3ನೆ ಅಲೆ ತಡೆಗೆ ಸರಕಾರ ವಿಫಲ : ಪರಮೇಶ್ವರ ಆರೋಪ

 ಕೊರಟಗೆರೆ :

      ಮುಖ್ಯಮಂತ್ರಿ ಬದಲಾವಣೆ ಬಿಜೆಪಿಯ ಆಂತರಿಕ ವಿಚಾರ. ಕೊರೊನಾ ನಿರ್ವಹಣೆಯ ತುರ್ತು ಪರಿಸ್ಥಿತಿಯ ನಡುವೆ ಬಿಜೆಪಿ ನಾಯಕರ ಸಿಎಂ ಬದಲಾವಣೆಯ ಹೇಳಿಕೆ ಸರಿಯಲ್ಲ. ಬಿಜೆಪಿ ಹೈಕಮಾಂಡ್ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ನಮ್ಮ ರಾಜ್ಯದ ಜನತೆಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಎಚ್ಚರಿಸಿದರು.

      ಅವರು ಪಟ್ಟಣದ ತಾಪಂ ಆವರಣದಲ್ಲಿ ಪಡಿತರ ವಿತರಕರ ಸಂಘದಿಂದ ಬುಧವಾರ ಏರ್ಪಡಿಸಲಾಗಿದ್ದ ಬಡ ಜನತೆಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದ ವೇಳೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ದ ಹರಿಹಾಯ್ದರು. ತಜ್ಞರ ಸಲಹೆ ತಿರಸ್ಕಾರ ಮಾಡಿದ ಸರಕಾರದ ನಿರ್ಲಕ್ಷ್ಯವು ಕೊರೊನಾ ಹರಡುವಿಕೆ ಹೆಚ್ಚಾಗಲು ಕಾರಣವಾಗಿದೆ. ಮುಖ್ಯಮಂತ್ರಿ ಮತ್ತು ಸಚಿವರ ನಡುವೆ ಸಮನ್ವಯ ಕೊರತೆ ಇದೆ. ಸ್ವಯಂ ಇಚ್ಛಾಶಕ್ತಿ ಆದೇಶಗಳೆ ಮುಖ್ಯಮಂತ್ರಿಗೆ ಸಂಕಷ್ಟ ತಂದಿವೆ. ಸಿಎಂ ಬದಲಾವಣೆಯ ಬಿಜೆಪಿ ನಾಯಕರ ಹೇಳಿಕೆಯಿಂದ ಯಡಿಯೂರಪ್ಪ ದೃಷ್ಟಿ ಕುರ್ಚಿಯ ಕಡೆ ತಿರುಗಿದೆ ಎಂದು ಆರೋಪ ಮಾಡಿದರು.

      ಕರ್ನಾಟಕ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷಟಿ ಕೃಷ್ಣಪ್ಪ ಮಾತನಾಡಿ, ಬಡಜನರ ನೇರ ಸಂಪರ್ಕ ಇರುವ ನ್ಯಾಯ ಬೆಲೆ ಅಂಗಡಿ ಮಾಲೀಕರಿಗೆ ಕೊರೊನಾ ವಾರಿಯರ್ಸ್, ಮೃತಪಟ್ಟ ಮಾಲೀಕರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಬೇಕಿದೆ. ಆಹಾರ ಸಚಿವ ಉಮೇಶ್‍ಕತ್ತಿಯ ಮನೆಯಿಂದ ಬಡಜನತೆಗೆ ಪಡಿತರ ನೀಡುತ್ತಿಲ್ಲ. ಜನರ ತೆರಿಗೆಯಿಂದ ನೀಡುತ್ತಿದ್ದಾರೆ. ಸರಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತಕ್ಕ ಪ್ರತಿಫಲ ಅನುಭವಿಸಬೇಕಿದೆ ಎಂದು ಎಚ್ಚರಿಕೆ ನೀಡಿದರು.

      ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಕಾರ್ಯದರ್ಶಿ ನಾಗೇಶ್, ರಮೇಶ್, ಯುವ ಅಧ್ಯಕ್ಷ ವಿನಯ್, ತುಮುಲ್ ನಿರ್ದೇಶಕರಾದ ಈಶ್ವರಯ್ಯ, ಚಂದ್ರಶೇಖರ್, ಪಪಂ ಸದಸ್ಯರಾದ ಓಬಳರಾಜು, ನಾಗರಾಜು, ನಂದೀಶ್ ಸೇರಿದಂತೆ ಇತರರು ಇದ್ದರು.

ಆಹಾರ ಇಲಾಖೆಯಿಂದ ಕೊರೊನಾ ದ್ವಿಗುಣ :

      ಆಹಾರ ಇಲಾಖೆ ಸಚಿವ ಉಮೇಶ್‍ಕತ್ತಿಗೆ ಬಡವರ ಸಂಕಷ್ಟ ತಿಳಿದಿಲ್ಲ. ಆಹಾರ ಇಲಾಖೆಯ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಪಡಿತರ ಪಡೆಯಲು ಮೊಬೈಲ್ ಓಟಿಪಿ ಅಥವಾ ಚೆಕ್‍ಲಿಸ್ಟ್‍ಗೆ ಅವಕಾಶ ಇಲ್ಲದಿರುವ ಪರಿಣಾಮ ಕೊರೊನಾ ರೋಗ ದ್ವಿಗುಣ ಆಗುತ್ತಿದೆ. ಪ್ರತಿನಿತ್ಯ ನ್ಯಾಯಬೆಲೆ ಅಂಗಡಿಗೆ 400 ಗ್ರಾಹಕರು ಹೆಬ್ಬೆಟ್ಟು ಇಡುತ್ತಿರುವ ಪರಿಣಾಮ ಸಾಮಾಜಿಕ ಅಂತರ ಕಷ್ಟಸಾಧ್ಯ ಆಗುತ್ತಿದೆ. ಕೊರೊನಾ ರೋಗ ಹರಡಲು ಆಹಾರ ಇಲಾಖೆಯೆ ಪರೋಕ್ಷವಾಗಿ ಕಾರಣವಾಗಿದೆ ಎಂದು ಕರ್ನಾಟಕ ನ್ಯಾಯಬೆಲೆ ಅಂಗಡಿ ಮಾಲೀಕರ ಅಧ್ಯಕ್ಷ ಟಿ.ಕೃಷ್ಣಪ್ಪ ಆರೋಪಿಸಿದ್ದಾರೆ.

      ಅಂತಾರಾಜ್ಯದ ಪಡಿತರ ವಿತರಿಸುವ ಮಾಲೀಕರಿಗೆ 250 ರೂ. ಕಮಿಷನ್ ನೀಡ್ತಾರೆ. ನಮ್ಮ ರಾಜ್ಯದಲ್ಲಿ ಕೇವಲ 100 ರೂ. ನಿಡ್ತಾರೆ. ಪಡಿತರ ವಿತರಣೆಗೆ ಮೊಬೈಲ್ ಓಟಿಪಿ ಅಥವಾ ಚೆಕ್‍ಲಿಸ್ಟ್‍ಗೆ ಅವಕಾಶ ನೀಡಬೇಕಾದ ಅನಿವಾರ್ಯತೆ ಇದೆ. ಕೊರೊನಾ ರೋಗ ಹರಡಲು ಆಹಾರ ಇಲಾಖೆಯೆ ಪರೋಕ್ಷವಾಗಿ ಕಾರಣವಾಗಿದೆ. ಆಹಾರ ಸಚಿವ ಮತ್ತು ಮುಖ್ಯಮಂತ್ರಿ ತಕ್ಷಣ ನ್ಯಾಯಬೆಲೆ ಅಂಗಡಿ ಮಾಲೀಕರ ಮನವಿಗೆ ಸ್ಪಂದಿಸಬೇಕಿದೆ.

-ಡಾ.ಜಿ.ಪರಮೇಶ್ವರ, ಶಾಸಕ, ಕೊರಟಗೆರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap