ಕೊರಟಗೆರೆ :
ದ್ವಿಚಕ್ರ ವಾಹನಕ್ಕೆ ಹಸು ಅಡ್ಡ ಬಂದ ಪರಿಣಾಮ ಸವಾರ ಆಯ ತಪ್ಪಿ ಟಾರ್ ರಸ್ತೆ ಮೇಲೆ ಬಿದ್ದು ತೀವ್ರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಕೊನೆ ಉಸಿರೆಳೆದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಬಳಿಯ ರೆಡ್ಡಿಕಟ್ಟೆ ಬಾರೆಯಲ್ಲಿ ಈ ದುರ್ಘಟನೆ ಜರಗಿದ್ದು, ಕೊರಟಗೆರೆ ಕೋಟೆ ಬೀದಿಯ ಶಿವಕುಮಾರ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮೃತರು ಹೊಳವನಹಳ್ಳಿ ಕಡೆಯಿಂದ ಕೊರಟಗೆರೆ ಮಾರ್ಗವಾಗಿ ಬರುತ್ತಿರುವಾಗ ಜಮೀನಿನಲ್ಲಿ ಮೇಯುತ್ತಿದ್ದ ಹಸು ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ರಸ್ತೆಗೆ ಅಡ್ಡವಾಗಿ ಬಂದಾಗ ದ್ವಿಚಕ್ರ ವಾಹನ ಸವಾರ ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ತೀವ್ರತರ ಪೆಟ್ಟಾಗಿತ್ತು. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು, ಬೆಂಗಳುರಿನ ನಿಮ್ಹಾನ್ಸ್‍ನಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದರಾದರೂ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್‍ಐ ನಾಗರಾಜು ಭೇಟಿ ನೀಡಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ