ಕೊರಟಗೆರೆ:  ಹೊಸವರ್ಷಕ್ಕೆ ಮಹಾಲಕ್ಷ್ಮೀ ಸನ್ನಿಧಾನಕ್ಕೆ ಭಕ್ತವೃಂದ

ಕೊರಟಗೆರೆ: 

      ಭಕ್ತರ ಬೇಡಿಕೆಯ ವರವನ್ನುಕರುಣಿಸುವ ಮಹಾಮಾತೇ ಕಲಿಯುವ ದೇವತೆ ಶ್ರೀಮಹಾಲಕ್ಷ್ಮೀ ದೇವಿಯ ಪುಣ್ಯಕ್ಷೇತ್ರವು ನಮ್ಮದೇಶ ಮತ್ತು ವಿದೇಶದಲ್ಲಿಯು ಸುಪ್ರಸಿದ್ದಿ ಪಡೆದಿದೆಎಂದು ಗೊರವನಹಳ್ಳಿ ಮಹಾಲಕ್ಷ್ಮೀ ಕಮಲ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಶ್ರೀಲಕ್ಷ್ಮೀಪ್ರಸಾದ್ ತಿಳಿಸಿದರು.

      ಕಲ್ಪತರು ಜಿಲ್ಲೆಯ ಕೊರಟಗೆರೆ ತಾಲೂಕಿನ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕಲಿಯುಗ ದೇವತೆ ಶ್ರೀಮಾತೆ ಕಮಲಮ್ಮನವರ 18ನೇ ವರ್ಷದಆರಾಧಾನ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

      ಕಮಲಮ್ಮ ಮಾತೇ ಮಾಡಿದ ಪವಾಡವೇಇಂದು ಲಕ್ಷಾಂತರಜನ ಭಕ್ತಾಧಿಗಳ ಪುಣ್ಯಕ್ಷೇತ್ರವಾಗಿದೆ. ಅಬ್ಬಯ್ಯನಕೆರೆಯಿಂದ ಮೂಲ ಶಿಲೆಯಾಗಿ ಒಲಿದು ಬಂದಿರುವ ಮಹಾಮಾತೆಅಬಯಹಸ್ತ ಮತ್ತು ವರದಹಸ್ತಇರುವ ಏಕೈಕ ಮಾತೆ ಮಹಾಲಕ್ಷ್ಮೀದೇವಿ. ಬೃಂದಾವನದಲ್ಲಿ ನೆಲೆಸಿರುವ ಕಮಲಮ್ಮ ಮಾತೆಯ ಸೇವೆ ಮಾಡುವ ಅವಕಾಶ ನಮ್ಮೇಲ್ಲರ ಪಾಲಿನ ಪುಣ್ಯಎಂದು ಹೇಳಿದರು.

      ಕಮಲಮ್ಮ ಮಾತೆಯ 18ನೇವರ್ಷದ ಆರಾಧನಾ ಮಹೋತ್ಸವಕಾರ್ಯಕ್ರಮದಲ್ಲಿ ವಿಶೇಷ ಪೂಜಾಕಾರ್ಯಕ್ರಮ, ಅಭೀಷೇಕ, ಮಹಾ ಮಂಗಳಾರತಿ, ಹೂವಿನ ಅಲಂಕಾರ ಮತ್ತು ದ್ವೀಪದಅಲಂಕಾರದಜೊತೆ ಮಾತೆಯ ಮೆರವಣಿಗೆಯು ಸಹ ಏರ್ಪಡಿಸಲಾಗಿದೆ. ದೇಶ-ವಿದೇಶದಿಂದ ಮಾತೆಯ ನಂಬಿ ಬರುವ ಭಕ್ತರಿಗೆ ಒಳಿತು ಉಂಟಾಗಿದೆಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಅರ್ಚಕರಾದ ಡಾ.ಪ್ರಸನ್ನಕುಮಾರ್, ಸುಬ್ರಹ್ಮಣ್ಯ, ಲಲಿತಮ್ಮ, ಶ್ರೀಪ್ರಸಾದ್, ರಾಮಮೂರ್ತಿ, ರಾಘವೇಂದ್ರ ಹೆಗಡೆ, ಸ್ಥಳೀಯರಾದ ವೀರರಾಜಅರಸ್, ನಾಗರಾಜು, ಪ್ರಸನ್ನ, ರುದ್ರೇಶ್, ಚಂದ್ರಶೇಖರ್, ಸೌಮ್ಯಸುಬ್ರಹ್ಮಣ್ಯ, ಮಂಜುನಾಥ, ಕುಮುದ, ಸಹನಾ ಸೇರಿದಂತೆ ನೂರಾರುಜನ ಭಕ್ತಾಧಿಗಳು ಇದ್ದರು.

     ಗೊರವನಹಳ್ಳಿ ಪುಣ್ಯಕ್ಷೇತ್ರದಲ್ಲಿ ಸಾವಿರಾರು ಭಕ್ತಾಧಿಗಳ ಹೊಸವರ್ಷದ ಸಂಭ್ರಮ ಮನೆಮಾಡಿದೆ. ಮಹಾಲಕ್ಷ್ಮೀದೇವಿಗೆ ಹೂವು ಮತ್ತು ದ್ವೀಪದಅಲಂಕಾರ ಮಾಡಲಾಗಿದೆ. ಶುಕ್ರವಾರ ಮುಂಜಾನೆಯಿಂದ ವಿಶೇಷ ಪೂಜೆ, ಹೂಮಹವನ, ಮಹಾಮಂಗಳಾರತಿ ನಡೆಯಿತು. 8 ಸಾವಿರಕ್ಕೂ ಅಧಿಕ ಭಕ್ತರುದೇವಿಯದರ್ಶನ ಮಾಡಿದ್ದಾರೆ.

– ಡಾ.ಪ್ರಸನ್ನಕುಮಾರ್. ಪ್ರಧಾನಅರ್ಚಕ. ಗೊರವನಹಳ್ಳ

ಮಹಾಲಕ್ಷ್ಮೀಕ್ಷೇತ್ರದಲ್ಲಿ ಭಕ್ತಾವಂದ :

      ಹೊಸವರ್ಷದ ಸಂಭ್ರಮದ ದಿನವೇ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದರ್ಶನಕ್ಕೆ ಸುಮಾರು 10ಸಾವಿರಕ್ಕೂ ಅಧಿಕ ಭಕ್ತಾಧಿಗಳ ಆಗಮಿಸಿದ್ದಾರೆ. ಭಕ್ತರ ಸಂಭ್ರಮದ ನಡುವೆಕೊರೊನಾರೋಗವೇ ಮಾಯವಾಗಿ ಮುಂಜಾನೆಯಿಂದ ರಾತ್ರಿಯವರೇಗೆ ದೇವಿಯದರ್ಶನ ಪಡೆದರು. ಕೊರಟಗೆರೆ ಸಿಪಿಐ ನಧಾಪ್, ಎಎಸೈ ಯೊಗೀಶ್, ಮಧುಚಂದ್ರ, ರಮೇಶ್ ನೇತೃತ್ವದಲ್ಲಿ ಬೀಗಿಬಂದೋಸ್ತ್ ಮಾಡಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link