ಕೊರಟಗೆರೆ :
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕಸಾಗ್ಗೆರೆ ಗ್ರಾಮದಲ್ಲಿ ಎಮ್ಮೆ ಮೇಯಿಸಲು ಹೋಗಿದ್ದ ವೃದ್ದೆ ಸೇರಿದಂತೆ 4 ಎಮ್ಮೆಗಳು ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಚಿಕ್ಕಸಾಗ್ಗೆರೆ ಗ್ರಾಮದ ಖಾಸಗಿ ಜಮೀನಿನಲ್ಲಿ ಎಮ್ಮೆ ಮೇಯಿಸಿಲು ಹೋಗಿದ್ದ ಗೌರಮ್ಮ(70) ಎನ್ನುವ ವೃದ್ಧೆ ಸೇರಿ 4 ಎಮ್ಮೆ ಅಸು ನೀಗಿದ್ದು, ಚಿಕ್ಕಸಾಗ್ಗೆರೆ ಗ್ರಾಮದಲ್ಲಿ ಖಾಸಗಿ ಜಮೀನಿನಲ್ಲಿ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ನಿಂದ ಕಂಬಕ್ಕೆ ಹಾದುಹೋಗಿದ್ದ ವಿದ್ಯುತ್ ತಂತಿ ನೆಲಕ್ಕೆ ತಾಕಿದಂತೆ ಜೋತು ಬಿದ್ದಿದ್ದರಿಂದ ಜಮೀನಿನಲ್ಲಿ ಹಾದು ಹೋಗುತ್ತಿದ್ದ ಎಮ್ಮೆ ಮತ್ತು ವೃದ್ಧೆ ವಿದ್ಯುತ್ ತಂತಿಯನ್ನು ಕಾಣದೆ ಮೊದಲು ಎಮ್ಮೆಯ ಕೊಂಬಿಗೆ ತಗುಲಿ ಹಾಕಿಕೊಂಡು ನಂತರ ವೃದ್ಧೆ ಮತ್ತು ಇತರೆ ಎಮ್ಮೆಗಳು ಸಾವನ್ನಪ್ಪಿವೆ.
ಸ್ಥಳಕ್ಕೆ ಶಾಸಕ ಡಾ. ಜಿ. ಪರಮೇಶ್ವರ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಅಧಿಕಾರಿಗಳು ಎಚ್ಚರ ವಹಿಸುವಂತೆ ಆದೇಶಿಸಿ ಪ್ರಕರಣವನ್ನು ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಂಡು ನೊಂದವರಿಗೆ ಪರಿಹಾg ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಘಟನಾ ಸ್ಥಳದಲ್ಲಿ ಮಾಜಿ ಶಾಸಕ ಸುಧಾಕರ್‍ಲಾಲ್, ತಹಸೀಲ್ದಾರ್ ನಾಹಿದಾ ಜಮ್‍ಜಮ್, ಸಿಪಿಐ ಸಿದ್ಧರಾಮೇಶ್ವರ, ಕೋಳಾಲ ಪಿಎಸ್‍ಐ ಮಹಾಲಕ್ಷ್ಮಮ್ಮ, ಬೆಸ್ಕಾಂ ಎಇಇ ಮಲಣ್ಣ, ಎಇ ಪ್ರಸನ್ನಕುಮಾರ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ