ಜಾತ್ರೆಯಲ್ಲಿ ಹೆಣ್ಣುಮಕ್ಕಳಿಗೆ ಬಳೆ ಕೊಡಿಸಿದ ಶಾಸಕ ಪರಂ

  ಕೊರಟಗೆರೆ :

      ಗ್ರಾಮ ದೇವತೆ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಅಣ್ಣನ ರೀತಿ ಶಾಸಕ ಡಾ. ಜಿ ಪರಮೇಶ್ವರ್ ಕೈ ಬಳೆಗಳನ್ನು ಕೊಡಿಸಿ ಮುಂದೆ ನಿಂತು ತೊಡಿಸಿಸಿದ ಅಪರೂಪದ ಘಟನೆ ತಾಲ್ಲೂಕಿನ ತುಂಬಾಡಿ ಗ್ರಾಮದಲ್ಲಿ ನಡೆಯಿತು.

ಅವರು ತುಂಬಾಡಿ ಗ್ರಾಮದ ಗ್ರಾಮ ದೇವತೆ ಮಾರಮ್ಮನವರ ಉತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಮರಳಿ ಬರುವಾಗ ಉತ್ಸವದಲ್ಲಿ ಇಟ್ಟಿದ್ದ ಬಳೆ ಅಂಗಡಿಯ ಮುಂದೆ ನೂರಾರು ಹೆಣ್ಣು ಮಕ್ಕಳು ಬಳೆಗಳನ್ನು ಕೊಂಡುಕೊಳ್ಳುವುದನ್ನು ಕಂಡ ಶಾಸಕರು, ಅಲ್ಲಿದ್ದ ಹೆಣ್ಣು ಮಕ್ಕಳಿಗೆ ತಾವೇ ಮುಂದೆ ನಿಂತು, ಅಣ್ಣನ ರೀತಿ ಬಳೆಗಳನ್ನು ತೊಡಿಸುವುದಾಗಿ ತಿಳಿಸಿ, ಬಳೆ ತೊಡಿಸುವವರಿಗೆ ಹಣ ನೀಡಿ, ಎಲ್ಲರಿಗೂ ಅವರು ಕೇಳುವಷ್ಟು ಬಳೆಗಳನ್ನು ನೀಡುವಂತೆ ತಿಳಿಸಿ ಮುಂದೆ ನಿಂತು ಅಣ್ಣನ ರೀತಿ ಮಹಿಳೆಯರಿಗೆ ಬಳೆ ತೊಡಿಸಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿದರೆ, ಗ್ರಾಮವು ರೋಗ ಮುಕ್ತವಾಗುವುದೆಂದು ಹಲವು ವರ್ಷಗಳಿಂದ ಜನರಲ್ಲಿ ನಂಬಿಕೆ ಇದ್ದು, ಅದಕ್ಕಾಗಿ ಈ ವಿಶೇಷ ಉತ್ಸವನ್ನು ಪ್ರತಿ ಗ್ರಾಮದಲ್ಲಿಯೂ ಮಾಡುತ್ತಿದ್ದಾರೆ. ಇಂತಹ ಧಾರ್ಮಿಕ ಆಚರಣೆಯಲ್ಲಿ ಜನರು ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು ಎಲ್ಲರೂ ತಪ್ಪದೇ ಮಾಸ್ಕ್‍ನ್ನು ಧರಿಸುವುನ್ನು ಮರೆಯಬಾರದು ಎಂದು ತಿಳಿಸಿದರು.

      ಗ್ರಾಮದ ದೇವತೆ ಉತ್ಸವಗಳಿಗೆ ಮದುವೆಯಾಗಿ ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳು ಊರಿಗೆ ಉತ್ಸವಕ್ಕೆ ಬರುವುದು ಪ್ರತೀತಿ. ಇಂತಹ ಸಮಯದಲ್ಲಿ ಅವರು ಬಳೆಗಳನ್ನು ಕೊಂಡುಕೊಳ್ಳುವುದು ಸಂಪ್ರದಾಯ. ಇಂತಹ ಸಮಯದಲ್ಲಿ ಕ್ಷೇತ್ರದ ಶಾಸಕನಾಗಿ ಹೆಣ್ಣು ಮಕ್ಕಳಿಗೆ ಅಣ್ಣನಾಗಿ ಬಳೆಯನ್ನು ಕೊಡಿಸಿರುವುದು ಸಂತಸ ತಂದಿದೆ. ಇದು ನಮ್ಮ ಅನಾದಿ ಕಾಲದಿಂದಲೂ ನಡೆದುಕೊಂದು ಬರುತ್ತಿರುವ ಸಂಪ್ರದಾಯ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link