾ.ಜಿ ಪರಮೇಶ್ವರ್‍ರವರ ಈ ಯೋಜನೆ ರಾಜ್ಯದಲ್ಲಿಯೇ ವಿನೂತನವಾದ ಕಾರ್ಯಕ್ರಮವಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿರುವ ಶಾಸಕರು, ಕೊರೋನಾ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ವಿವಿಧ ಸೇವೆಯನ್ನು ಮಾಡುತ್ತಿದ್ದಾರೆ. ಈ ತಜ್ಞವೈದ್ಯರ ತಂಡ ಗ್ರಾಮಗಳಲ್ಲಿ ಪ್ರತಿ ಸೋಂಕಿತರ ಮನೆಗಳಿಗೆ ಭೇಟಿ ನೀಡಿ, ಅವರ ಆರೋಗ್ಯ ಸ್ಥಿತಿಯನ್ನು ತಪಾಸಣೆ ಮಾಡುತ್ತಿದೆ. ಅವರ ಮನಸ್ಸಿನಲ್ಲಿ ಧೈರ್ಯ ತುಂಬುವ ಕೆಲಸ ಮಾಡುವುದರೊಂದಿಗೆ, ಸೋಂಕಿತರು ಮತ್ತು ಅವರ ಸಂಪರ್ಕದಲ್ಲಿರುವವರಿಗೆ ಅಗತ್ಯ ಔಷಧಿಗಳನ್ನು ಸ್ಥಳದಲ್ಲಿಯೇ ನೀಡುತ್ತಿದ್ದಾರೆ. ಇದು ನಿಜವಾದ ಸೇವೆ ಎಂದರು.

      ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಶಾಸಕರ ಈ ವೈದ್ಯಕೀಯ ತಂಡದೊಂದಿಗೆ ಆಶಾ ಕಾರ್ಯಕರ್ತರು, ಕಂದಾಯ ಅಧಿಕಾರಿಗಳು, ಗ್ರಾಪಂ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಒಟ್ಟುಗೂಡಿ, ರೋಗ ನಿರ್ಮೂಲನೆಗೆ ಶ್ರಮ ಪಡುತ್ತಿದೆ. ಇಂತಹ ಕೆಲಸಗಳು ನೇರವಾಗಿ ಕೊರೋನಾ ಸೋಂಕಿತರನ್ನೇ ತಲುಪುವುದರಿಂದ ಸೋಂಕಿತರಲ್ಲಿ ರೋಗಗಳ ಇಳಿಮುಖ ಶೀಘ್ರವಾಗುತ್ತಿದೆ. ಶಾಸಕರು ಈಗಾಗಲೇ ತಾಲ್ಲೂಕಿನಲ್ಲಿ 24×7 ಎರಡು ಉಚಿತ ಆ್ಯಂಬ್ಯುಲೆನ್ಸ್‍ಗಳನ್ನು ಆ್ಯಕ್ಸಿಜನ್‍ನೊಂದಿಗೆ ಸೇವೆಗೆ ನೀಡಿದ್ದಾರೆ. ಪ್ರತಿ ಗ್ರಾಮ ಪಂಚಾಯತಿ ಮತ್ತು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ವಿಚಾರಿಸಿ, ಸರ್ಕಾರದಿಂದ ಅವಶ್ಯಕ ಸೌಲಭ್ಯಗಳನ್ನು ನೀಡುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. ಈ ತಜ್ಞವೈದ್ಯರ ತಂಡ ಇಡೀ ಕ್ಷೇತ್ರದಲ್ಲಿಯೇ ಉತ್ತಮವಾದ ಕೆಲಸ ಮಾಡುತ್ತಿದ್ದು, ಕ್ಷೇತ್ರದ ಜನರ ಪರವಾಗಿ ಶಾಸಕರಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಪುಟ್ಟರಾಜು, ಎಸ್‍ಎಲ್‍ಎನ್ ಸ್ವಾಮಿ, ಸಿದ್ದಪ್ಪ, ನಾರಾಯಣಪ್ಪ, ಅರವಿಂದ್, ಸೈಯದ್‍ಪಾಷಾ, ಮಹೇಶ್‍ಕುಮಾರ್, ಮಂಜುನಾಥ್ ಕೆ.ಎಲ್, ವೆಂಕಟೇಶ್, ಶಶಿಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link