ಕೊರಟಗೆರೆ : ಪಪಂ 9ನೇ ವಾರ್ಡಿನ ಸದಸ್ಯರ ಸದಸ್ಯತ್ವ ರದ್ದು!!

ಕೊರಟಗೆರೆ:  

      ಜೆಡಿಎಸ್ ಪಕ್ಷದಚಿಹ್ನೆಯಿಂದಆಯ್ಕೆಯಾಗಿ ಪಪಂಯಅಧ್ಯಕ್ಷ ಮತ್ತುಉಪಾಧ್ಯಕ್ಷಚುನಾವಣೆಯಲ್ಲಿ ಪಕ್ಷ ವಿರೋಧಿಚಟುವಟಿಕೆ ನಡೆಸಿದ ಆರೋಪದ ಮೇಲೆ ಪಪಂ ಸದಸ್ಯೆಯ ಸದಸ್ಯತ್ವ ರದ್ದುಪಡಿಸಿ ತುಮಕೂರುಜಿಲ್ಲಾಧಿಕಾರಿ ನೀಡಿರುವತೀರ್ಪುಕರ್ನಾಟಕರಾಜಕೀಯ ವಲಯಕ್ಕೆಎಚ್ಚರಿಕೆಯ ಪಾಠವಾಗಿದೆಎಂದುಕೊರಟಗೆರೆಜೆಡಿಎಸ್‍ಕಾರ್ಯಧ್ಯಕ್ಷ ನರಸಿಂಹರಾಜು ತಿಳಿಸಿದರು.

      ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿಜೆಡಿಎಸ್ ಪಕ್ಷದ ವತಿಯಿಂದ ಬುಧವಾರಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

      ಜೆಡಿಎಸ್ ಪಕ್ಷದಿಂದಟಿಕೇಟ್ ಪಡೆದುಕೊರಟಗೆರೆ ಪಪಂ 9ನೇ ವಾರ್ಡಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರಕೊರಟಗೆರೆ ಪಪಂ ಅಧ್ಯಕ್ಷ ಮತ್ತುಉಪಾಧ್ಯಕ್ಷಚುನಾವಣೆಗೆ ಮತ ಚಲಾಯಿಸಲು ವಿಪ್ ನೀಡಿದ್ದರೂ ಸಹ ಪಕ್ಷದಆದೇಶವನ್ನು ಉಲ್ಲಂಘಿಸಿ ಚುನಾವಣೆಗೆಗೈರಾಗಿಕಾಂಗ್ರೇಸ್ ಪಕ್ಷದಜೊತೆ ಗುರುತಿಸಿಕೊಂಡಿದ್ದ ಆರೋಪದ ಮೇಲೆ 9ನೇ ವಾರ್ಡಿನ ಭಾಗ್ಯಮ್ಮಗಣೇಶ್‍ಎಂಬುವರ ಪಪಂ ಸದಸ್ಯತ್ವ ರದ್ದುಪಡಿಸಿ ಜಿಲ್ಲಾಧಿಕಾರಿಆದೇಶ ಮಾಡಿದ್ದಾರೆಎಂದು ಹೇಳಿದರು.

      ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಅಧಿನಿಯಮ 1987ರ ಕಲಂ 4ರಡಿ ಪಪಂಯ 9ನೇ ವಾರ್ಡಿನ ಸದಸ್ಯೆ ವಿಪ್ ಸ್ವೀಕರಿಸಿದ ಸ್ವೀಕೃತಿ ಪತ್ರ, ವಿಪ್‍ನಆದೇಶ ಪೋಷಣೆ, ದಿನಪತ್ರಿಕೆ ಪ್ರತಿ, ಚುನಾವಣೆ ವೇಳೆ ಹಾಜರಾದ ಸದಸ್ಯರುಗಳ ಹಾಜರಾತಿ ಪ್ರತಿ, ಸಭೆಯ ನಡವಳಿಕೆ ದೃಢೀಕೃತ ಪ್ರತಿ, ಅಂಚೆ ರಸೀದಿ, ಅಂಚೆ ಸ್ವೀಕೃತಿ, 6ಪೋಟೋಗಳು, ರೇಣುಕಾಆಸ್ಪತ್ರೆಯಲ್ಲಿ ನೀಡಿರುವ ನೋಂದಣಿ ವಹಿ ಉಧೃತದಾಖಲೆಯಂತೆ ಪಪಂ ಸದಸ್ಯೆಯ ಸದಸ್ಯತ್ವಅನರ್ಹಆದೇಶವನ್ನು ಮಾಡಿದ್ದಾರೆಎಂದು ತಿಳಿಸಿದರು.

      ಕೊರಟಗೆರೆಜೆಡಿಎಸ್‍ಅಲ್ಪಸಂಖ್ಯಾತರಘಟಕದಅಧ್ಯಕ್ಷಕಲೀಂವುಲ್ಲಾ ಮಾತನಾಡಿಜೆಡಿಎಸ್ ಪಕ್ಷದಚಿಹ್ನೆಯಿಂದ ಗೆಲುವು ಸಾಧಿಸಿ ಅಧಿಕಾರದಆಸೆಗೊಸ್ಕರ ಪಕ್ಷ ವಿರೋಧಿ ಕೆಲಸ ಮಾಡಿದಕೊರಟಗೆರೆ ಪಪಂಯ 9ನೇ ವಾರ್ಡಿನ ಸದಸ್ಯೆಯ ಸದಸ್ಯತ್ವರದ್ದಿನಆದೇಶಕರ್ನಾಟಕರಾಜಕೀಯರಂಗಕ್ಕೆ ಮಾದರಿಯಾಗಿದೆ.ಪಕ್ಷದಚಿಹ್ನೆಯಿಂದ ಗೆಲುವು ಸಾಧಿಸಿ ಅನ್ಯಮಾರ್ಗದಲ್ಲಿಅಧಿಕಾರದಗದ್ದುಗೆ ಹಿಡಿಯುವ ಸದಸ್ಯರಿಗೆ ಪ್ರಸ್ತುತಆದೇಶಎಚ್ಚರಿಕೆಯಗಂಟೆಯಾಗಿದೆಎಂದು ಹೇಳಿದರು.

     ಸುದ್ದಿಗೋಷ್ಟಿಯಲ್ಲಿಕೊರಟಗೆರೆ ನಗರಘಟಕಅಧ್ಯಕ್ಷ ನಾಗೇಂದ್ರ, ಪಪಂ ಸದಸ್ಯರಾದ ಲಕ್ಷ್ಮೀನಾರಾಯಣ್, ಕೆ.ಎನ್.ನಟರಾಜು, ಪುಟ್ಟನರಸಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ಶಿವಾನಂದ, ಮುಖಂಡರಾದರಮೇಶ್, ಕಲೀಂವುಲ್ಲಾ, ಆನಂದ್, ಕೇಬಲ್‍ಸೈಪುಲ್ಲಾ, ಹನುಮಂತರಾಜು, ಅಭಿಲಾಷ್, ಸೇರಿದಂತೆಇತರರುಇದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link